ಕರ್ನಾಟಕ

karnataka

ETV Bharat / sports

ಕಿವೀಸ್​​ ದಾಳಿಗೆ ಪಾಕ್ ತತ್ತರ; ಮೊದಲ ದಿನವೇ 297ಕ್ಕೆ ಆಲೌಟ್ - ಪಾಕಿಸ್ತಾನ vs ನ್ಯೂಜಿಲ್ಯಾಂಡ್ ಲೈವ್​ ಸ್ಕೋರ್​

ಅಜರ್​ ಅಲಿ ಮತ್ತು ಮೊಹಮ್ಮದ್ ರಿಜ್ವಾನ್​ ಅವರ ಅರ್ಧಶತಕದ ನೆರವಿನಿಂದ ಮೊದಲ ಇನ್ನಿಂಗ್ಸ್​ನಲ್ಲಿ ಪಾಕಿಸ್ತಾನ ತಂಡ ಕಿವೀಸ್ ವಿರುದ್ಧ 297 ರನ್​ ಗಳಿಸಿ ಆಲೌಟ್​ ಆಗಿದೆ.

ನ್ಯೂಜಿಲ್ಯಾಂಡ್​ ಮತ್ತು ಪಾಕಿಸ್ತಾನ ಟೆಸ್ಟ್​
ನ್ಯೂಜಿಲ್ಯಾಂಡ್​ ಮತ್ತು ಪಾಕಿಸ್ತಾನ ಟೆಸ್ಟ್​

By

Published : Jan 3, 2021, 3:47 PM IST

ಕ್ರೈಸ್ಟ್​ಚರ್ಚ್​: ಅಜರ್​ ಅಲಿ ಮತ್ತು ನಾಯಕ ರಿಜ್ವಾನ್​ ಅವರ ಅರ್ಧಶತಕದ ಹೊರತಾಗಿಯೂ ಪಾಕಿಸ್ತಾನ ತಂಡ ನ್ಯೂಜಿಲ್ಯಾಂಡ್​ ವಿರುದ್ಧ 2ನೇ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲಿ 297 ರನ್​ಗಳಿಗೆ ಆಲೌಟ್​ ಆಗಿದೆ.

ಟಾಸ್​ ಗೆದ್ದ ನ್ಯೂಜಿಲ್ಯಾಂಡ್​ ಬೌಲಿಂಗ್ ಆಯ್ಕೆ ಮಾಡಿಕೊಂಡು ಅರಂಭದಲ್ಲೇ ಯಶಸ್ಸು ಸಾಧಿಸಿತು. ಪಾಕ್​ನ ಆರಂಭಿಕರಾದ ಶಾನ್​ ಮಸೂದ್​ (0), ಅಬೀದ್ ಅಲಿ (25) ಹಾಗೂ ಹ್ಯಾರೀಸ್​ ಸೊಹೈಲ್​ (1) ಹಾಗೂ ಫವಾದ್​ ಅಲಮ್​ (2) ಬಹುಬೇಗನೆ ಔಟಾಗಿ ಹೊರನಡೆದರು.

ಆದರೆ 5ನೇ ವಿಕೆಟ್​ನಲ್ಲಿ ಜೊತೆಯಾದ ಮಾಜಿ ನಾಯಕ ಅಜರ್​ ಮತ್ತು ಹಾಲಿ ನಾಯಕ ರಿಜ್ವಾನ್ ​94 ರನ್​ಗಳ ಜೊತೆಯಾಟ ನಡೆಸಿ ಚೇತರಿಕೆ ನೀಡಿದರು. ರಿಜ್ವಾನ್​ 71 ಎಸೆತಗಳಲ್ಲಿ 11 ಬೌಂಡರಿ ಸಹಿತ 61 ರನ್​ಗಳಿಸಿದರೆ, ಅಜರ್​ ಅಲಿ 172 ಎಸೆತಗಳಲ್ಲಿ 12 ಬೌಂಡರಿ ಸಹಿತ 93 ರನ್​ಗಳಿಸಿದರು. ಇವರ ನಂತರ ಫಹೀಮ್ ಅಶ್ರಫ್​ 48, ಜಫರ್​ ಗೊಹರ್​ 34 ರನ್​ಗಳಿಸಿ ತಂಡದ ಮೊತ್ತವನ್ನು 300ರ ಸನಿಹ ತಂದರು.

ನ್ಯೂಜಿಲ್ಯಾಂಡ್ ಪರ ಕೈಲ್​ ಜೆಮೀಸನ್​ 69ಕ್ಕೆ 5 ವಿಕೆಟ್​ ಪಡೆದರೆ, ಟ್ರೆಂಟ್​ ಬೌಲ್ಟ್​ ಹಾಗೂ ಟಿಮ್ ಸೌಥಿ ತಲಾ 2 ವಿಕೆಟ್​, ಮ್ಯಾಟ್​ ಹೆನ್ರಿ ಒಂದು ವಿಕೆಟ್​ ಪಡೆದರು.

ಇದನ್ನು ಓದಿ: ಅಶ್ವಿನ್-ಜಡೇಜಾ ಕಠಿಣ ಸ್ಪಿನ್ ಜೋಡಿ : ಕೇರಂ ಸ್ಪೆಷಲಿಸ್ಟ್ ವಿರುದ್ಧ ಸ್ಮಿತ್ ಗೆಲ್ಲುವ ವಿಶ್ವಾಸ- ಮ್ಯಾಥ್ಯೂ ವೇಡ್

ABOUT THE AUTHOR

...view details