ಕರ್ನಾಟಕ

karnataka

ETV Bharat / sports

ವಿಶ್ವಕಪ್ ತಂಡಕ್ಕೆ ಕರ್ನಾಟಕದ ವೇಗಿ... ಕೊಹ್ಲಿ ಬಾಯ್ಬಿಟ್ಟ ಆ ಕನ್ನಡಿಗ​ ಯಾರು ಗೊತ್ತಾ?

ಟೀಮ್ ಇಂಡಿಯಾ, ಇಂದೋರ್​ನ​​ ಹೋಳ್ಕರ್​ ಸ್ಟೇಡಿಯಂನಲ್ಲಿ ನಡೆದ ಶ್ರೀಲಂಕಾ ವಿರುದ್ಧ 2ನೇ ಪಂದ್ಯವನ್ನು 7 ವಿಕೆಟ್​ಗಳಿಂದ ಗೆದ್ದು ಸರಣಿಯನ್ನು 1-0ಯಲ್ಲಿ ಮುನ್ನಡೆ ಸಾಧಿಸಿದೆ. ವಿಜಯದ ಬಳಿಕ ಮಾತನಾಡಿದ ವಿರಾಟ್ ತಂಡದಲ್ಲಿ ಯುವ ಬೌಲರ್​ಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜೊತೆಗೆ​​ ವಿಶ್ವಕಪ್​ ತಂಡದಲ್ಲಿ ಆಶ್ಚರ್ಯಕರ ಆಯ್ಕೆಯೊಂದು ಇರಲಿದೆ ಎಂಬ ಸುಳಿವು ನೀಡಿದ್ದಾರೆ

By

Published : Jan 8, 2020, 2:21 PM IST

WCT20
WCT20

ಇಂದೋರ್​: ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ವಿಶ್ವಕಪ್​ಗೆ ಆಯ್ಕೆಯಾಗುವ ಬೌಲಿಂಗ್​ ವಿಭಾಗದಲ್ಲಿ ಆಶ್ಚರ್ಯಕರ ಆಯ್ಕೆಯೊಂದು ನಡೆಯಲಿದೆ ಎಂದು ಸುಳಿವು ನೀಡಿದ್ದಾರೆ.

ಟೀಮ್ ಇಂಡಿಯಾ ಇಂದೋರ್​ನ​​ ಹೋಳ್ಕರ್​ ಸ್ಟೇಡಿಯಂನಲ್ಲಿ ನಡೆದ ಶ್ರೀಲಂಕಾ ವಿರುದ್ಧ 2ನೇ ಪಂದ್ಯವನ್ನು 7 ವಿಕೆಟ್​ಗಳಿಂದ ಜಯಿಸಿ ಸರಣಿಯನ್ನು 1-0ಯಲ್ಲಿ ಮುನ್ನಡೆ ಸಾಧಿಸಿದೆ. ಈ ಸಂದರ್ಭದಲ್ಲಿ ಮಾತನಾಡಿದ ವಿರಾಟ್ ತಂಡದಲ್ಲಿ ಯುವ ಬೌಲರ್​ಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಪಡಿಸಿದರು. ಜೊತೆಗೆ​​ ವಿಶ್ವಕಪ್​ ತಂಡದಲ್ಲಿ ಆಶ್ಚರ್ಯಕರ ಆಯ್ಕೆಯೊಂದು ಇರಲಿದೆ ಎಂಬ ಸುಳಿವು ನೀಡಲಿದ್ದಾರೆ.

ಕರ್ನಾಟಕದ ವೇಗಿ ಪ್ರಸಿದ್​ ಕೃಷ್ಣ

ಕೊಹ್ಲಿ ಬಾಯಲ್ಲಿ ಬಂತು ಕನ್ನಡಿಗ ಪ್ರಸಿದ್​ ಕೃಷ್ಣ ಹೆಸರು

ನಾವು ಬೌಲಿಂಗ್​ನಲ್ಲಿ ಉತ್ತಮ ಕೌಶಲ್ಯವುಳ್ಳ ಬೌಲರ್​ ಒಬ್ಬರನ್ನ ಆಯ್ಕೆ ಮಾಡಲಿದ್ದೇವೆ. ಆತನೇ ವಿಶ್ವಕಪ್​ ತಂಡದ ಒಂದು ಅನಿರೀಕ್ಷಿತ ಆಯ್ಕೆಯಾಗಲಿದ್ದಾನೆ. ಉತ್ತಮ ಪೇಸ್​ ಜೊತೆಗೆ ಬೌನ್ಸ್ ಮಾಡುವ ಪ್ರಸಿದ್​ ಕೃಷ್ಣ ಅಂತಹವರಿಗೆ ತಂಡದಲ್ಲಿ ಅವಕಾಶ ನೀಡಲಾಗುವುದು ಎಂದು ಕನ್ನಡಿಗನ ಹೆಸರನ್ನು ತಿಳಿಸಿದ್ದಾರೆ.

​ಪ್ರಸಿದ್​​ ಕೃಷ್ಣ ಡೊಮೆಸ್ಟಿಕ್​ ಕ್ರಿಕೆಟ್​ನಲ್ಲಿ ಉತ್ತಮ ಬೌಲಿಂಗ್​ ನಡೆಸುತ್ತಿದ್ದಾರೆ. ಈ ರೀತಿಯ ಬೌಲರ್​ಗಳನ್ನು ಎಲ್ಲಾ ವಿಭಾಗದಲ್ಲಿ ಹೊಂದಿರುವುದು ಹೆಮ್ಮೆಪಡುವಂತಹ ವಿಷಯ. ವಿಶ್ವಕಪ್​ಕಡೆಗೆ ನೋಡುವುದಾದರೆ ನಮ್ಮ ಮುಂದೆ ಸಾಕಷ್ಟು ಆಯ್ಕೆಗಳಿವೆ ಎಂದು ಕೊಹ್ಲಿ ತಿಳಿಸಿದ್ದಾರೆ.

ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ನವದೀಪ್​ ಸೈನಿ ಬಗ್ಗೆಯೂ ಮಾತನಾಡಿದ ಕೊಹ್ಲಿ" ನವದೀಪ್​ ಏಕದಿನ ಕ್ರಿಕೆಟ್​ನಲ್ಲೂ ಉತ್ತಮ ಪ್ರದರ್ಶನ ನೀಡಿದರು. ಇನ್ನು ಟಿ-20- ಕ್ರಿಕೆಟ್​ನಲ್ಲಿ​ ದಿನದಿಂದ ದಿನಕ್ಕೆ ಅವರ ಆತ್ಮ ವಿಶ್ವಾಸ ಹೆಚ್ಚಾಗುತ್ತಿದೆ. ಆತ ವೇಗದ ಬೌಲಿಂಗ್ ​ಮೂಲಕ, ಬೌನ್ಸರ್​ ಮೂಲಕ ಹಾಗೂ ಯಾರ್ಕರ್​ಗಳ ಮೂಲಕ ವಿಕೆಟ್​ ಪಡೆಯುವುದನ್ನು ನೋಡುವುದಕ್ಕೆ ಹೆಮ್ಮೆಯಾಗುತ್ತದೆ ಎಂದು ತಮ್ಮ ಆರ್​ಸಿಬಿ ತಂಡದ ಸಹ ಆಟಗಾರನನ್ನು ಹಾಡಿ ಹೊಗಳಿದ್ದಾರೆ.

ABOUT THE AUTHOR

...view details