ಶಾರ್ಜಾ: ಬ್ಯಾಟಿಂಗ್ ಸ್ನೇಹಿ ಪಿಚ್ನಲ್ಲಿ ಅಬ್ಬರಿಸಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ರಾಹುಲ್ ಹಾಗೂ ಯುನಿವರ್ಸಲ್ ಬಾಸ್ ಕ್ರಿಸ್ ಗೇಲ್ ಅವರ ಅರ್ಧಶತಕದ ಹೊರೆತಾಗಿಯೂ ಕೊನೆಯ ಎಸೆತದಲ್ಲಿ ಜಯ ಸಾಧಿಸುವ ಮೂಲಕ ಸೋಲಿನ ಸರಪಳಿಯನ್ನು ಕಳಚಿದೆ.
ಆರ್ಸಿಬಿ ನೀಡಿದ 172 ರನ್ಗಳ ಗುರಿ ಬೆನ್ನತ್ತಿದ ಪಂಜಾಬ್ ತಂಡ ಕೊನೆಯ ಎಸೆತದಲ್ಲಿ ನಿಕೋಲಸ್ ಪೂರನ್ ಸಿಡಿಸಿದ ಸಿಕ್ಸರ್ ನೆರವಿನಿಂದ 8 ವಿಕೆಟ್ಗಳ ರೋಚಕ ಜಯ ಸಾಧಿಸುವ ಮೂಲಕ ಗೆಲುವಿನ ಹಾದಿಗೆ ಮರಳಿದೆ.
ಆರಂಭಿಕರಾಗಿ ಕಣಕ್ಕಿಳಿದ ಕರ್ನಾಟಕ ಜೋಡಿಯಾದ ಮಯಾಂಕ್ ಮತ್ತು ರಾಹುಲ್ ಮೊದಲ ವಿಕೆಟ್ಗೆ 78 ರನ್ಗಳ ಜೊತೆಯಾಟ ನೀಡಿದರು. ಮಯಾಂಕ್ 25 ಎಸೆತಗಳಲ್ಲಿ 4 ಬೌಂಡಿ ಹಾಗೂ 3 ಸಿಕ್ಸರ್ ಸಹಿತ 45 ರನ್ಗಳಿಸಿ ಚಹಾಲ್ ಓವರ್ನಲ್ಲಿ ಬೌಲ್ಡ್ ಆದರು.
13ನೇ ಆವೃತ್ತಿಯ ಪಂದ್ಯದಲ್ಲಿ ಇದೇ ಮೊದಲ ಬಾರಿಗೆ ಅವಕಾಶ ಪಡೆದ ಕ್ರಿಸ್ ಗೇಲ್ 8 ವರ್ಷದ ಬಳಿಕ ಆರಂಭಿಕ ಸ್ಥಾನದ ಬದಲಾಗಿ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದರೂ ಆಕರ್ಷಕ ಅರ್ಧಶತಕ ಬಾರಿಸಿದರು. ಯುನಿವರ್ಸಲ್ ಬಾಸ್ 2ನೇ ವಿಕೆಟ್ 93 ರನ್ಗಳ ಜೊತೆಯಾಟ ನಡೆಸಿ ತಂಡವನ್ನು ಗೆಲುವಿನ ಗಡಿಗೆ ತಂದು ನಿಲ್ಲಿಸಿ ಕೊನೆಯ ಓವರ್ನಲ್ಲಿ ರನ್ಔಟಾದರು.
ಔಟಾಗುವ ಮುನ್ನ ಅವರು 45 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 1 ಬೌಂಡರಿ ಸಹಿತ 63 ರನ್ಗಳಿಸಿದರೆ, ರಾಹುಲ್ 49 ಎಸೆತಗಳಲ್ಲಿ 1 ಬೌಂಡರಿ ಹಾಗೂ5 ಸಿಕ್ಸರ್ಗಳ ನೆರವಿನಿಂದ ರನ್, ಗೇಲ್ 1 ಬೌಂಡರಿ ಹಾಗೂ 5 ಸಿಕ್ಸರ್ಗಳ ಸಹಿತ ಔಟಾಗದೆ 61 ರನ್ಗಳಿಸಿ ಗೆಲುವಿನ ರೂವಾರಿಗಯಾದರು.
ಕೊನೆಯ ಓವರ್ ಡ್ರಾಮ
ಚಹಾಲ್ ಎಸೆದ ಕೊನೆಯ ಓವರ್ನಲ್ಲಿ ಪಂಜಾಬ್ ತಂಡಕ್ಕೆ ಗೆಲ್ಲಲು 2 ರನ್ಗಳ ಅಗತ್ಯವಿತ್ತು. ಮೊದಲ ಮೂರು ಎಸೆತಗಳನ್ನಾಡಿದ ಗೇಲ್ ಒಂದು ರನ್ಗಳಿಸಿದರೆ. 4 ಎಸೆತವನ್ನು ರಾಹುಲ್ ಡಾಟ್ ಮಾಡಿದರು. 5ನೇ ಎಸೆತದಲ್ಲಿ ಸಿಂಗಲ್ ತೆಗೆಯುವ ಬರದಲ್ಲಿ ಗೇಲ್ ಔಟಾದರು. ಆದರೆ ಕೊನೆಯ ಎಸೆತವನ್ನು ಸಿಕ್ಸರ್ಗಟ್ಟುವ ಮೂಲಕ ಪೂರನ್ ಪಂಜಾಬ್ಗೆ ಗೆಲುವು ತಂದುಕೊಟ್ಟರು.
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ್ದ ಆರ್ಸಿಬಿ ಬ್ಯಾಟಿಂಗ್ ಕ್ರಮಾಂಕದಲ್ಲಿ ಪ್ರಯೋಗ ಮಾಡಲು ಹೋಗಿ ಕೈಸುಟ್ಟುಕೊಂಡಿತು. ಎಬಿಡಿ ಬ್ಯಾಟಿಂಗ್ ಕ್ರಮಾಂಕದ ಬದಲಾದ ಕಾರಣ ಅವರ ಆಟ 2 ರನ್ಗಳಿಗೆ ಮುಕ್ತಾಯಿತು. ನಾಯಕ ಕೊಹ್ಲಿ 48 , ಶಿವಂ ದುಬೆ 23 ಹಾಗೂ ಕ್ರಿಸ್ ಮೋರಿಸ್ 25 ರನ್ಗಳಿಸಿ ತಂಡದ ಮೊತ್ತವನ್ನು 170ರ ಗಡಿ ದಾಟಿಸಿದರು.
ಪಂಜಾಬ್ ಪರ ಮುರುಗನ್ ಅಶ್ವಿನ್ 2, ಶಮಿ 2, ಜೋರ್ಡನ್ ಹಾಗೂ ಅರ್ಶ್ದೀಪ್ ಸಿಂಗ್ ತಲಾ ಇಂದು ವಿಕೆಟ್ ಪಡೆದು ಮಿಂಚಿದರು.