ಬೆಂಗಳೂರು: 2021ರ ಜನವರಿಯಿಂದ ನಡೆಯುವ ಸಯ್ಯದ್ ಮುಷ್ತಾಕ್ ಅಲಿ ಟಿ-20ಗಾಗಿ ಕೆಎಸ್ಸಿಎ ಕರ್ನಾಟಕ ತಂಡವನ್ನು ಪ್ರಕಟಿಸಿದೆ. ಮನೀಷ್ ಪಾಂಡೆ ಅನುಪಸ್ಥಿತಿಯಲ್ಲಿ ಕರುಣ್ ನಾಯರ್ ಅವರನ್ನು ನಾಯಕನನ್ನಾಗಿ ನೇಮಕ ಮಾಡಲಾಗಿದೆ.
ಸತತ ಎರಡು ಬಾರಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಎತ್ತಿ ಹಿಡಿದಿರುವ ಕರ್ನಾಟಕ ತಂಡ ಈ ಬಾರಿ ಸ್ಟಾರ್ ಆಟಗಾರರಾದ ಮಯಾಂಕ್ ಅಗರ್ವಾಲ್, ಕೆ.ಎಲ್.ರಾಹುಲ್ ಮತ್ತು ಮನೀಶ್ ಪಾಂಡೆ ಸೇವೆಯನ್ನು ತಪ್ಪಿಸಿಕೊಳ್ಳಲಿದೆ. ಮಯಾಂಕ್ ಮತ್ತು ರಾಹುಲ್ ರಾಷ್ಟ್ರೀಯ ತಂಡದ ಪರ ಆಡುತ್ತಿದ್ದರೆ, ಮನೀಶ್ ಪಾಂಡೆ ಭುಜದ ನೋವಿಗೆ ತುತ್ತಾಗಿರುವುದರಿಂದ ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಕರ್ನಾಟಕ ತಂಡ ಮತ್ತು ಸಿಬ್ಬಂದಿ ಓದಿ: ಐಸಿಸಿ ದಶಕದ ಟೆಸ್ಟ್ ತಂಡಕ್ಕೆ ಕೊಹ್ಲಿ ಕ್ಯಾಪ್ಟನ್: ತಂಡ ಹೀಗಿದೆ ನೋಡಿ..
ಐಪಿಎಲ್ ಸ್ಟಾರ್ ಆಟಗಾರರಾದ ದೇವದತ್ ಪಡಿಕ್ಕಲ್, ಶ್ರೇಯಸ್ ಗೋಪಾಲ್, ಕೆ. ಗೌತಮ್, ಪವನ್ ದೇಶಪಾಂಡೆ, ಪ್ರಸಿದ್ಧ ಕೃಷ್ಣ ಕೂಡ ಅವಕಾಶ ಪಡೆದಿದ್ದಾರೆ. ಪವನ್ ದೇಶಪಾಂಡೆಗೆ ಉಪನಾಯಕ ಪಟ್ಟ ನೀಡಲಾಗಿದೆ.
ಕರ್ನಾಟಕ ತಂಡ 2018/19 ಮತ್ತು 2019/20ರಲ್ಲಿ ಸತತ ಎರಡು ಬಾರಿ ಪ್ರಶಸ್ತಿ ಜಯಿಸಿದೆ.
20 ಸದಸ್ಯರ ಕರ್ನಾಟಕ ತಂಡ:
ಕರುಣ್ ನಾಯರ್ (ನಾಯಕ), ಪವನ್ ದೇಶಪಾಂಡೆ, ದೇವದತ್ ಪಡಿಕ್ಕಲ್, ರೋಹನ್ ಕದಂ, ಸಿದ್ಧಾರ್ಥ್ ಕೆ.ವಿ, ಶ್ರೀಜಿತ್ ಕೆ.ಎಲ್ (ವಿಕೆಟ್ ಕೀಪರ್), ಶರತ್ ಬಿ.ಆರ್(ವಿಕೆಟ್ ಕೀಪರ್), ಅನಿರುದ್ಧ ಜೋಶಿ, ಶ್ರೇಯಸ್ ಗೋಪಾಲ್, ಕೆ. ಗೌತಮ್, ಜಗದೀಶ್ ಸುಚಿತ್, ಪ್ರವೀಣ್ ದುಬೆ, ಅಭಿಮನ್ಯು ಮಿಥುನ್, ಪ್ರಸಿದ್ಧ ಕೃಷ್ಣ, ಪ್ರತೀಕ್ ಜೈನ್, ವಿ. ಕೌಶಿಕ್, ರೋನಿತ್ ಮೋರೆ, ದರ್ಶನ್ ಎಂಬಿ, ಮನೋಜ್ ಬಾಂಡಗೆ ಹಾಗು ಶುಭಾಂಗ್ ಹೆಗ್ಡೆ