ಕರ್ನಾಟಕ

karnataka

By

Published : Oct 7, 2019, 7:06 PM IST

ETV Bharat / sports

ಆಂಧ್ರ ವಿರುದ್ಧ ಜಯ.. ಅಂಕಪಟ್ಟಿಯಲ್ಲಿ ಕರ್ನಾಟಕ ಅಗ್ರಸ್ಥಾನ, ರನ್​ ಗಳಿಕೆಯಲ್ಲಿ ಪಾಂಡೆ ಫಸ್ಟ್​!

ವಿಜಯ್ ಹಜಾರೆ ಟ್ರೋಫಿಯಲ್ಲಿ ಗೆಲುವಿನ ಓಟ ಮುಂದುವರಿಸಿರುವ ಕರ್ನಾಟಕ ತಂಡ ಇಂದಿನ ಪಂದ್ಯದಲ್ಲಿ ಆಂಧ್ರಪ್ರದೇಶ ತಂಡವನ್ನು ಮಣಿಸಿ ಪಂಜಾಬ್​ ತಂಡದೊಂದಿಗೆ ಅಗ್ರಸ್ಥಾನ ಹಂಚಿಕೊಂಡಿದೆ.

Karnataka

ಬೆಂಗಳೂರು: ವಿಜಯ್ ಹಜಾರೆ ಟ್ರೋಫಿಯಲ್ಲಿ ಮನೀಷ್​ ಪಾಂಡೆ ನೇತೃತ್ವದ ಕರ್ನಾಟಕ ತಂಡ ಆಂಧ್ರಪ್ರದೇಶ ತಂಡವನ್ನು ಮಣಿಸಿ ಪಂಜಾಬ್​ ತಂಡದೊಂದಿಗೆ ಅಗ್ರಸ್ಥಾನ ಹಂಚಿಕೊಂಡಿದೆ.

ಟಾಸ್​ ಸೋತು ಬ್ಯಾಟಿಂಗ್​ ಆರಂಭಿಸಿದ ರಾಜ್ಯ ತಂಡಕ್ಕೆ ರಾಹುಲ್​(33) ಹಾಗೂ ದೇವದತ್​ ಪಡಿಕ್ಕಲ್(44) ಮೊದಲ ವಿಕೆಟ್​ಗೆ 68 ರನ್​ ಸೇರಿಸಿ ಉತ್ತಮ ಆರಂಭ ನೀಡಿದ್ರು. ನಂತರ ಬಂದ ಕರುಣ್​ ನಾಯರ್ ​24 ರನ್​ಗಳಿಸಿ ಔಟಾದರು.

ತಮ್ಮ ಎಂದಿನ ಫಾರ್ಮ್​ ಮುಂದುವರಿಸಿದ ಪಾಂಡೆ(50) ಆಕರ್ಷಕ ಅರ್ಧಶತಕ ಬಾರಿಸಿ ಮಿಂಚಿದರೆ, ಕೊನೆಯಲ್ಲಿ ಅಬ್ಬರಿಸಿದ ಕೀಪರ್​ ಶರತ್​ 38 ಎಸೆತಗಳಲ್ಲಿ 45, ಕೆ.ಗೌತಮ್ 16 ಎಸೆತಗಳಲ್ಲಿ 4 ಭರ್ಜರಿ ಸಿಕ್ಸರ್​ ಸಹಿತ 34 ರನ್​ಗಳಿಸಿ 278 ರನ್​ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು.

279 ರನ್​ಗಳ ಗುರಿ ಪಡೆದ ಆಂಧ್ರಪ್ರದೇಶ ತಂಡ 46.5 ಓವರ್​ಗಳಲ್ಲಿ ಆಲೌಟ್​ ಆಗುವ ಮೂಲಕ 53 ರನ್​ಗಳ ಸೋಲುಕಂಡಿತು. ಶ್ರೇಯಸ್​ ಗೋಪಾಲ್​ 4, ಪ್ರಸಿದ್​ ಕೃಷ್ಣ 3 ವಿಕೆಟ್​ ಪಡೆದು ಮಿಂಚಿದರೆ, ಇವರಿಗೆ ಸಾಥ್​ ನೀಡಿದ ಮಿಥುನ್​, ಗೌತಮ್​ ಹಾಗೂ ಮೋರೆ ತಲಾ ಒಂದು ವಿಕೆಟ್​ ಪಡೆದು ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. 78 ರನ್​ಗಳಿಸಿದ ಪ್ರಶಾಂತ್​ ಕುಮಾರ್​ ಗರಿಷ್ಠ ಸ್ಕೋರರ್​ ಎನಿಸಿಕೊಂಡರು. ಈ ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ ಪಂಜಾಬ್​ ತಂಡದೊಂದಿಗೆ ಅಗ್ರಸ್ಥಾನಕ್ಕೇರಿತು. ಆದರೆ, ರನ್​ರೇಟ್​ ಆಧಾರದ ಮೇಲೆ ಪಂಜಾಬ್​ ಮುಂದಿದೆ.

ಪಾಂಡೆ ಗರಿಷ್ಠ ರನ್​:

ವಿಜಯ ಹಜಾರೆ ಆರಂಭದ ಪಂದ್ಯದಿಂದಲೂ ಉತ್ತಮ ಬ್ಯಾಟಿಂಗ್​ ಕಾಯ್ದುಕೊಂಡಿರುವ ಮನೀಷ್​ ಪಾಂಡೆ 342 ರನ್​ಗಳಿಸುವ ಟೂರ್ನಿಯಲ್ಲೇ ಗರಿಷ್ಠ ಸ್ಕೋರರ್​ ಎನಿಸಿಕೊಂಡಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ 3 ಅರ್ಧಶತಕ ಸೇರಿದೆ.

ABOUT THE AUTHOR

...view details