ಕರ್ನಾಟಕ

karnataka

ದಶಕದ ಬಳಿಕ ಕರಾಚಿ ಮೈದಾನದಲ್ಲಿ ಪಂದ್ಯ ಆಯೋಜನೆ: ಲಂಕನ್ನರಿಗೆ ಪಾಕ್ ಸವಾಲು

ಕರಾಚಿ ಮೈದಾನದಲ್ಲಿ ಶುಕ್ರವಾರ ನಡೆಯುವ ಏಕದಿನ ಪಂದ್ಯದ ಮೂಲಕ ಹೊಸ ಇತಿಹಾಸ ಆರಂಭವಾಗಲಿದೆ. ಸದ್ಯ ನಮ್ಮ ದೇಶದ ಪ್ರವಾಸ ಕೈಗೊಂಡಿರುವ ಲಂಕಾ ತಂಡಕ್ಕೆ ಧನ್ಯವಾದ ಸಲ್ಲಿಸಬೇಕು ಎಂದು ಪಾಕ್ ನಾಯಕ ಸರ್ಫರಾಜ್ ಖಾನ್ ಹೇಳಿದ್ದಾರೆ.

By

Published : Sep 27, 2019, 11:07 AM IST

Published : Sep 27, 2019, 11:07 AM IST

ETV Bharat / sports

ದಶಕದ ಬಳಿಕ ಕರಾಚಿ ಮೈದಾನದಲ್ಲಿ ಪಂದ್ಯ ಆಯೋಜನೆ: ಲಂಕನ್ನರಿಗೆ ಪಾಕ್ ಸವಾಲು

ದಶಕದ ಬಳಿಕ ಕರಾಚಿ ಮೈದಾನದಲ್ಲಿ ಪಂದ್ಯ ಆಯೋಜನೆ

ಕರಾಚಿ: ಭಯೋತ್ಪಾದಕರ ಬೆದರಿಕೆ ಹಾಗೂ ಉಗ್ರದಾಳಿಯ ಕರಿನೆರಳಲ್ಲೇ ಪಾಕಿಸ್ತಾನದ ಕರಾಚಿ ಮೈದಾನದಲ್ಲಿ ಬರೋಬ್ಬರಿ ಹತ್ತು ವರ್ಷದ ಬಳಿಕ ಇಂದು ಪಾಕಿಸ್ತಾನ-ಶ್ರೀಲಂಕಾ ನಡುವೆ ಏಕದಿನ ಪಂದ್ಯ ನಡೆಯಲಿದೆ.

ಕರಾಚಿ ಮೈದಾನದಲ್ಲಿ ಶುಕ್ರವಾರ ನಡೆಯುವ ಏಕದಿನ ಪಂದ್ಯದ ಮೂಲಕ ಹೊಸ ಇತಿಹಾಸ ಆರಂಭವಾಗಲಿದೆ. ಸದ್ಯ ನಮ್ಮ ದೇಶದ ಪ್ರವಾಸ ಕೈಗೊಂಡಿರುವ ಲಂಕಾ ತಂಡಕ್ಕೆ ಧನ್ಯವಾದ ಸಲ್ಲಿಸಬೇಕು ಎಂದು ಪಾಕ್ ನಾಯಕ ಸರ್ಫರಾಜ್ ಖಾನ್ ಹೇಳಿದ್ದಾರೆ.

2009ರಲ್ಲಿ ಲಾಹೋರ್​ನಲ್ಲಿ ಶ್ರೀಲಂಕಾ ತಂಡದ ಮೇಲೆ ಉಗ್ರರ ದಾಳಿ ನಡೆದಿತ್ತು. ಘಟನೆಯಲ್ಲಿ ಎಂಟು ಮಂದಿ ಮೃತಪಟ್ಟು ಹಲವರಿಗೆ ಗಾಯಗಳಾಗಿತ್ತು. ಲಂಕಾ ಆಟಗಾರರು ಸಾವಿನ ದವಡೆಯಿಂದ ಪಾರಾಗಿದ್ದರು. ಈ ಘಟನೆಯ ಬಳಿಕ ಕ್ರಿಕೆಟ್ ಮಾನ್ಯತೆ ಪಡೆದ ರಾಷ್ಟ್ರಗಳು ಪಾಕ್ ಪ್ರವಾಸ ಕೈಗೊಳ್ಳಲು ಹಿಂದೇಟು ಹಾಕಿದ್ದವು.

ಈ ಉಗ್ರದಾಳಿಯ ಬಳಿಕ ಯುಎಇ ದೇಶವನ್ನು ಪಾಕಿಸ್ತಾನ ತವರು ಮೈದಾನ ಎಂದು ಪರಿಗಣಿಸಿ ಕೆಲ ದೇಶಗಳು ಪಾಕ್ ವಿರುದ್ಧ ಆಡಿದ್ದವು. 2015ರಲ್ಲಿ ಜಿಂಬಾಬ್ವೆ ಮೊದಲ ದೇಶವಾಗಿ ಪಾಕ್ ಪ್ರವಾಸ ಕೈಗೊಂಡಿತ್ತು.

ಟ್ರೋಫಿಯೊಂದಿಗೆ ಉಭಯ ತಂಡಗಳ ನಾಯಕರು

ಇಂದಿನಿಂದ ಆರಂಭವಾಗಲಿರುವ ಲಂಕಾ ಟೂರ್​​ನಲ್ಲಿ ಮೂರು ಏಕದಿನ ಹಾಗೂ ಮೂರು ಟಿ20 ಪಂದ್ಯಗಳು ನಡೆಯಲಿವೆ. ಹಾಲಿ ನಾಯಕ ಧಿಮುತ್ ಕರುಣಾರತ್ನೆ ಹಿಂದೆ ಸರಿದ ಹಿನ್ನೆಲೆಯಲ್ಲಿ ಲಹಿರು ತಿರಿಮನ್ನೆ ಲಂಕಾ ತಂಡವನ್ನು ಮುನ್ನಡೆಸಲಿದ್ದಾರೆ.

ಆಟಗಾರರಿಗೆ ಬಿಗಿ ಭದ್ರತೆ:
ಪ್ರವಾಸಕ್ಕೂ ಕೆಲ ದಿನಗಳ ಮುಂಚೆ ಬೆದರಿಕೆ ಕರೆ ಹಾಗೂ ಭದ್ರತೆ ವಿಷಯವನ್ನಿಟ್ಟುಕೊಂಡ ಲಂಕಾ ಕ್ರಿಕೆಟ್‌ ಬೋರ್ಡ್​ ಪ್ರವಾಸದಿಂದ ಹಿಂದೆ ಸರಿಯುವುದಾಗಿ ಹೇಳಿತ್ತು. ಜೊತೆಗೆ ಲಂಕಾದ 10 ಆಟಗಾರರು ಪ್ರವಾಸ ಕೈಗೊಳ್ಳಲು ಹಿಂದೇಟು ಹಾಕಿದ್ದರು.

ಕರಾಚಿ ಮೈದಾನ

ಆ ಬಳಿಕ ಆಟಗಾರರಿಗೆ ಸೂಕ್ತ ಭದ್ರತೆ ನೀಡುವ ಭರವಸೆ ನೀಡಿದ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಭದ್ರತಾ ಸಿಬ್ಬಂದಿ ಸಂಖ್ಯೆಯನ್ನು ಹೆಚ್ಚಳ ಮಾಡಿತ್ತು. ಸದ್ಯ ಲಂಕಾ ಆಟಗಾರರು ಉಳಿದುಕೊಂಡಿರುವ ಹೋಟೆಲ್ ಸುತ್ತಮುತ್ತ ಎರಡು ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.

ABOUT THE AUTHOR

...view details