ಕರ್ನಾಟಕ

karnataka

ರಣಜಿಯಲ್ಲಿ 21 ವರ್ಷ ಹಿಂದಿನ ದಾಖಲೆ ಬ್ರೇಕ್​​​ ಮಾಡಿದ ಜಯದೇವ್​ ಉನಾದ್ಕಟ್​!

By

Published : Mar 4, 2020, 7:58 PM IST

2019-20ರ ರಣಜಿ ಸೀಸನ್​ನಲ್ಲಿ 65 ವಿಕೆಟ್ ಪಡೆಯುವ ಮೂಲಕ ಜಯದೇವ್​ ಉನಾದ್ಕಟ್​ 21 ವರ್ಷಗಳ ಹಿಂದಿನ ದಾಖಲೆ ಬ್ರೇಕ್ ಮಾಡಿದ್ದಾರೆ.

ಜಯದೇವ್​ ಉನಾದ್ಕಟ್​
ಜಯದೇವ್​ ಉನಾದ್ಕಟ್​

ರಾಜ್​ಕೋಟ್​: ಸೌರಾಷ್ಟ್ರ ತಂಡದ ನಾಯಕ ಜಯದೇವ್​ ಉನಾದ್ಕಟ್​ 2020ರ ರಣಜಿ ಟ್ರೋಫಿಯಲ್ಲಿ 65 ವಿಕೆಟ್​ ಪಡೆಯುವ ಮೂಲಕ 21 ವರ್ಷಗಳ ಹಿಂದಿನ ದಾಖಲೆಯನ್ನು ಬ್ರೇಕ್​ ಮಾಡಿದ್ದಾರೆ.

ಎಡಗೈ ವೇಗಿ 2019-20 ರಣಜಿ ಆವೃತ್ತಿಯಲ್ಲಿ ಆರಂಭದಿಂದಲೂ ಅದ್ಭುತ ಬೌಲಿಂಗ್​ ಪ್ರದರ್ಶನ ತೋರುತ್ತಿದ್ದಾರೆ. ಸೆಮಿಫೈನಲ್​ನಲ್ಲೂ ಗುಜರಾತ್ ವಿರುದ್ಧ ಎರಡು ಇನ್ನಿಂಗ್ಸ್​ ಸೇರಿ 10 ವಿಕೆಟ್​ ಪಡೆದಿದ್ದ ಅವರು, ಒಟ್ಟಾರೆ ಸೀಸನ್​ನಲ್ಲಿ 65 ವಿಕೆಟ್ ಪಡೆದಿದ್ದಾರೆ. ಈ ಮೂಲಕ ರಣಜಿ ಇತಿಹಾಸದಲ್ಲಿ ಒಂದೇ ಸೀಸನ್​ನಲ್ಲಿ ಅತಿ ಹೆಚ್ಚು ವಿಕೆಟ್​ ಪಡೆದ ವೇಗದ ಬೌಲರ್​ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.

ಇದಕ್ಕು ಮೊದಲು 1998/99ರ ಸೀಸನ್​ನಲ್ಲಿ ಕರ್ನಾಟಕದ ದೊಡ್ಡ ಗಣೇಶ್​ 62 ವಿಕೆಟ್​​ ಪಡೆದು ದಾಖಲೆ ಬರೆದಿದ್ದರು. ಆದರೆ ಒಟ್ಟಾರೆ ಸೀಸನ್​ನಲ್ಲಿ ಹೆಚ್ಚು ವಿಕೆಟ್​ ಪಡೆದಿರುವ ದಾಖಲೆ ಬಿಹಾರದ ಅಶುತೋಷ್​​ ಅಮನ್​ ಹೆಸರಿನಲ್ಲಿದೆ. ಅವರು 2018-19ರಲ್ಲಿ 65 ವಿಕೆಟ್​ ಪಡೆದು ದಾಖಲೆ ಬರೆದಿದ್ದರು.

ಉನಾದ್ಕಟ್​ ನೇತೃತ್ವದ ಸೌರಾಷ್ಟ್ರ ಈಗಾಗಲೇ ಫೈನಲ್​ ತಲುಪಿದ್ದು, ಇನ್ನು ಕೇವಲ 4 ವಿಕೆಟ್ ಪಡೆದರೆ ರಣಜಿ ಇತಿಹಾಸದಲ್ಲೇ ಅತಿ ಹೆಚ್ಚು ವಿಕೆಟ್​ ಪಡೆದ ಬೌಲರ್​ ಎನಿಸಿಕೊಳ್ಳಲಿದ್ದಾರೆ.​

ABOUT THE AUTHOR

...view details