ಕರ್ನಾಟಕ

karnataka

ETV Bharat / sports

ಧೋನಿ ಸ್ಪರ್ಧಾತ್ಮಕ ಕ್ರಿಕೆಟ್​ಗೆ ಮರಳುತ್ತಿರುವುದು 2020ರ ಐಪಿಎಲ್​ನ ವಿಶೇಷತೆ: ವಿರೇಂದ್ರ ಸೆಹ್ವಾಗ್​ - ಚೆನ್ನೈಸೂಪರ್​ ಕಿಂಗ್ಸ್​

ಎಂಎಸ್​ ಧೋನಿ 2019ರ ವಿಶ್ವಕಪ್​ ಸೆಮಿಫೈನಲ್​ ಬಳಿಕೆ ಸ್ಪರ್ಧಾತ್ಮಕ ಕ್ರಿಕೆಟ್​ನಲ್ಲಿ ಭಾಗವಹಿಸಿಲ್ಲ. ಇನ್ನು ಟಿ20 ಕ್ರಿಕೆಟ್​ಗೆ ಮರಳಬೇಕೆಂದುಕೊಂಡಿದ್ದ ಅವರಿಗೆ ವಿಶ್ವಕಪ್​ ಮುಂದೂಡಿದ್ದರಿಂದ ಆಗಸ್ಟ್​ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ದಿಢೀರ್​ ನಿವೃತ್ತಿ ಘೋಷಿಸಿದ್ದರು. ಇದೀಗ ಸುಮಾರು 14 ತಿಂಗಳ ನಂತರ ಸ್ಪರ್ಧಾತ್ಮಕ ಕ್ರಿಕೆಟ್​ಗೆ ಮರಳುತ್ತಿರುವುದಕ್ಕೆ ಈ ಬಾರಿಯ ಐಪಿಎಲ್​ ಹೆಚ್ಚು ವಿಶೇಷ ಪಡೆದಿದೆ ಎಂದಿದ್ದಾರೆ ಸೆಹ್ವಾಗ್.

ಐಪಿಎಲ್​ 2020
ಎಂಎಸ್​ ಧೋನಿ

By

Published : Sep 16, 2020, 6:32 PM IST

ನವದೆಹಲಿ:ಭಾರತ ತಂಡದ ಮಾಜಿ ನಾಯಕ ಧೋನಿ ಸ್ಪರ್ಧಾತ್ಮ ಕ್ರಿಕೆಟ್​ಗೆ ಮರಳುತ್ತಿರುವುದು 2020ರ ಐಪಿಎಲ್​ಗೆ ಹೆಚ್ಚಿನ ವಿಶೇಷತೆ ತಂದುಕೊಡಲಿದೆ ಎಂದು ಭಾರತ ತಂಡದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್​ ಹೇಳಿದ್ದಾರೆ.

ಎಂಎಸ್​ ಧೋನಿ 2019ರ ವಿಶ್ವಕಪ್​ ಸೆಮಿಫೈನಲ್​ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್​ನಲ್ಲಿ ಭಾಗವಹಿಸಿಲ್ಲ. ಇನ್ನು ಟಿ20 ಕ್ರಿಕೆಟ್​ಗೆ ಮರಳಬೇಕೆಂದುಕೊಂಡಿದ್ದ ಅವರಿಗೆ ವಿಶ್ವಕಪ್​ ಮುಂದೂಡಿದ್ದರಿಂದ ಆಗಸ್ಟ್​ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ದಿಢೀರ್​ ನಿವೃತ್ತಿ ಘೋಷಿಸಿದ್ದರು. ಇದೀಗ ಸುಮಾರು 14 ತಿಂಗಳ ನಂತರ ಸ್ಪರ್ಧಾತ್ಮಕ ಕ್ರಿಕೆಟ್​ಗೆ ಮರಳುತ್ತಿರುವುದಕ್ಕೆ ಸೆಹ್ವಾಗ್​ ಈ ಬಾರಿಯ ಐಪಿಎಲ್​ ಹೆಚ್ಚೇ ವಿಶೇಷ ಎಂದಿದ್ದಾರೆ.

ನನ್ನ ಪ್ರಕಾರ ಈ ಟೂರ್ನಾಮೆಂಟ್​ ಪ್ರತಿಯೊಬ್ಬರಿಗೂ ಎಕ್ಸ್​ಟ್ರಾ ಸ್ಪೆಷಲ್​. ಆಟಗಾರನಾಗಿ ಅಥವಾ ವೀಕ್ಷಕನಾಗಿ ಧೋನಿ ಮತ್ತೆ ಕ್ರಿಕೆಟ್​ ಮೈದಾನಕ್ಕೆ ಮರಳುತ್ತಿರುವುದನ್ನು ನೋಡಲು ತುಂಬಾ ಸಂತೋಷವಾಗುತ್ತಿದೆ ಎಂದು ಸಹಾ ನಿರೂಪಕನಾಗಿರುವ ಫ್ಲಿಪ್‌ಕಾರ್ಟ್​ನ 'ಪವರ್‌ ಪ್ಲೇ ವಿತ್ ಚಾಂಪಿಯನ್ಸ್‌ ಶೋ'ನಲ್ಲಿ ಸೆಹ್ವಾಗ್ ಹೇಳಿದ್ದಾರೆ.

ಇನ್ನು ದೀರ್ಘ ಸಮಯದ ನಂತರ ಕ್ರಿಕೆಟ್​ ಐಪಿಎಲ್ ಮೂಲಕ ಮರಳುತ್ತಿರುವುದರಿಂದ ಮತ್ತೆ ಅಭಿಮಾನಿಗಳಿಗೆ ಸಾಕಷ್ಟು ಆನಂದವನ್ನು ತಂದುಕೊಡಲಿದೆ. ಏಕೆಂದರೆ ಕೋವಿಡ್​ ಹಿನ್ನೆಲೆ ಕಳೆದ 6 ತಿಂಗಳಿಂದ ಯಾವುದೇ ಮಾದರಿಯ ಕ್ರಿಕೆಟ್​ ನಡೆಯದಿರುವುದರಿಂದ ಅಭಿಮಾನಿಗಳು ಐಪಿಎಲ್​ಗಾಗಿ ಕಾತುರದಿಂದ ಕಾಯುತ್ತಿದ್ದಾರೆ ಎಂದು ಸೆಹ್ವಾಗ್​ ಅಭಿಪ್ರಾಯಪಟ್ಟಿದ್ದಾರೆ.

13ನೇ ಆವೃತ್ತಿಯ ಐಪಿಎಲ್​ ಸೆಪ್ಟೆಂಬರ್​ 19ರಿಂದ ಧೋನಿ ನೇತೃತ್ವದ ಸಿಎಸ್​ಕೆ ಹಾಗೂ ಮುಂಬೈ ಇಂಡಿಯನ್ಸ್​ ನಡುವೆ ಆರಂಭವಾಗಲಿದೆ.

ABOUT THE AUTHOR

...view details