ಕರ್ನಾಟಕ

karnataka

ETV Bharat / sports

ವಿಶ್ವಕಪ್​​ನಲ್ಲಿ ಕೊಹ್ಲಿ ಪಡೆಯ ಗೆಲುವಿನ ನಾಗಾಲೋಟ.... ದಿಗ್ವಿಜಯದ ಹಿಂದಿನ ಕಾರಣ ಬಿಚ್ಚಿಟ್ಟ ಅಫ್ರಿದಿ! - ಪಾಕಿಸ್ತಾನ ಕ್ರಿಕೆಟ್​

ವಿಶ್ವಕಪ್​​ನಲ್ಲಿ ವಿರಾಟ್​ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ನೀಡುತ್ತಿದ್ದು, ಅದಕ್ಕೆ ಏನು ಕಾರಣ ಎಂಬ ಮಾಹಿತಿಯನ್ನ ಪಾಕ್​ ತಂಡದ ಮಾಜಿ ಆಲ್​ರೌಂಡರ್​​ ಶಾಹಿದ್​ ಅಫ್ರಿದಿ ಹೊರಹಾಕಿದ್ದಾರೆ.

ಟೀಂ ಇಂಡಿಯಾ

By

Published : Jun 18, 2019, 4:04 PM IST

ಕರಾಚಿ:ವಿಶ್ವಕಪ್​​ನಲ್ಲಿ ಕೊಹ್ಲಿ ಪಡೆ ಗೆಲುವಿನ ನಾಗಾಲೋಟ ಮುಂದುವರಿಸಿದ್ದು, ಈಗಾಗಲೇ ತಾನಾಡಿರುವ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿದೆ. ಕಳೆದ ಭಾನುವಾರ ಪಾಕ್​ ವಿರುದ್ಧ ನಡೆದ ಮಹತ್ವದ ಪಂದ್ಯದಲ್ಲೂ ಟೀಂ ಇಂಡಿಯಾ ಗೆಲುವಿನ ನಗೆ ಬೀರಿದ್ದು, ಅದಕ್ಕೆ ಕಾರಣ ಏನು ಎಂಬ ಮಾಹಿತಿಯನ್ನ ಇದೀಗ ಪಾಕ್​ನ ಮಾಜಿ ಆಲ್​ರೌಂಡರ್​ ಹೊರಹಾಕಿದ್ದಾರೆ.

ಟೀಂ ಇಂಡಿಯಾ ವಿಶ್ವಕಪ್​​ನಲ್ಲಿ ಎಲ್ಲ ವಿಭಾಗಗಳಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದ್ದು,ಅದಕ್ಕೆ ಮುಖ್ಯ ಕಾರಣವಾಗಿರುವುದು ಇಂಡಿಯನ್​ ಪ್ರೀಮಿಯರ್​ ಲೀಗ್​ ಎಂದು ಟ್ವೀಟ್ ಮಾಡಿದ್ದಾರೆ. ಕೊಹ್ಲಿ ಪಡೆಯಿಂದ ವಿಶ್ವಕಪ್​​ನಲ್ಲಿ ಅದ್ಭುತ ಕ್ರಿಕೆಟ್​ ಮೂಡಿ ಬರುತ್ತಿದ್ದು, ಬ್ಯಾಟಿಂಗ್​ ಹಾಗೂ ಬೌಲಿಂಗ್​ ಕಲೆ ಎಲ್ಲ ಆಟಗಾರರಲ್ಲೂ ಕರಗತವಾಗಿದೆ ಎಂದು ತಿಳಿಸಿದ್ದಾರೆ.

ಶಾಹಿದ್​ ಆಫ್ರಿದಿ

ಟೀಂ ಇಂಡಿಯಾ ಪ್ರಥಮ ದರ್ಜೆ ಕ್ರಿಕೆಟ್​ಗೂ ಹೆಚ್ಚಿನ ಗಮನ ಹರಿಸುತ್ತಿದ್ದು, ಪಾಕಿಸ್ತಾನದಲ್ಲಿ ಪ್ರಥಮ ದರ್ಜೆ ಕ್ರಿಕೆಟ್​ಗಾಗಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾಗಿ ಟೀಂ ಇಂಡಿಯಾ ಸೇರಿಕೊಳ್ಳುತ್ತಿರುವ ಪ್ಲೇಯರ್ಸ್​ ಅದ್ಭುತ ಪ್ರದರ್ಶನ ನೀಡಲು ಸಾಧ್ಯವಾಗುತ್ತಿದೆ ಎಂದು ಹೇಳಿದ್ದಾರೆ. ಕಳೆದ ಭಾನುವಾರ ನಡೆದ ವಿಶ್ವಕಪ್​ನ ಇಂಡಿಯಾ - ಪಾಕ್​ ಪಂದ್ಯದಲ್ಲಿ ಕೊಹ್ಲಿ ಪಡೆ 89 ರನ್​ಗಳ ಗೆಲುವಿನ ನಗೆ ಬೀರಿತು.

ABOUT THE AUTHOR

...view details