ನವದೆಹಲಿ: ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ಗಾಗಿ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (ಎಸ್‌ಒಪಿ) ಅನ್ನು ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಬಹಿರಂಗಪಡಿಸಿದೆ. ಎಸ್‌ಒಪಿ ಪ್ರಕಾರ, ಆಟಗಾರರು ಮತ್ತು ಸಿಬ್ಬಂದಿಯ ಕುಟುಂಬಗಳು ಅವರೊಂದಿಗೆ ಸೇರಬಹುದು. ಆದರೆ, ಅವರಿಗೆ ತಂಡದ ಬಸ್‌ನಲ್ಲಿ ಪ್ರಯಾಣಿಸಲು ಅವಕಾಶ ಇರುವುದಿಲ್ಲ.
ಐಪಿಎಲ್ ಮಾರ್ಗಸೂಚಿ ಬಿಡುಗಡೆ ಮಾಡಿದ ಬಿಸಿಸಿಐ: ಇಷ್ಟೆಲ್ಲ ನಿಯಮ ಪಾಲಿಸಲೇಬೇಕು - 2020 ಇಂಡಿಯನ್ ಪ್ರೀಮಿಯರ್ ಲೀಗ್
2020ರ ಐಪಿಎಲ್ ಟೂರ್ನಿಗಾಗಿ ಬಿಸಿಸಿಐ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ಬಿಡುಗಡೆ ಮಾಡಿದೆ.
ಐಪಿಎಲ್ ಮಾರ್ಗಸೂಚಿ ಬಿಡುಗಡೆ ಮಾಡಿದ ಬಿಸಿಸಿಐ
16 ಪುಟಗಳ ದಾಖಲೆ ಬಿಡುಗಡೆ ಮಾಡಿರುವ ಬಿಸಿಸಿಐ, ಟಾಸ್ ಸಮಯದಲ್ಲಿ ಎಲೆಕ್ಟ್ರಾನಿಕ್ ಟೀಮ್ ಶೀಟ್‌ಗಳನ್ನು ಬಳಸುವಂತೆ ಎಲ್ಲ ತಂಡಗಳನ್ನು ಕೇಳಿಕೊಂಡಿದೆ.
ವ್ಯಕ್ತಿಗತ ಅಂತರವನ್ನು ಕಾಪಾಡಿಕೊಳ್ಳಲು ಎಲ್ಲ ತಂಡಗಳು ಖಾಲಿ ಸ್ಟ್ಯಾಂಡ್‌ಗಳನ್ನು ವಿಸ್ತೃತ ಡ್ರೆಸ್ಸಿಂಗ್ ಕೋಣೆಗಳಾಗಿ ಬಳಸುವಂತೆ ಸೂಚಿಸಿದೆ.
- ಐಪಿಎಲ್ ನೀತಿ ಸಂಹಿತೆಯ ನಿಯಮಗಳ ಪ್ರಕಾರ ಆಟಗಾರರು ಅಥವಾ ಸಿಬ್ಬಂದಿ ಯಾವುದೇ ಜೈವಿಕ ಸುರಕ್ಷಿತ ಪ್ರೋಟೋಕಾಲ್‌ಗಳನ್ನು ಉಲ್ಲಂಘಿಸಿದರೆ ಶಿಕ್ಷಾರ್ಹ ಎಂದು ಬಿಸಿಸಿಐ ದಾಖಲೆಯಲ್ಲಿ ತಿಳಿಸಿದೆ.
- ಫಿಸಿಯೋಗಳು ಆಟಗಾರರೊಂದಿಗೆ ಸಂಪರ್ಕ ಸಾಧಿಸಬೇಕಾದಾಗ ಪಿಪಿಇ ಕಿಟ್‌ಗಳನ್ನು ಧರಿಸಬೇಕು ಎಂದು ಎಸ್‌ಒಪಿ ಶಿಫಾರಸು ಮಾಡುತ್ತದೆ.
- ಪಂದ್ಯ ಮುಗಿದ ನಂತರ ಆಟಗಾರರು ಮತ್ತು ಪಂದ್ಯದ ಅಧಿಕಾರಿಗಳು ತಮ್ಮ ಹೋಟೆಲ್‌ಗೆ ಹಿಂತಿರುಗಿದ ನಂತರ ಸ್ನಾನ ಮಾಡುವಂತೆ ಸೂಚಿಸಲಾಗಿದೆ.
- ಇತರ ಶಿಫಾರಸುಗಳು ಐಸಿಸಿ ಮಾರ್ಗಸೂಚಿಗಳ ಪ್ರಕಾರ. ಆಟಗಾರರು ಚೆಂಡಿನ ಮೇಲೆ ಲಾಲಾರಸವನ್ನು ಬಳಸಲು ಸಾಧ್ಯವಾಗುವುದಿಲ್ಲ.
- ಎಲ್ಲ ಎಂಟು ಫ್ರಾಂಚೈಸಿಗಳಿಗೆ ವಿಭಿನ್ನ ಹೋಟೆಲ್‌ಗಳನ್ನು ಕಾಯ್ದಿರಿಸಲು ತಿಳಿಸಲಾಗಿದೆ ಮತ್ತು ವರ್ಚುವಲ್ ಸಭೆಗಳಿಗೆ ಸೂಚಿಸಲಾಗಿದೆ.
- ತಂಡದ ವೈದ್ಯರನ್ನು ನೇಮಕ ಮಾಡಲು ತಂಡಗಳಿಗೆ ಸೂಚಿಸಲಾಗಿದೆ, ಅವರು 53 ದಿನಗಳ ಪಂದ್ಯಾವಳಿ ಉದ್ದಕ್ಕೂ ಜೈವಿಕ ಸುರಕ್ಷಿತ ಮಾರ್ಗಸೂಚಿಗಳನ್ನು ಖಾತರಿಪಡಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ.
- ಪ್ರತಿ ಫ್ರ್ಯಾಂಚೈಸಿಯ ವೈದ್ಯಕೀಯ ತಂಡವು ಯುಎಇಗೆ ನಿಗದಿತ ನಿರ್ಗಮನಕ್ಕೆ ಕನಿಷ್ಠ 2 ವಾರಗಳ ಮೊದಲು ಎಲ್ಲ ಆಟಗಾರರು ಮತ್ತು ತಂಡದ ಸಿಬ್ಬಂದಿಯ ಸಂಪೂರ್ಣ ವೈದ್ಯಕೀಯ ಮತ್ತು ಪ್ರಯಾಣದ ಇತಿಹಾಸವನ್ನು (ಮಾರ್ಚ್ 1, 2020 ರಿಂದ) ಪಡೆಯಬೇಕು ಎಂದು ಬಿಸಿಸಿಐ ಹೇಳಿದೆ.
- ಪಂದ್ಯಾವಳಿಯಲ್ಲಿ ಭಾಗವಹಿಸುವ ಎಲ್ಲ ಆಟಗಾರರು ಜೈವಿಕ ಸುರಕ್ಷಿತ ಪ್ರದೇಶ ಪ್ರವೇಶಿಸುವ ಮೊದಲು 5 ಬಾರಿ ಕೋವಿಡ್ -19 ಪರೀಕ್ಷೆಗಳಿಗೆ ಒಳಗಾಗಬೇಕಾಗುತ್ತದೆ.
- ಜೈವಿಕ ಸುರಕ್ಷಿತ ಪ್ರದೇಶ ಪ್ರವೇಶಿಸಿದ ನಂತರ, ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಪ್ರತಿ 5 ನೇ ದಿನಕ್ಕೆ ಪರೀಕ್ಷೆಗಳಿಗೆ ಒಳಗಾಗಬೇಕಾಗುತ್ತದೆ.
- ಎರಡು ಯಶಸ್ವಿ ಕೋವಿಡ್-19 ಪರೀಕ್ಷೆಗಳ ನಂತರ ಆಟಗಾರರಿಗೆ ಯುಎಇಗೆ ಪ್ರಯಾಣಿಸಲು ಅವಕಾಶ ಇರುತ್ತದೆ.
- ನಂತರ ಅವರನ್ನು ಹೋಟೆಲ್‌ಗಳಲ್ಲಿ ಇರಿಸಲಾಗುವುದು ಮತ್ತು ಕ್ವಾರಂಟೈನ್ನಲ್ಲಿ ಇಡಲಾಗುತ್ತದೆ. ಈ ಸಮಯದಲ್ಲಿ ಅವರು 6 ದಿನಗಳಲ್ಲಿ ಇನ್ನೂ ಮೂರು ಕೋವಿಡ್ -19 ಪರೀಕ್ಷೆಗಳಿಗೆ ಒಳಗಾಗಬೇಕಾಗುತ್ತದೆ.
- ಫ್ರಾಂಚೈಸಿಗಳು ಸ್ಕೇಲೀನ್ ಹೈಪರ್ ಚಾರ್ಜ್ ಕೊರೊನಾ ಕ್ಯಾನನ್ (Shycocan) ಅನ್ನು ಸ್ಥಾಪಿಸಬಹುದು ಎಂದು ಎಸ್‌ಒಪಿ ಉಲ್ಲೇಖಿಸಿದೆ. ಇದು ಗಾಳಿಯಲ್ಲಿ ತೇಲುತ್ತಿರುವ ಕೊರೊನಾ ವೈರಸ್ ಅನ್ನು ಶೇಕಡಾ 99.9 ರಷ್ಟು ತಟಸ್ಥಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ.