ಜೈಪುರ: ಬುಧವಾರ ಆಲ್ರೌಂಡರ್ ಕೆ.ಗೌತಮ್ ಅವರನ್ನು ಕಿಂಗ್ಸ್ ಇಲೆವೆನ್ ಪಂಜಾಬ್ಗೆ ಬಿಟ್ಟುಕೊಟ್ಟು ಅಚ್ಚರಿ ಮೂಡಿಸಿದ್ದ ರಾಜಸ್ಥಾನ್ ರಾಯಲ್ಸ್ ಇಂದು ಅಜಿಂಕ್ಯಾ ರಹಾನೆಯನ್ನು ಡೆಲ್ಲಿ ಕ್ಯಾಪಿಟಲ್ಸ್ಗೆ ಬಿಟ್ಟುಕೊಟ್ಟಿದೆ.
ರಹಾನೆ ರಾಜಸ್ಥಾನ ರಾಯಲ್ಸ್ ಪರ 7 ಸೀಸನ್ನಲ್ಲಿ 100 ಪಂದ್ಯವಾಡಿದ್ದಾರೆ. ಜೊತೆಗೆ ಎರಡು ಸೀಸನ್ನಲ್ಲಿ ನಾಯಕತ್ವವಹಿಸಿಕೊಂಡು 24 ಪಂದ್ಯಗಳನ್ನು ಮುನ್ನಡೆಸಿದ್ದರು. ಇದೀಗ 2020ರ ಆವೃತ್ತಿಯಲ್ಲಿ ತಮ್ಮ ಐಪಿಎಲ್ ವೃತ್ತಿ ಜೀವನದ ನಾಲ್ಕನೇ ತಂಡದ ಪರ ಪದಾರ್ಪಣೆ ಮಾಡಲಿದ್ದಾರೆ.
2011ರಲ್ಲಿ ಮುಂಬೈನಿಂದ ರಾಜಸ್ಥಾನ ರಾಯಲ್ಸ್ ಸೇರಿದ್ದ ರಹಾನೆ, 2015 ರವರೆಗೆ ಹಾಗೂ 2018 ಮತ್ತು 19 ರ ಸೀಸನ್ನಲ್ಲೂ ರಾಯಲ್ಸ್ ಪರ ಆಡಿದ್ದರು. ರಹಾನೆ ರಾಯಲ್ಸ್ ಪರ 100 ಪಂದ್ಯಗಳಲ್ಲಿ 2 ಶತಕ ಹಾಗೂ 17 ಅರ್ಧಶತಕದ ಸಹಿತ 2810 ರನ್ಗಳಿಸಿದ್ದಾರೆ.
ಇನ್ನೂ ರಾಯಲ್ಸ್ ರಹಾನೆ ಬದಲಿಗೆ ಆಲ್ರೌಂಡರ್ ರಾಹುಲ್ ತಿವಾಟಿಯಾ ಹಾಗೂ ಮಯಾಂಕ್ ಮರ್ಕಾಂಡೆಯನ್ನು ತಂಡಕ್ಕೆ ಸೇರಿಸಿಕೊಂಡಿದೆ.
ರಹಾನೆ ಆಗಮನದೊಂದಿಗೆ ಡೆಲ್ಲಿ ಕ್ಯಾಪಿಟಲ್ ಬಲ ಹೆಚ್ಚಿದೆ. ಈಗಾಗಲೇ ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ ತಂಡದಲ್ಲಿದ್ದಾರೆ.