ದುಬೈ: ಆರಂಭಿಕರಾದ ನಾಯಕ ಡೇವಿಡ್ ವಾರ್ನರ್ ಹಾಗೂ ಜಾನಿ ಬೈರ್ಸ್ಟೋವ್ ಅವರ ಭರ್ಜರಿ ಅರ್ಧಶತಕಗಳ ನೆರವಿನಿಂದ ಸನ್ರೈಸರ್ಸ್ ಹೈದರಾಬಾದ್ ತಂಡ, ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 201ರನ್ಗಳ ಬೃಹತ್ ಮೊತ್ತ ಕಲೆ ಹಾಕಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಹೈದರಾಬಾದ್ ಈ ಪಂದ್ಯದಲ್ಲಿ ಅದ್ಭುತ ಆರಂಭ ಪಡೆಯಿತು. ನಾಯಕ ವಾರ್ನರ್(52) ಹಾಗೂ ಬೈರ್ಸ್ಟೋವ್(97) ಮೊದಲ ವಿಕೆಟ್ಗೆ 160 ರನ್ಗಳ ಬೃಹತ್ ಮೊತ್ತದ ಜೊತೆಯಾಟ ನೀಡಿದರು.
15 ಓವರ್ಗಳವರೆಗೆ ವಿಕೆಟ್ ನೀಡದೇ ಆಡಿದ್ದ ಈ ಜೋಡಿಯನ್ನು ಅಂಡರ್ 19 ಸ್ಟಾರ್ ರವಿ ಬಿಷ್ಮೋಯ್ ಒಂದೇ ಓವರ್ನಲ್ಲಿ ಪೆವಿಲಿಯನ್ಗಟ್ಟಿದರು. ವಾರ್ನರ್ 40 ಎಸೆತಗಳಲ್ಲಿ 5 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 52 ರನ್ಗಳಿಸಿದರೆ, ಬೈರ್ಸ್ಟೋವ್ 55 ಎಸೆತಗಳಲ್ಲಿ 6 ಸಿಕ್ಸರ್ ಹಾಗೂ 7 ಬೌಂಡರಿಗಳೊಂದಿಗೆ 97 ರನ್ಗಳಿಸಿ ಔಟಾದರು.