ಕರ್ನಾಟಕ

karnataka

ETV Bharat / sports

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಟಾಸ್​ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಸಿಎಸ್​ಕೆ ಕ್ಯಾಪ್ಟನ್ ಧೋನಿ - DC vs CSK live

ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಪಿಯೂಷ್ ಚಾವ್ಲಾ ಬದಲಿಗೆ ಕೇದಾರ್ ಜಾದವ್​ರನ್ನು ಕಣಕ್ಕಿಳಿಸುತ್ತಿದೆ. ಡೆಲ್ಲಿ ತಂಡ ಕಳೆದ ಪಂದ್ಯದ ತಂಡದಲ್ಲೇ ಅಡಲಿದೆ.

ಡೆಲ್ಲಿ ಕ್ಯಾಪಿಟಲ್ಸ್ -ಸಿಎಸ್​ಕೆ
ಡೆಲ್ಲಿ ಕ್ಯಾಪಿಟಲ್ಸ್ -ಸಿಎಸ್​ಕೆ

By

Published : Oct 17, 2020, 7:12 PM IST

Updated : Oct 17, 2020, 8:13 PM IST

ಶಾರ್ಜಾ: ಪ್ಲೇ ಆಫ್ ಕನಸಿನಲ್ಲಿರುವ ಚೆನ್ನೈ ಸೂಪರ್​ ಕಿಂಗ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧದ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್ ಮಾಡಲು ನಿರ್ಧರಿಸಿದೆ.

ಶ್ರೇಯಸ್ ಐಯ್ಯರ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್, ಟೂರ್ನಿಯಲ್ಲಿ ಅಮೋಘ ಪ್ರದರ್ಶನ ತೋರಿ ಆಡಿದ 8 ಪಂದ್ಯಗಳ ಪೈಕಿ 2ರಲ್ಲಿ ಸೋಲು, ಆರರಲ್ಲಿ ಜಯ ಸಾಧಿಸಿ ಎರಡನೇ ಸ್ಥಾನದಲ್ಲಿದ್ದರೆ, ಇತ್ತ ಸಿಎಸ್​ಕೆ ತಂಡ 8ರಲ್ಲಿ 3 ಪಂದ್ಯ ಜಯಿಸಿದ್ದು, 5ರಲ್ಲಿ ಸೋಲು ಕಾಣುವ ಮೂಲಕ 6ನೇ ಸ್ಥಾನದಲ್ಲಿದೆ.

ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಪಿಯೂಷ್ ಚಾವ್ಲಾ ಬದಲಿಗೆ ಕೇದಾರ್ ಜಾದವ್​ರನ್ನು ಕಣಕ್ಕಿಳಿಸುತ್ತಿದೆ. ಡೆಲ್ಲಿ ತಂಡ ಕಳೆದ ಪಂದ್ಯದ ತಂಡದಲ್ಲೇ ಅಡಲಿದೆ.

ಉಭಯ ತಂಡಗಳು ಇಲ್ಲಿಯವರೆಗೆ 22 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, 15 ಪಂದ್ಯಗಳಲ್ಲಿ ಸಿಎಸ್​ಕೆ ಗೆಲುವು ಸಾಧಿಸಿದ್ರೆ, 7 ಪಂದ್ಯಗಳಲ್ಲಿ ಡೆಲ್ಲಿ ಗೆಲುವು ಸಾಧಿಸಿದೆ.

ಚೆನ್ನೈ : ಫಾಫ್ ಡು ಪ್ಲೆಸಿಸ್, ಸ್ಯಾಮ್ ಕರ್ರನ್, ಶೇನ್ ವ್ಯಾಟ್ಸನ್, ಅಂಬಾಟಿ ರಾಯುಡು, ಎಂ.ಎಸ್.ಧೋನಿ, ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ಕೇದಾರ್ ಜಾಧವ್ , ದೀಪಕ್ ಚಹರ್, ಶಾರ್ದುಲ್ ಠಾಕೂರ್, ಕರ್ಣ್ ಶರ್ಮಾ

ಡೆಲ್ಲಿ : ಶಿಖರ್ ಧವನ್, ಪೃಥ್ವಿ ಶಾ, ಅಜಿಂಕ್ಯ ರಹಾನೆ , ಶ್ರೇಯಸ್ ಅಯ್ಯರ್, ಮಾರ್ಕಸ್ ಸ್ಟೋಯಿನಿಸ್, ಅಲೆಕ್ಸ್ ಕ್ಯಾರಿ , ಆಕ್ಸರ್ ಪಟೇಲ್, ಕಗಿಸೊ ರಬಾಡಾ, ಆರ್ ಅಶ್ವಿನ್, ಅನ್ರಿಚ್ ನಾರ್ಟ್ಜೆ, ತುಷಾರ್ ದೇಶಪಾಂಡೆ

Last Updated : Oct 17, 2020, 8:13 PM IST

ABOUT THE AUTHOR

...view details