ಕರ್ನಾಟಕ

karnataka

ETV Bharat / sports

ವಿರುಷ್ಕಾ ದಂಪತಿಯ ರೋಮ್ಯಾಂಟಿಕ್ ಕ್ಷಣವನ್ನು ಕ್ಯಾಮರಾದಲ್ಲಿ ಸೆರೆಹಿಡಿದ ಎಬಿಡಿ: ಫೋಟೋ ವೈರಲ್ - AB de Villiers turns photographer

ಫೀಲ್ಡ್​ನಲ್ಲಿ ಮಿಸ್ಟರ್​ 360 ಎಂದು ಕರೆಸಿಕೊಳ್ಳುವ ಎಬಿ ಡಿ ವಿಲಿಯರ್ಸ್​ ಫೋಟೋಗ್ರಫಿಯಲ್ಲೂ ಅಭಿಮಾನಿಗಳ ಮನಗೆದ್ದಿದ್ದಾರೆ.

ವಿರಾಟ್ -ಅನುಷ್ಕಾ
ವಿರಾಟ್ -ಅನುಷ್ಕಾ

By

Published : Oct 18, 2020, 11:00 PM IST

ದುಬೈ: ಶನಿವಾರ ರಾಜಸ್ಥಾನ್​ ರಾಯಲ್ಸ್​ ವಿರುದ್ಧ ಗೆದ್ದ ಖುಷಿಯಲ್ಲಿರುವ ರಾಯಲ್​​ ಚಾಲೆಂಜರ್ಸ್ ಬೆಂಗಳೂರು ತಂಡ ಸೂಪರ್​ ಸಂಡೆಯಲ್ಲಿ ಸಕತ್ ಎಂಜಾಯ್ ಮಾಡುತ್ತಿದ್ದಾರೆ.

ಫೀಲ್ಡ್​ನಲ್ಲಿ ಮಿಸ್ಟರ್​ 360 ಎಂದು ಕರೆಸಿಕೊಳ್ಳುವ ಎಬಿ ಡಿ ವಿಲಿಯರ್ಸ್​ ಫೋಟೋಗ್ರಫಿಯಲ್ಲೂ ಅಭಿಮಾನಿಗಳ ಮನಗೆದ್ದಿದ್ದಾರೆ.

ಭಾನುವಾರ ವಿರಾಮವಾಗಿದ್ದರಿಂದ ವಿರಾಟ್​ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಜೊತೆ ಕಾಲಕಳೆದಿದ್ದಾರೆ. ಈ ಸಂದರ್ಭದಲ್ಲಿ ಬೀಚ್​ನಲ್ಲಿ ಕುತ್ತಿಗೆವರೆಗೂ ನೀರು ಬರುವ ಜಾಗದಲ್ಲಿ ನಿಂತು ತೆಗೆಸಿರುವ ರೋಮ್ಯಾಂಟಿಕ್ ಫೋಟೋವನ್ನು ಕೊಹ್ಲಿ ತಮ್ಮ ಇನ್ಸ್ಟಾದಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲಾತಾಣದಲ್ಲಿ ವೈರಲ್​ ಆಗುತ್ತಿದೆ.

ಈ ಇನ್ಸ್ಟಾಗ್ರಾಮ್​ ಪೋಸ್ಟ್​ನಲ್ಲಿ ಫೋಟೋ ಕ್ರೆಡಿಟ್ ಎಬಿ ಡಿ ವಿಲಿಯರ್ಸ್ ಎಂದು ನೀಡಿರುವ ವಿರಾಟ್​ ಕೊಹ್ಲಿ ನಮೂದಿಸಿದ್ದಾರೆ. ಈ ಫೋಟೋ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ಈ ಜೋಡಿ ಪವರ್​ಫುಲ್​​ ಕಪಲ್​ಗಳಲ್ಲಿ ಒಂದು. ಈ ಫೋಟೋ ಅತ್ಯುತ್ತಮವಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಅಲ್ಲದೆ ಫೋಟೋಗ್ರಾಫರ್ ವಿಲಿಯರ್ಸ್ ಆಗಿರುವುದರಿಂದ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

3 ವರ್ಷಗಳ ಹಿಂದೆ ಇಟಲಿಯಲ್ಲಿ ವಿವಾಹವಾಗಿದ್ದ ವಿರುಷ್ಕಾ ಜೋಡಿ 2021ರ ಜನವರಿಯಲ್ಲಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ABOUT THE AUTHOR

...view details