ಕರ್ನಾಟಕ

karnataka

ಕೇವಲ 108 ರನ್​ ಟಾರ್ಗೆಟ್​​​​​ ನೀಡಿಯೂ ವಿಂಡೀಸ್​​ ತಂಡವನ್ನು ಬಗ್ಗುಬಡಿದ​ ಭಾರತದ ವನಿತೆಯರು!

ಪೂನಮ್​ ಯಾದವ್​ ಹಾಗೂ ಇತರೆ ಸ್ಪಿನ್​ ಬೌಲರ್​ಗಳ ಸಹಾಯದಿಂದ ಭಾರತ ವನಿತೆಯರ ತಂಡ ವಿಂಡೀಸ್​ ತಂಡವನ್ನು 2 ರನ್​ಗಳಿಂದ ಮಣಿಸಿದೆ.

By

Published : Feb 18, 2020, 4:42 PM IST

Published : Feb 18, 2020, 4:42 PM IST

ETV Bharat / sports

ಕೇವಲ 108 ರನ್​ ಟಾರ್ಗೆಟ್​​​​​ ನೀಡಿಯೂ ವಿಂಡೀಸ್​​ ತಂಡವನ್ನು ಬಗ್ಗುಬಡಿದ​ ಭಾರತದ ವನಿತೆಯರು!

India women team beat West Indies
ಟಿ20 ಮಹಿಳಾ ವಿಶ್ವಕಪ್​

ಬ್ರಿಸ್ಬೇನ್​:2020ರ ಟಿ-20 ವಿಶ್ವಕಪ್​ ಅಭ್ಯಾಸ ಪಂದ್ಯದಲ್ಲಿ ಭಾರತದ ವನಿತೆಯರ ತಂಡ ವೆಸ್ಟ್​ ಇಂಡೀಸ್​ ವಿರುದ್ಧ 2 ರನ್​ಗಳ ರೋಚಕ ಜಯ ಸಾಧಿಸಿದೆ.

ಮೊದಲ ಆಭ್ಯಾಸ ಪಂದ್ಯವನ್ನು ಮಳೆಯಿಂದ ತಪ್ಪಿಸಿಕೊಂಡಿದ್ದ ಭಾರತ ತಂಡ ಎರಡನೇ ಪಂದ್ಯದಲ್ಲಿ ನೀರಸ ಬ್ಯಾಟಿಂಗ್​ ಪ್ರದರ್ಶನ ತೋರಿತು. ಟಾಸ್​ ಗೆದ್ದು ಬ್ಯಾಟಿಂಗ್​ ತೆಗೆದುಕೊಂಡು 20 ಓವರ್​ಗಳಲ್ಲಿ ಕೇವಲ 107 ರನ್ ಕಲೆಹಾಕಿತು. ಶಿಖಾ ಪಾಂಡೆ 24 ರನ್ ​ಗಳಿಸಿ ಗರಿಷ್ಠ ಸ್ಕೋರರ್​ ಎನಿಸಿದರೆ, ದೀಪ್ತಿ ಶರ್ಮಾ 21 ರನ್ ​ಗಳಿಸಿದರು. ಸ್ಟಾರ್​ ಬ್ಯಾಟ್ಸ್​ಮನ್​ಗಳಾದ ಮಂಧಾನ, 4, ಯುವ ಆಟಗಾರ್ತಿ ಶಫಾಲಿ ವರ್ಮಾ 12, ರೋಡ್ರಿಗ್ಸ್​ 0, ವೇದಾ ಕೃಷ್ಣಮೂರ್ತಿ 5, ನಾಯಕಿ ಹರ್ಮನ್​ ಪ್ರೀತ್​ ಕೌರ್​ 11 ರನ್​ಗಳಿಗೆ ವಿಕೆಟ್​ ಒಪ್ಪಿಸಿ ನಿರಾಶೆ ಮೂಡಿಸಿದರು.

ವಿಂಡೀಸ್ ಮಹಿಳಾ ತಂಡದ ಪರ ಶಮಿಲ ಕನ್ನೆಲ್​ 2, ಅನಿಸಾ ಮೊಹಮ್ಮದ್​ 2, ಸ್ಟೆಫನಿ ಟೇಲರ್​, ಚಿನೆಲ್ಲೆ ಹೆನ್ರಿ, ಆಲಿಯಾ ಅಲೆಯ್ನೆ ಹಾಗೂ ಅಫಿ ಫ್ಲೆಚರ್​ ತಲಾ ಒಂದು ವಿಕೆಟ್​ ಪಡೆದು ಭಾರತ ತಂಡವನ್ನು ನಿಯಂತ್ರಿಸಿದರು.

108 ರನ್​ಗಳ ಸಾಧಾರಣ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್​​​ ಭಾರತದ ಸ್ಪಿನ್​ ದಾಳಿಗೆ ರನ್ ​ಗಳಿಸಲು ಪರದಾಡಿ 20 ಓವರ್​ಗಳಲ್ಲಿ 105 ರನ್ ​ಗಳಿಸಲಷ್ಟೇ ಶಕ್ತವಾಯಿತು. ಆರಂಭಿಕ ಆಟಗಾರ್ತಿ ಲೀ-ಅನ್​ ಕಿರ್ಬಿ 42 ಹಾಗೂ ಹೇಲಿ ಮ್ಯಾಥ್ಯೂಸ್​ 25 ರನ್ ​ಗಳಿಸಿ ಗೆಲುವಿಗಾಗಿ ಕೊನೆಯ ಓವರ್​​ವರೆಗೂ ಹೋರಾಟ ನಡೆಸಿದರೂ 2 ರನ್​ಗಳಿಂದ ಸೋಲು ಕಾಣುವಂತಾಯಿತು.

ಅದ್ಭುತ ಬೌಲಿಂಗ್​ ಪ್ರದರ್ಶನ ತೋರಿದ ಪೂನಮ್​ ಯಾದವ್​ ಕೊನೆಯ ಓವರ್​ನಲ್ಲಿ 2 ವಿಕೆಟ್​ ಸಹಿತ ಒಟ್ಟು 3 ವಿಕೆಟ್​ ಪಡೆದು ಗೆಲುವಿನ ರೂವಾರಿಯಾದರು. ಇವರಿಗೆ ಸಾಥ್​ ನೀಡಿದ ದೀಪ್ತಿ ಶರ್ಮಾ, ಹರ್ಮನ್​ ಹಾಗೂ ಶಿಖಾ ಪಾಂಡೆ ತಲಾ ಒಂದು ವಿಕೆಟ್​ ಪಡೆದರು.

ABOUT THE AUTHOR

...view details