ಕರ್ನಾಟಕ

karnataka

ETV Bharat / sports

ಭಾರತ-ಬಾಂಗ್ಲಾ ಮೊದಲ ಟಿ-20 ಪಂದ್ಯ ನಡೆಯೋದು ಡೌಟ್!

ನವದೆಹಲಿಯಲ್ಲಿ ಗಾಳಿಯ ಗುಣಮಟ್ಟ ಸಂಪೂರ್ಣವಾಗಿ ಹದಗೆಟ್ಟಿರುವ ಕಾರಣ ನವೆಂಬರ್​ 3ರಂದು ನಡೆಯಲಿರುವ ಭಾರತ-ಬಾಂಗ್ಲಾ ನಡುವಿನ ಕ್ರಿಕೆಟ್​​ ಪಂದ್ಯದ ಮೇಲೆ ಕರಿನೆರಳು ಆವರಿಸಿದೆ.

By

Published : Oct 31, 2019, 5:14 PM IST

ಬಾಂಗ್ಲಾ ಕ್ರಿಕೆಟಿಗ ಲಿಟನ್​ ದಾಸ್​​

ನವದೆಹಲಿ:ನವೆಂಬರ್​ 3ರಂದು ಅರುಣ್​ ಜೇಟ್ಲಿ ಮೈದಾನದಲ್ಲಿ ಭಾರತ-ಬಾಂಗ್ಲಾದೇಶದ ನಡುವೆ ಮೊದಲ ಟಿ-20 ಪಂದ್ಯ ನಡೆಯಲಿದ್ದು, ಅದಕ್ಕಾಗಿ ಈಗಾಗಲೇ ಬಾಂಗ್ಲಾ ಕ್ರಿಕೆಟ್‌ ತಂಡ ಭಾರತಕ್ಕೆ ಆಗಮಿಸಿ ಅಭ್ಯಾಸ ಆರಂಭಿಸಿದೆ. ಇದರ ಮಧ್ಯೆ ಮೊದಲ ಟಿ-20 ಪಂದ್ಯ ನಡೆಯುವುದು ಸಂಶಯ ಎಂದು ಹೇಳಲಾಗುತ್ತಿದೆ.

ಬಾಂಗ್ಲಾ ಕ್ರಿಕೆಟಿಗರ ಅಭ್ಯಾಸ

ನವದೆಹಲಿಯಲ್ಲಿ ವಾಯು ಗುಣಮಟ್ಟ ಸಂಪೂರ್ಣವಾಗಿ ಕೆಟ್ಟು ಹೋಗಿರುವ ಕಾರಣ, ಈಗಾಗಲೇ ಮೈದಾನದಲ್ಲಿ ಬಾಂಗ್ಲಾ ಆಟಗಾರರು​​​​ ಮುಖಗಳಿಗೆ ಮಾಸ್ಕ್​ ಹಾಕಿಕೊಂಡು ಅಭ್ಯಾಸ ನಡೆಸುತ್ತಿದ್ದಾರೆ. ಒಂದು ವೇಳೆ ಪಂದ್ಯ ನಡೆದರೆ ಆಟ​ಗಾ​ರರ ಜೊತೆ ಪ್ರೇಕ್ಷ​ಕ​ರಿಗೆ ತೊಂದರೆ ಉಂಟಾ​ಗುವ ಸಾಧ್ಯ​ತೆ ಹೆಚ್ಚಿರುವ ಕಾರಣ ಈ ಪಂದ್ಯ ಸ್ಥಳಾಂತರ ಅಥವಾ ರದ್ಧು ಮಾಡಲು ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ಅಭ್ಯಾಸ ನಿರತ ಬಾಂಗ್ಲಾ ಟೀಂ

ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಇದೇ ವಿಷಯವಾಗಿ ಮಾತನಾಡಿದ್ದು, ಈಗಾಗಲೇ ನಿಗದಿಯಾದಂತೆ ಇದೇ ಮೈದಾನದಲ್ಲಿ ಪಂದ್ಯ ನಡೆಯಲಿದೆ ಎಂದಿದ್ದಾರೆ. ದೆಹಲಿ ಮಾಲಿನ್ಯ ನಿಯಂತ್ರಣ ಮಂಡಳಿ ಜೊತೆ ಮಾತುಕತೆ ನಡೆಸಿದ್ದೇವೆ. ಅವರು ನವೆಂಬರ್ 3ರರೊಳಗೆ ವಾಯುಮಾಲಿನ್ಯ ಸರಿಪಡಿಸುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಅಭ್ಯಾಸನಿರತ ಬಾಂಗ್ಲಾ ಟೀಂ

ಈ ಬಗ್ಗೆ ಟೀಂ ಇಂಡಿಯಾ ಮಾಜಿ ಆಟಗಾರ, ಬಿಜೆಪಿ ಸಂಸದ ಗೌತಮ್​ ಗಂಭೀರ್ ಪ್ರತಿಕ್ರಿಯಿಸಿದ್ದು, ದೆಹಲಿಯ ಗಾಳಿಯ ಗುಣಮಟ್ಟ ನಿಯಂತ್ರಣಕ್ಕೆ ಬರುವವರೆಗೂ ಮೈದಾನದಲ್ಲಿ ಯಾವುದೇ ರೀತಿಯ ಕ್ರಿಕೆಟ್​ ಪಂದ್ಯ ನಡೆಯುವುದಿಲ್ಲ ಎಂದಿದ್ದಾರೆ.

ಗೌತಮ್​ ಗಂಭೀರ್​​ ಪ್ರತಿಕ್ರಿಯೆ

ಈ ಕುರಿತು ಮಾತಿಗೆ ಸಿಕ್ಕ ಬಾಂಗ್ಲಾ ಕ್ರಿಕೆಟಿಗ ಲಿಟನ್ ದಾಸ್, ನನಗೆ ವೈಯಕ್ತಿಕ ಆರೋಗ್ಯ ಸಮಸ್ಯೆಗಳಿವೆ. ಹಾಗಾಗಿ ನಾನು ಮಾಸ್ಕ್ ಧರಿಸಿ ಅಂಗಣಕ್ಕೆ ಇಳಿದಿದ್ದೇನೆ ಎಂದು ಹೇಳಿದ್ರು.

2017ರಲ್ಲೂ ಈ ಮೈದಾನದಲ್ಲಿ ಇದೇ ರೀತಿಯ ಸಮಸ್ಯೆ ಉದ್ಭವವಾಗಿತ್ತು. ಆ ಸಂದರ್ಭದಲ್ಲಿ ಭಾರತ ಪ್ರವಾಸ ಕೈಗೊಂಡಿದ್ದ ಶ್ರೀಲಂಕಾ ತಂಡ ಮುಖಗವಸು​ ಧರಿಸಿ ಕ್ರೀಡಾಂಗಣಕ್ಕಿಳಿದಿದ್ದರು.

ABOUT THE AUTHOR

...view details