ರಾಜ್ಕೋಟ್: ಸೌರಾಷ್ಟ್ರ ಕ್ರಿಕೆಟ್ ಅಸೋಷಿಯೇಷನ್ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಟಿ-20 ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಗೆಲ್ಲಲು ಟೀಂ ಇಂಡಿಯಾ 154 ರನ್ ಗಳಿಸಬೇಕಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾ ಆರಂಭದಲ್ಲೇ ಬಿರುಸಿನ ಆಟದ ಮೊರೆ ಹೋಯ್ತು. ಆರಂಭಿಕರಾಗಿ ಕಣಕ್ಕಿಳಿದ ಲಿಟನ್ ದಾಸ್ ಹಾಗೂ ಮೊಹಮ್ಮದ್ ನಯೀಮ್ ಟೀಂ ಇಂಡಿಯಾ ಬೌಲಿಂಗ್ ಪಡೆಯನ್ನು ನಿರಾಯಾಸವಾಗಿ ಎದುರಿಸುತ್ತಾ ಹೋದರು.ಇದೇ ವೇಳೆ ಉತ್ತಮವಾಗಿ ಆಡುತ್ತಿದ್ದ ಲಿಟನ್ ದಾಸ್ (29) ವಿಕೆಟ್ ಕೀಪರ್ ಸ್ಟಂಪ್ ಬಲೆಗೆ ಬಿದ್ದು ವಿಕೆಟ್ ಒಪ್ಪಿಸಿದ್ರೆ, ನಯೀಮ್(36) ರನ್ ಗಳಿಸಿ ವಾಷಿಂಗ್ಟನ್ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು.