ಕರ್ನಾಟಕ

karnataka

ETV Bharat / sports

ಇಂಡಿಯಾ ವರ್ಸಸ್ ಇಂಗ್ಲೆಂಡ್​: ಒಂದೇ ಟೆಸ್ಟ್​ನಲ್ಲಿ ಶತಕ, 5 ವಿಕೆಟ್ ಪಡೆದು ಮಿಂಚಿದ ಆರ್​.ಅಶ್ವಿನ್​​ - ಟೀಂ ಇಂಡಿಯಾ ಚೆನ್ನೈ

ಚೆನ್ನೈನ ಚಿದಂಬರಂ ಮೈದಾನದಲ್ಲಿ ಭಾರತ-ಇಂಗ್ಲೆಂಡ್ ತಂಡಗಳ ನಡುವೆ ಎರಡನೇ ಟೆಸ್ಟ್​ ಪಂದ್ಯ ನಡೆಯುತ್ತಿದ್ದು, ಆರ್​ ಅಶ್ವಿನ್ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ.

Ravichandran Ashwin
Ravichandran Ashwin

By

Published : Feb 15, 2021, 3:38 PM IST

ಚೆನ್ನೈ: ಪ್ರವಾಸಿ ಇಂಗ್ಲೆಂಡ್​ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್​ನ ಎರಡನೇ ಇನ್ನಿಂಗ್ಸ್​ನಲ್ಲಿ ಟೀಂ ಇಂಡಿಯಾ ಆಲ್​ರೌಂಡರ್ ಆರ್​.ಅಶ್ವಿನ್​ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ.

ಟೀಂ ಇಂಡಿಯಾ ಬ್ಯಾಟಿಂಗ್ ಪಡೆ ವೈಫಲ್ಯ ಅನುಭವಿಸುತ್ತಿದ್ದಂತೆ ಕ್ಯಾಪ್ಟನ್​ ವಿರಾಟ್​ ಕೊಹ್ಲಿಗೆ ಉತ್ತಮ ಸಾಥ್​ ನೀಡಿದ ಆರ್​. ಆಶ್ವಿನ್ ತಾವು ಎದುರಿಸಿದ 135 ಎಸೆತಗಳಲ್ಲಿ 103ರನ್​ಗಳಿಕೆ ಮಾಡಿದ್ರು. ಇದರಲ್ಲಿ 14 ಬೌಂಡರಿ ಹಾಗೂ 1 ಸಿಕ್ಸರ್ ಸೇರಿಕೊಂಡಿತ್ತು.

ಆರ್​.ಆಶ್ವಿನ್ ಬ್ಯಾಟಿಂಗ್ ವೈಖರಿ

ದ್ವಿತೀಯ ಇನ್ನಿಂಗ್ಸ್​ನಲ್ಲಿ ಟೀಂ ಇಂಡಿಯಾ ಆರಂಭಿಕ ಕುಸಿತಕ್ಕೊಳಗಾದರೂ ಕೊಹ್ಲಿ- ಅಶ್ವಿನ್ ಅಮೋಘ ಬ್ಯಾಟಿಂಗ್​ ಪ್ರದರ್ಶನ ನೀಡಿದ್ರು. 62ರನ್​ಗಳಿಕೆ ಮಾಡಿದ್ದ ವೇಳೆ ಕ್ಯಾಪ್ಟನ್​ ವಿಕೆಟ್​ ಒಪ್ಪಿಸಿದರು. ಇದಾದ ಬಳಿಕ ಬಂದ ಯಾವೊಬ್ಬ ಪ್ಲೇಯರ್ಸ್​ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಏಕಾಂಗಿಯಾಗಿ ಹೋರಾಟ ಮುಂದುವರೆಸಿದ ಅಶ್ವಿನ್ ಎದುರಾಳಿ ಬೌಲರ್​ಗಳನ್ನ ಉತ್ತಮವಾಗಿ ಎದುರಿಸಿದರು. ಸದ್ಯ ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್​ನಲ್ಲಿ 9ವಿಕೆಟ್​ನಷ್ಟಕ್ಕೆ 284ರನ್​ಗಳಿಕೆ ಮಾಡಿದ್ದು, 479ರನ್​ಗಳ ಮುನ್ನಡೆ ಪಡೆದುಕೊಂಡಿದೆ. ಜತೆಗೆ ಎರಡು ದಿನಗಳ ಆಟ ಬಾಕಿ ಉಳಿದಿದೆ.

ದಾಖಲೆ ಬರೆದ ಅಶ್ವಿನ್​

ಒಂದೇ ಟೆಸ್ಟ್​ ಪಂದ್ಯದಲ್ಲಿ ಅಶ್ವಿನ್​ 5 ವಿಕೆಟ್​ ಪಡೆದುಕೊಳ್ಳುವುದರ ಜೊತೆಗೆ ಶತಕ ಸಿಡಿಸಿ ಮಿಂಚಿದ್ದಾರೆ. ಈ ಮೈದಾನದಲ್ಲಿ ಶತಕ ಸಿಡಿಸಿರುವ ಎರಡನೇ ತಮಿಳುನಾಡು ಪ್ಲೇಯರ್​ ಎಂಬ ಕೀರ್ತಿಗೂ ಅಶ್ವಿನ್​ ದಾಖಲಾಗಿದ್ದು, ಈ ಹಿಂದೆ 1986/87ರಲ್ಲಿ ಕೃಷ್ ಶ್ರೀಕಾಂತ್​ನ ಈ ಸಾಧನೆ ಮಾಡಿದ್ದರು.

ABOUT THE AUTHOR

...view details