ಕರ್ನಾಟಕ

karnataka

ETV Bharat / sports

ಇಂಡಿಯಾ vs ಇಂಗ್ಲೆಂಡ್: ರೂಟ್​ 150, ಸ್ಟೋಕ್ಸ್​ 50, ತ್ರಿಶತಕ ದಾಖಲಿಸಿದ ಆಂಗ್ಲರ ಪಡೆ - ಮೊದಲ ಟೆಸ್ಟ್​ ಪಂದ್ಯ

ಭಾರತದ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್​ ಪಂದ್ಯದ ಎರಡನೇ ದಿನವೂ ಇಂಗ್ಲೆಂಡ್ ಬ್ಯಾಟಿಂಗ್ ಪರಾಕ್ರಮ ಮುಂದುವರೆದಿದ್ದು, ಭಾರತದ ಬೌಲರ್​ಗಳ ಮೇಲೆ ಆಂಗ್ಲ ಪಡೆ ಸವಾರಿ ನಡೆಸಿದೆ.

Ind vs Eng
Ind vs Eng

By

Published : Feb 6, 2021, 11:23 AM IST

ಚೆನ್ನೈ:ಭಾರತ-ಇಂಗ್ಲೆಂಡ್​ ತಂಡಗಳ ನಡುವೆ ಇಲ್ಲಿನ ಚಿದಂಬರಂ ಮೈದಾನದಲ್ಲಿ ನಡೆಯುತ್ತಿರುವ ಟೆಸ್ಟ್​ ಸರಣಿಯ ಮೊದಲ ಪಂದ್ಯದ ಎರಡನೇ ದಿನದಾಟದಲ್ಲೂ ಇಂಗ್ಲೆಂಡ್ ಪಾರಮ್ಯ ಮುಂದುವರೆದಿದ್ದು, ಮೊದಲ ಇನ್ನಿಂಗ್ಸ್​ನಲ್ಲಿ ಆಂಗ್ಲರ ಪಡೆ ಬೃಹತ್​ ರನ್ ಕಲೆ ಹಾಕುವ ಮುನ್ಸೂಚನೆ ನೀಡಿದೆ.

ಭಾರತೀಯ ಬೌಲರ್​ಗಳ ಪರದಾಟ

ನಿನ್ನೆ ಮೂರು ವಿಕೆಟ್​ನಷ್ಟಕ್ಕೆ 263ರನ್​ಗಳಿಕೆ ಮಾಡಿದ್ದ ಇಂಗ್ಲೆಂಡ್​ ಇದು ಕೂಡ ಉತ್ತಮ ಬ್ಯಾಟಿಂಗ್​ ಮುಂದುವರೆಸಿದೆ. ತಂಡದ ಕ್ಯಾಪ್ಟನ್ ಜೋ ರೂಟ್ ಭರ್ಜರಿ ಬ್ಯಾಟಿಂಗ್​ ನಡೆಸುತ್ತಿದ್ದು, ಈಗಾಗಲೇ 150ರನ್​ಗಳಿಕೆ ಮಾಡಿದ್ದಾರೆ. ಅವರಿಗೆ ಉತ್ತಮ ಸಾಥ್ ನೀಡಿರುವ ಆಲ್​ರೌಂಡರ್​ ಬೆನ್​ ಸ್ಟೋಕ್ಸ್​ 50ರನ್​ಗಳಿಕೆ ಮಾಡಿ ಬ್ಯಾಟಿಂಗ್ ಮುಂದುವರೆಸಿದ್ದಾರೆ. ಈ ಮೂಲಕ ಮೊದಲ ಇನ್ನಿಂಗ್ಸ್​ನಲ್ಲೇ ದೊಡ್ಡ ಮೊತ್ತ ಕಲೆಹಾಕುವ ಮುನ್ಸೂಚನೆ ನೀಡಿದೆ.

ಓದಿ: ಗೂಗಲ್​​ ಮಹಾ​ ಎಡವಟ್ಟು.. ರವಿಶಾಸ್ತ್ರಿ ಈಗ ಜಗತ್ತಿನ ಹಿರಿಯ ವ್ಯಕ್ತಿ!

ಇಂಗ್ಲೆಂಡ್​ ಇಲ್ಲಿಯವರೆಗೆ ಆಡಿರುವ 115 ಓವರ್​ಗಳಲ್ಲಿ 3ವಿಕೆಟ್​ನಷ್ಟಕ್ಕೆ 339ರನ್​ಗಳಿಕೆ ಮಾಡಿದ್ದು, ಮತ್ತಷ್ಟು ರನ್​ಗಳಿಕೆ ಮಾಡುವ ಉದ್ದೇಶದಿಂದ ಸ್ಫೋಟಕ ಬ್ಯಾಟಿಂಗ್ ಮೊರೆ ಹೋಗಿದೆ.

ಎರಡನೇ ದಿನದಾಟದ ಆರಂಭದಲ್ಲಿ ಇಂಗ್ಲೆಂಡ್​ 60ರನ್​ಗಳ ಜೊತೆಯಾಟ ಆಡಿರುವ ಸ್ಟೋಕ್ಸ್ ಹಾಗೂ ರೂಟ್​ ಜೋಡಿ ಅಬ್ಬರದ ಬ್ಯಾಟಿಂಗ್ ನಡೆಸುತ್ತಿದ್ದಾರೆ. ವಿಕೆಟ್ ಪಡೆದುಕೊಳ್ಳಲು ಟೀಂ ಇಂಡಿಯಾ ಬೌಲರ್​ ಹರಸಾಹಸ ಪಡುತ್ತಿದ್ದು, ಯಾವುದೇ ಬೌಲರ್​ ಮಾರಕವಾಗಿ ಪರಣಮಿಸಿಲ್ಲ.

ABOUT THE AUTHOR

...view details