ಚೆನ್ನೈ: ಇಂಗ್ಲೆಂಡ್ ಅನುಭವಿ ವೇಗಿ ಜೇಮ್ಸ್ ಆ್ಯಂಡರ್ಸನ್ ದಾಳಿಗೆ ತತ್ತರಿಸಿದ ಭಾರತ ತಂಡ 144 ರನ್ಗಳಿಗೆ 6 ವಿಕೆಟ್ ಕಳೆದುಕೊಂಡು ಆಘಾತಕ್ಕೆ ಸಿಲುಕಿದೆ.
39ರನ್ಗಳಿಗೆ 1 ವಿಕೆಟ್ ಕಳೆದುಕೊಂಡು ಕೊನೆಯ ದಿನ ಬ್ಯಾಟಿಂಗ್ ಆರಂಭಿಸಿದ ಟೀಮ್ ಇಂಡಿಯಾ ನೈಟ್ ವೈಚ್ಮಾನ್ ಆಗಿದ್ದ ಪೂಜಾರ(15) ನಿನ್ನೆಯ ಮೊತ್ತಕ್ಕೆ 3 ರನ್ ಸೇರಿಸಿ ಔಟಾದರು. ಯುವ ಬ್ಯಾಟ್ಸ್ಮನ್ ಗಿಲ್ ಸ್ಪೋಟಕ ಬ್ಯಾಟಿಂಗ್ಗೆ ಮುಂದಾಗಿ 50 ರನ್ಗಳಿಸದ್ದ ವೇಳೆ ಜೇಮ್ಸ್ ಆ್ಯಂಡರ್ಸನ್ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆದರು.
ನಂತರ ನಂದ ಅಜಿಂಕ್ಯ ರಹಾನೆ ಕೂಡ ಕೇವಲ 3 ಎಸೆತಗಳನ್ನೆದುರಿಸಿ ಆ್ಯಂಡರ್ಸನ್ಗೆ 2ನೇ ಬಲಿಯಾದರು. ಮೊದಲ ಇನ್ನಿಂಗ್ಸ್ನಲ್ಲಿ 91 ರನ್ಗಳಿಸಿದ್ದ ಸ್ಫೋಟಕ ಬ್ಯಾಟ್ಸ್ಮನ್ ರಿಷಭ್ ಪಂತ್ ಆಟ ಕೂಡ ಕೇವಲ 11 ರನ್ಗಳಿಗೆ ಸೀಮಿತವಾಯಿತು. ಈ ವಿಕೆಟ್ ಕೂಡ ಆ್ಯಂಡರ್ಸನ್ ಪಾಲಾಯಿತು.
ಲೋಕಲ್ ಬಾಯ್ ವಾಷಿಂಗ್ಟನ್ ಸುಂದರ್ 5 ಎಸೆತಗಳಲ್ಲಿ ಯಾವುದೇ ರನ್ಗಳಿಸದೆ ಡಾಮ್ ಬೆಸ್ ಬೌಲಿಂಗ್ನಲ್ಲಿ ವಿಕೆಟ್ ಕೀಪರ್ ಜೋಸ್ ಬಟ್ಲರ್ಗೆ ಕ್ಯಾಚ್ ನೀಡಿ ಔಟಾದರು.
ಭೋಜನ ವಿರಾಮದ ವೇಳೆಗೆ ಭಾರತ ತಂಡ 6 ವಿಕೆಟ್ ಕಳೆದುಕೊಂಡು 144 ರನ್ಗಳಿಸಿದೆ. ನಾಯಕ ವಿರಾಟ್ ಕೊಹ್ಲಿ ಅಜೇಯ 45 ಹಾಗೂ ಅಶ್ವಿನ್ ಅಜೇಯ 2 ರನ್ಗಳಿಸಿ ಕ್ರೀಸ್ನಲ್ಲಿದ್ದಾರೆ. ಭಾರತ ತಂಡ ಈ ಪಂದ್ಯವನ್ನು ಗೆಲ್ಲಬೇಕಾದರೆ ಇನ್ನು 276ರನ್ಗಳಿಸಬೇಕಾಗಿದೆ. ಸೋಲನ್ನು ತಪ್ಪಿಸಿಕೊಳ್ಳಬೇಕಾದರೆ 64 ಓವರ್ಗಳನ್ನು ಆಡಬೇಕಿದೆ. ಕೊಹ್ಲಿ ಒಬ್ಬರೆ ಬ್ಯಾಟ್ಸ್ಮನ್ ಇರುವುದರಿಂದ ಅತಿಥೇಯರಿಗೆ ಎರಡೂ ಅಸಾಧ್ಯವಾಗಿದೆ.