ಮೆಲ್ಬೋರ್ನ್:ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್‌ನ 2 ನೇ ದಿನ (ಡಿಸೆಂಬರ್ 27) ಮೈದಾನದಲ್ಲಿ ಹಾಜರಿದ್ದ ಅಭಿಮಾನಿಯೊಬ್ಬರಲ್ಲಿ ಕೋವಿಡ್-19 ಸೋಂಕು ಪತ್ತೆಯಾಗಿದೆ ಎಂದು ಮೆಲ್ಬೋರ್ನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ಬುಧವಾರ ದೃಢಪಡಿಸಿದೆ.
ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ (ಎಂಸಿಜಿ) ನಡೆದ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಪಾಲ್ಗೊಳ್ಳುವಾಗ ಅವರಲ್ಲಿ ಸೋಂಕು ಇರಲಿಲ್ಲ. ಆದರೆ, ಈಗ ಅವರು ಸೋಂಕಿಗೆ ತುತ್ತಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಆರೋಗ್ಯ ಮತ್ತು ಮಾನವ ಸೇವೆಗಳ ಇಲಾಖೆ (ಡಿಹೆಚ್‌ಹೆಚ್ಎಸ್), 2020 ರ ಡಿಸೆಂಬರ್ 27 ರ ಭಾನುವಾರ ಮಧ್ಯಾಹ್ನ 12.30 ರಿಂದ ಮಧ್ಯಾಹ್ನ 3.30ರ ನಡುವೆ ದಿ ಗ್ರೇಟ್ ಸದರ್ನ್ ಸ್ಟ್ಯಾಂಡ್‌ನಲ್ಲಿರುವ 5ನೇ ವಲಯದಲ್ಲಿ ಕುಳಿತಿದ್ದ ಪ್ರೇಕ್ಷಕರು ಪರೀಕ್ಷೆಗೆ ಒಳಗಾಗಬೇಕು ಮತ್ತು ವರದಿ ನೆಗೆಟಿವ್ ಬರುವವರೆಗೆ ಸ್ವಯಂ - ಕ್ವಾರಂಟೈನ್ಗೆ ಒಳಗಾಗುವಂತೆ ತಿಳಿಸಿದೆ.
ಓದಿಇಂಗ್ಲಿಷ್ ಪ್ರೀಮಿಯರ್ ಲೀಗ್: ಆಟಗಾರರು ಸೇರಿ 40 ಮಂದಿಗೆ ಕೊರೊನಾ ಸೋಂಕು ದೃಢ
ಜನವರಿ 7 ರಿಂದ ಆರಂಭವಾಗಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯಕ್ಕೆ ಸಿಡ್ನಿ ಕ್ರಿಕೆಟ್ ಮೈದಾನದ ಶೇಕಡಾ 25 ರಷ್ಟು ಸಾಮರ್ಥ್ಯ ಪ್ರೇಕ್ಷಕರು ಮೈದಾನದಲ್ಲಿರುತ್ತಾರೆ. ಎಲ್ಲರೂ ಕೂಡ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿ, ನ್ಯೂ ಸೌಥ್ ವೇಲ್ಸ್ ಸರ್ಕಾರ ಆದೇಶ ಹೊರಡಿಸಿದೆ.