ನವದೆಹಲಿ:ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಟೆಸ್ಟ್ ಪಂದ್ಯಗಳ ಕ್ರಿಕೆಟ್ ಸರಣಿಗಾಗಿ ತಂಡಕ್ಕೆ ಆಯ್ಕೆಯಾಗಿರುವ ಯುವ ಆಟಗಾರ ಶುಬಮನ್ ಗಿಲ್ ನನಗೆ ರೋಲ್ ಮಾಡೆಲ್‌ಗಳಿದ್ದಾರೆ, ಆದ್ರೆ ಅವರನ್ನ ನಾನು ಕಾಪಿ ಮಾಡೋದಿಲ್ಲ ಎಂದಿದ್ದಾರೆ.
ನನಗೆ ರೋಲ್ ಮಾಡೆಲ್‌ಗಳಿದ್ದಾರೆ, ಆದ್ರೆ ಕಾಪಿ ಮಾಡಲ್ಲ: ಶುಬಮನ್ ಗಿಲ್ - ವಿರಾಟ್ ಕೊಹ್ಲಿ
2007 ಟಿ-20 ವಿಶ್ವಕಪ್ ಹೀರೊ ಯುವರಾಜ್ ಸಿಂಗ್ ನನಗೆ ಸ್ಫೂರ್ತಿ ಎಂದು ಶುಬಮನ್ ಗಿಲ್ ಹೇಳಿದ್ದಾರೆ.
ಶುಬಮನ್ ಗಿಲ್
ವಿರಾಟ್ ಕೊಹ್ಲಿ ಆಟದ ರೀತಿ ನನಗೆ ತುಂಬಾ ಇಷ್ಟ. ಆಟಗಾರರ ಶೈಲಿ ವಿಭಿನ್ನ. ಅದನ್ನು ಕಾಪಿ ಮಾಡಬಾರದು ಎಂದು ದೇಶಿ ಕ್ರಿಕೆಟ್ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಗಿಲ್ ಹೇಳಿದ್ರು.
2017ರಲ್ಲಿ ಪಂಜಾಬ್ ತಂಡ ಸೇರಿಕೊಂಡಾಗ ಹರ್ಭಜನ್ ಸಿಂಗ್ ಮತ್ತು ಯುವರಾಜ್ ಸಿಂಗ್ ಜೊತೆ ಆಡುವ ಅವಕಾಶ ದೊರೆಯಿತು. 2007ರ ಟಿ-20 ವಿಶ್ವಕಪ್ ಹೀರೊ ಯುವರಾಜ್ ನನಗೆ ಸ್ಫೂರ್ತಿ, ಅವರ ಕ್ರಿಕೆಟ್ ಜರ್ನಿ, ಕ್ಯಾನ್ಸರ್ ವಿರುದ್ಧ ಹೋರಾಡಿದ ರೀತಿ, ಆಟವನ್ನು ಅವರು ನೋಡುವ ರೀತಿ ಪ್ರತಿಯೊಂದು ನಮಗೆ ಸ್ಫೂರ್ತಿ ನೀಡುತ್ತದೆ ಎಂದು ಹರ್ಷ ವ್ಯಕ್ತಪಡಿಸಿದ್ರು.
Last Updated : Sep 13, 2019, 7:51 PM IST