ಪಟಿಯಾಲ( ಪಂಜಾಬ್): ಭಾರತದ ಮಹಿಳಾ ಟಿ-20 ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ಗೆ ಕೊರೊನಾ ಸೋಂಕು ತಗುಲಿದೆ.
ಮಾರ್ಚ್ 17 ರಂದು ಐದನೇ ಏಕದಿನ ಪಂದ್ಯದಲ್ಲಿ ಗಾಯಗೊಂಡ ನಂತರ ಲಖನೌದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿಯಲ್ಲಿ ಆಡದ ಕೌರ್, ಲಘು ಜ್ವರ ಕಾಣಿಸಿಕೊಂಡ ನಂತರ ಸೋಮವಾರ ಸ್ವತಃ ಪರೀಕ್ಷೆಗೆ ಒಳಗಾಗಿದ್ದರು.
"ಕೌರ್ ಮನೆಯಲ್ಲಿ ಸ್ವಯಂ ಕ್ವಾರಂಟೈನ್ ಆಗಿದ್ದರು. ಅವರು ನಿನ್ನೆ ಪರೀಕ್ಷೆಗೆ ಒಳಗಾಗಿದ್ದರು, ಇಂದು ಬೆಳಗ್ಗೆ ಅವರ ವರದಿ ಬಂದಿದ್ದು, ಅದರಲ್ಲಿ ಕೋವಿಡ್ ಸೋಂಕು ತಗುಲಿರುವುದು ದೃಢವಾಗಿದೆ. ನಾಲ್ಕು ದಿನಗಳಿಂದ ಅವರು ಲಘು ಜ್ವರದಿಂದ ಬಳಲುತ್ತಿದ್ದರು, ಆದ್ದರಿಂದ ಪರೀಕ್ಷೆಗೆ ಒಳಪಡುವುದು ಉತ್ತಮ ಎಂದು ಭಾವಿಸಿದ್ದರು. ಸದ್ಯ ಅವರು ಕ್ವಾರಂಟೈನಲ್ಲಿದ್ದು ಶೀಘ್ರದಲ್ಲೇ ಚೇತರಿಸಿಕೊಳ್ಳಲಿದ್ದಾರೆ" ಎಂದು ಮೂಲಗಳು ತಿಳಿಸಿವೆ.
ಓದಿ : ಇರ್ಫಾನ್ ಪಠಾಣ್ಗೂ ಕೊರೊನಾ.. 4ಕ್ಕೇರಿದ ಭಾರತ ಲೆಜೆಂಡ್ಸ್ ತಂಡದ ಸೋಂಕಿತರ ಸಂಖ್ಯೆ!