ಕರ್ನಾಟಕ

karnataka

By

Published : Jul 22, 2020, 6:30 PM IST

ETV Bharat / sports

15 ಸದಸ್ಯರ ತಂಡದಲ್ಲಿದ್ದ ನನ್ನನ್ನು 26ರ ತಂಡದಿಂದ ಕೈಬಿಟ್ಟಿರುವುದು ನೋವು ತಂದಿದೆ: ಆಸ್ಟ್ರೇಲಿಯಾ ಕ್ರಿಕೆಟಿಗ

ಕಳೆದ ಸರಣಿಯಲ್ಲಿ ನಾನು ತಂಡದ ಭಾಗವಾಗಿದ್ದರೂ ಈ ಸರಣಿಗೆ ನನ್ನನ್ನು ಕಡೆಗಣಿಸಿ ಇಂಗ್ಲೆಂಡ್​ ಪ್ರವಾಸಕ್ಕೆ 11 ಆಟಗಾರರಿಗೆ ಅವಕಾಶ ನೀಡಿರುವುದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದಿದ್ದಾರೆ.

ಪೀಟರ್​ ಹ್ಯಾಂಡ್​ಸ್ಕೊಂಬ್
ಪೀಟರ್​ ಹ್ಯಾಂಡ್​ಸ್ಕೊಂಬ್

ಮೆಲಬೋರ್ನ್​: ಕಳೆದ ವಾರ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್​ ವಿರುದ್ಧದ ಸೀಮಿತ ಓವರ್​ಗಳ ಸರಣಿಗೆ 26 ಆಟಗಾರರ ಪ್ರಾಥಮಿಕ ತಂಡವನ್ನು ಘೋಷಣೆ ಮಾಡಿದ್ದು, ಅದರಲ್ಲಿ ತಮ್ಮನ್ನು ಕೈಬಿಟ್ಟಿರುವುದಕ್ಕೆ ಪೀಟರ್​ ಹ್ಯಾಂಡ್​ಸ್ಕೊಂಬ್​ ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ಸ್ಟಾಗ್ರಾಮ್​ ಪೋಸ್ಟ್​ನಲ್ಲಿ 26 ಸದಸ್ಯರ ಆಸ್ಟ್ರೇಲಿಯಾ ತಂಡವನ್ನು ನೋಡಿದ ಪೀಟರ್​ ಹ್ಯಾಂಡ್​ಸ್ಕೊಂಬ್​ ಆಶ್ಚರ್ಯಗೊಂಡಿದ್ದಾರೆ.

"ಇಂಗ್ಲೆಂಡ್​ ವಿರುದ್ಧದ ಏಕದಿನ ಸರಣಿಗಾಗಿ ಆಸ್ಟ್ರೇಲಿಯಾ ಪ್ರಕಟಿಸಿರುವ 26 ಸದಸ್ಯರ ತಂಡದ ಹೆಸರನ್ನು ನಾನು ಇನ್ಸ್ಟಾಗ್ರಾಮ್​ ಪೋಸ್ಟ್​ನಲ್ಲಿ ನೋಡಿದೆ. ಆ ಲಿಸ್ಟ್​ನಲ್ಲಿ ನಾನಿಲ್ಲ ಎಂದು ಊಹಿಸಿದೆ "ಎಂದು ಅವರು ತಿಳಿಸಿದ್ದಾರೆ.

"ಭಾರತದ ವಿರುದ್ಧ ಈ ವರ್ಷಾರಂಭದಲ್ಲಿ ನಡೆದಿದ್ದ ಏಕದಿನ ಸರಣಿಯಲ್ಲಿ ನಾನು 15 ಸದಸ್ಯರ ತಂಡದಲ್ಲಿದ್ದೆ. ನಾನು ಕಳೆದ ಒಂದುವರೆ ವರ್ಷದಲ್ಲಿ ನೀಡಿರುವ ಪ್ರದರ್ಶನವನ್ನು ಪರಿಗಣನೆಗೆ ತೆಗೆದುಕೊಂಡರೆ ನಾನೀಗಲು ಟಾಪ್​ 20ರಲ್ಲಿದ್ದೇನೆ. ಆದರೆ ನನ್ನನ್ನು 26 ಆಟಗಾರರ ಲಿಸ್ಟ್​ನಿಂದ ಹೊರಗಿಟ್ಟಿರುವುದು ನೋವು ತಂದಿದೆ" ಎಂದು ಹ್ಯಾಂಡ್​ಸ್ಕೊಂಬ್​ ಬೇಸರ ವ್ಯಕ್ತಪಿಡಿಸಿದ್ದಾರೆ.

ಕಳೆದ ಸರಣಿಯಲ್ಲಿ ನಾನು ತಂಡದ ಭಾಗವಾಗಿದ್ದರೂ ಈ ಸರಣಿಗೆ ನನ್ನನ್ನು ಕಡೆಗಣಿಸಿ ಇಂಗ್ಲೆಂಡ್​ ಪ್ರವಾಸಕ್ಕೆ 11 ಆಟಗಾರರಿಗೆ ಅವಕಾಶ ನೀಡಿರುವುದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದಿದ್ದಾರೆ.

ಈ ವಿಚಾರವಾಗಿ ಆಯ್ಕೆ ಸಮಿತಿ ಮುಖ್ಯಸ್ಥ ಜಾರ್ಜ್​ ಬೈಲಿಯೊಡನೆ ಮಾತನಾಡಲಿದ್ದೇನೆ. ಟಾಪ್​ 15ರಲ್ಲಿದ್ದ ನನ್ನನ್ನು 26ರ ತಂಡದಿಂದ ಕೈಬಿಟ್ಟಿರುವುದಕ್ಕೆ ನನಗೆ ಕಾರಣ ಗೊತ್ತಾಗಬೇಕಿದೆ ಎಂದು ಹ್ಯಾಂಡ್​ಸ್ಕೊಂಬ್​ ಹೇಳಿದ್ದಾರೆ.

ABOUT THE AUTHOR

...view details