ಗಾಲೆ :ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯನ್ನು ಪ್ರವಾಸಿ ಇಂಗ್ಲೆಂಡ್ ತಂಡ 2-0ಯಲ್ಲಿ ಗೆದ್ದು, ಸಿಂಹಳೀಯರ ನಾಡಿನಲ್ಲಿ ಸತತ 2ನೇ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ.
ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಹಲವು ವಿಶೇಷ ದಾಖಲೆ ಬರೆದ ಜೋ ರೂಟ್ - ಜೋ ರೂಟ್ ದಾಖಲೆಗಳು
ಮೊದಲ ಪಂದ್ಯವನ್ನು 7 ವಿಕೆಟ್ಗಳಿಂದ ಗೆದ್ದಿದ್ದ ಇಂಗ್ಲೆಂಡ್, ಇಂದು ಕೊನೆಗೊಂಡ ಎರಡನೇ ಪಂದ್ಯದಲ್ಲಿ 6 ವಿಕೆಟ್ಗಳಿಂದ ಗೆದ್ದು ಸರಣಿಯನ್ನು 2-0ಯಲ್ಲಿ ಕ್ಲೀನ್ ಸ್ವೀಪ್ ಸಾಧಿಸಿತು. ಈ ಸರಣಿಯಲ್ಲಿ 426 ರನ್ಗಳಿಸಿದ ಜೋ ರೂಟ್ ಪಂದ್ಯ ಶ್ರೇಷ್ಠ ಮತ್ತು ಟೂರ್ನಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು..
ಜೋ ರೂಟ್ ದಾಖಲೆ
ಮೊದಲ ಪಂದ್ಯವನ್ನು 7 ವಿಕೆಟ್ಗಳಿಂದ ಗೆದ್ದಿದ್ದ ಇಂಗ್ಲೆಂಡ್, ಇಂದು ಕೊನೆಗೊಂಡ ಎರಡನೇ ಪಂದ್ಯದಲ್ಲಿ 6 ವಿಕೆಟ್ಗಳಿಂದ ಗೆದ್ದು ಸರಣಿಯನ್ನು 2-0ಯಲ್ಲಿ ಕ್ಲೀನ್ ಸ್ವೀಪ್ ಸಾಧಿಸಿತು. ಈ ಸರಣಿಯಲ್ಲಿ 426 ರನ್ ಗಳಿಸಿದ ಜೋ ರೂಟ್ ಪಂದ್ಯ ಶ್ರೇಷ್ಠ ಮತ್ತು ಟೂರ್ನಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಜೋ ರೂಟ್ ಈ ಸರಣಿಯಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಗಳಿಸಿದ್ದಲ್ಲದೆ ಹಲವು ಮಹತ್ವದ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
- 2 ಪಂದ್ಯಗಳಿಂದ 426 ರನ್ಗಳಿಸಿದ ರೂಟ್‌ಗಿದು, ಶ್ರೀಲಂಕಾ ನೆಲದಲ್ಲಿ ವಿದೇಶಿ ನಾಯಕನೊಬ್ಬನಿಂದ ದಾಖಲಾದ ಗರಿಷ್ಠ ರನ್ ಇದಾಗಿದೆ. ಈ ಹಿಂದೆ 2003ರಲ್ಲಿ ನ್ಯೂಜಿಲ್ಯಾಂಡ್ನ ಸ್ಟೀಫನ್ ಫ್ಲಾಮಿಂಗ್ 376, 1998ರಲ್ಲಿ 357 ರನ್ಗಳಿಸಿದ್ದರು. 1997ರಲ್ಲಿ ಸಚಿನ್ ತೆಂಡೂಲ್ಕರ್ 290 ರನ್ಗಳಿಸಿದ್ದು, ಈ ಹಿಂದಿನ ದಾಖಲೆಯಾಗಿದೆ.
- ರೂಟ್ 2ನೇ ಪಂದ್ಯದ 2ನೇ ಇನ್ನಿಂಗ್ಸ್ನಲ್ಲಿ ಯಾವುದೇ ರನ್ ನೀಡದೆ 2 ವಿಕೆಟ್ ಪಡೆದ ಮೊದಲ ಬೌಲರ್ ಎನಿಸಿಕೊಂಡರು. ಈ ಹಿಂದೆ ಭಾರತದ ಸುರೇಶ್ ರೈನಾ, ವಿಂಡೀಸ್ನ ರಾಮನರೇಶ್ ಸರವಣ್ ಮತ್ತು ದಕ್ಷಿಣ ಆಫ್ರಿಕಾದ ಸುಸಾನ್ ಬೆನಡೆ 1 ರನ್ ನೀಡಿ 2 ವಿಕೆಟ್ ಪಡೆದಿದ್ದರು.
- ಜೋ ರೂಟ್ ಒಂದೇ ಸ್ಥಳದಲ್ಲಿ, ಒಂದೇ ಸರಣಿಯಲ್ಲಿ 2 ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೊದಲ ಕ್ರಿಕೆಟಿಗ ಎಂಬ ಶ್ರೇಯಕ್ಕೆ ಇಂಗ್ಲೆಂಡ್ ನಾಯಕ ಪಾತ್ರರಾದರು.
- ಜೋ ರೂಟ್ ನಾಯಕನಾಗಿ ಶ್ರೀಲಂಕಾ ವಿರುದ್ಧ ಆಡಿದ 5 ಪಂದ್ಯಗಳನ್ನು ಗೆದ್ದ ಏಕೈಕ ಇಂಗ್ಲೆಂಡ್ ತಂಡದ ನಾಯಕ ಎನಿಸಿಕೊಂಡರು.