ಜೋಹನ್ ಬರ್ಗ್ಸ್: ಅವ್ಯವಸ್ಥೆಯಿಂದಾಗಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಅಲ್ಲಿನ ಕ್ರೀಡಾ ಸಚಿವ ನಾಥಿ ಮೆಥೆತ್ವಾ ಅವರ ಕೋಪವನ್ನು ಎದರಿಸುತ್ತಿರುವುದರಿಂದ ನವೆಂಬರ್ ಕೊನೆಯಲ್ಲಿ ಆರಂಭವಾಗಬೇಕಿದ್ದ ಇಂಗ್ಲೆಂಡ್ ವಿರುದ್ಧದ ವೈಟ್ ಬಾಲ್ ಸರಣಿ ರದ್ದಾಗುವ ಅಪಾಯಕ್ಕೆ ಸಿಲುಕಿದೆ.
"ಇಂಗ್ಲೆಂಡ್ ಆಲೋಚನೆ ಏನಾಗಿದೆ ಎಂದು ನನಗೆ ತಿಳಿದಿಲ್ಲ. ಆದರೆ ಇಂದು ಸಂಜೆಯೊಳಗೆ ಕ್ರಿಕೆಟ್ ಮಂಡಳಿಯ ಸದಸ್ಯರ ಕೌನ್ಸಿಲ್ ಸರಿಯಾದ ನಿರ್ಧಾರ ತೆಗೆದುಕೊಳ್ಳದಿದ್ದರೆ ಇಂಗ್ಲೆಂಡ್ ತಂಡ ಬಹುಶಃ ನಿರಾಶೆಗೊಳ್ಳಬೇಕಾಗುತ್ತದೆ. ಇದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ" ಎಂದು ಮಂಡಳಿಯ ಮಧ್ಯಂತರ ಅಧ್ಯಕ್ಷ ಝಾಕ್ ಯಾಕೂಬ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.