ಕರ್ನಾಟಕ

karnataka

ಐರ್ಲೆಂಡ್​ ವಿರುದ್ಧ ಸರಣಿಗೆ 24 ಸದಸ್ಯರ ತರಬೇತಿ ತಂಡ ಪ್ರಕಟಿಸಿದ ಇಂಗ್ಲೆಂಡ್​

ಈಗಾಗಲೆ ಈ 24 ಸದಸ್ಯರ ತಂಡ ತರಬೇತಿ ಶುರುಮಾಡಿದ್ದು, ಗುರುವಾರ ಮತ್ತು ಶುಕ್ರವಾರ ಈ ಆಟಗಾರರನ್ನು ಎರಡು ತಂಡಗಳಾಗಿ ವಿಭಾಗಿಸಿ ಪಂದ್ಯ ಏರ್ಪಾಡು ನಡೆಸಲಾಗುವುದು. ನಂತರ ಇಂಗ್ಲೆಂಡ್​ ಲೈಯನ್ಸ್​ ಮತ್ತು ಐರ್ಲೆಂಡ್​ ತಂಡಗಳ ನಡುವೆ ಅಭ್ಯಾಸ ಪಂದ್ಯಗಳು ನಡೆಯಲಿವೆ ಎಂದು ಇಸಿಬಿ ತಿಳಿಸಿದೆ.

By

Published : Jul 21, 2020, 7:15 PM IST

Published : Jul 21, 2020, 7:15 PM IST

ಇಂಗ್ಲೆಂಡ್ ಐರ್ಲೆಂಡ್ ಏಕದಿನ ಸರಣಿ
ಇಂಗ್ಲೆಂಡ್ ಐರ್ಲೆಂಡ್ ಏಕದಿನ ಸರಣಿ

ಲಂಡನ್​: ಮುಂಬರುವ ಐರ್ಲೆಂಡ್​ ವಿರುದ್ಧದ ಏಕದಿನ ಸರಣಿಗೆ 24 ಸದಸ್ಯರ ತರಬೇತಿ ತಂಡವನ್ನು ಇಂಗ್ಲೆಂಡ್​ ಕ್ರಿಕೆಟ್​ ಬೋರ್ಡ್​ ಪ್ರಕಟಿಸಿದೆ.

ಇಂಗ್ಲೆಂಡ್​ ತಂಡ ಜುಲೈ 30, ಆಗಸ್ಟ್​ 1 ಹಾಗೂ ಆಗಸ್ಟ್​ 4 ರಂದು ಮೂರು ಏಕದಿನ ಪಂದ್ಯಗಳನ್ನಾಡಲಿದೆ. ಈ ಸರಣಿಗೆ ಜೋ ರೂಟ್​, ಬೆನ್​​ ಸ್ಟೋಕ್ಸ್​ ಸೇರಿದಂತೆ ಟೆಸ್ಟ್​ ಪಂದ್ಯಗಳನ್ನಾಡುತ್ತಿರುವ ಯಾವ ಆಟಗಾರನನ್ನು ಆಯ್ಕೆ ಮಾಡಿಲ್ಲ. ಹೊಸಬರು ಮತ್ತು ಸೀಮಿತ ಓವರ್​ಗಳ ಖಾಯಂ ಆಟಗಾರರನ್ನು ಆಯ್ಕೆ ಮಾಡಿದ್ದು, ಮೊಯಿನ್​ ಆಲಿಯನ್ನು ಉಪನಾಯಕ ನನ್ನಾಗಿ ಆಯ್ಕೆ ಮಾಡಿದೆ.

ಈಗಾಗಲೆ ಈ 24 ಸದಸ್ಯರ ತಂಡ ತರಬೇತಿ ಶುರುಮಾಡಿದ್ದು, ಗುರುವಾರ ಮತ್ತು ಶುಕ್ರವಾರ ಈ ಆಟಗಾರರನ್ನು ಎರಡು ತಂಡಗಳಾಗಿ ವಿಭಾಗಿಸಿ ಪಂದ್ಯ ಏರ್ಪಾಡು ನಡೆಸಲಾಗುವುದು. ನಂತರ ಇಂಗ್ಲೆಂಡ್​ ಲೈಯನ್ಸ್​ ಮತ್ತು ಐರ್ಲೆಂಡ್​ ತಂಡಗಳ ನಡುವೆ ಅಭ್ಯಾಸ ಪಂದ್ಯಗಳು ನಡೆಯಲಿವೆ ಎಂದು ಇಸಿಬಿ ತಿಳಿಸಿದೆ.

ಬಟ್ಲರ್​ ಅನುಪಸ್ಥಿತಿಯಲ್ಲಿ ಟೆಸ್ಟ್​ ತಂಡದಲ್ಲಿ ಅವಕಾಶ ಕಳೆದುಕೊಂಡಿರುವ ಜಾನಿ ಬೈರ್‌ಸ್ಟೋವ್‌ ಈ ಸರಣಿಯಲ್ಲಿ ವಿಕೆಟ್​ ಕೀಪಿಂಗ್‌ ಜವಾಬ್ದಾರಿ ನಿಭಾಯಿಸಲಿದ್ದಾರೆ. ಇನ್ನು ಆಲ್​ರೌಂಡರ್​ ಲಿಯಾಮ್ ಡೇವ್​ಸನ್​ , ಬೆನ್​ ಡಕೆಟ್​ ಹಾಗೂ ಸ್ಯಾಮ್​ ಬಿಲ್ಲಿಂಗ್ಸ್​ ತಂಡಕ್ಕೆ ಮರಳಿದ್ದಾರೆ.

ಇಂಗ್ಲೆಂಡ್​ ತಂಡದ 24 ಸದಸ್ಯರ ತಂಡ

ಇಯಾನ್‌ ಮಾರ್ಗನ್ (ನಾಯಕ), ಮೊಯಿನ್‌ ಅಲಿ (ಉಪನಾಯಕ), ಜೇಸನ್‌ ರಾಯ್ ,ಜಾನಿ ಬೈರ್ಸ್ಟೋವ್​, ಜೇಮ್ಸ್‌ ವಿನ್ಸ್ ,ಟಾಮ್‌ ಬ್ಯಾನ್​ಟನ್, ಸ್ಯಾಮ್‌ ಬಿಲ್ಲಿಂಗ್ಸ್‌, ಹೆನ್ರಿ ಬ್ರೂಕ್ಸ್‌, ಬ್ರಿಡನ್ ಕಾರ್ಸ್‌, ಟಾಮ್‌ ಕರ್ರನ್, ಲಿಯಾಮ್‌ ಡಾಸನ್​, ಬೆನ್‌ ಡಕೆಟ್, ಲೌರೀ ಇವನ್ಸ್‌, ರಿಚರ್ಡ್‌ ಗ್ಲೀಸನ್, ಲೂಯಿಸ್‌ ಗ್ರೆಗೊರಿ, ಸ್ಯಾಮ್‌ ಹೇಯ್ನ್, ಟಾಮ್‌ ಹೆಲ್ಮ್, ಲಿಯಾಮ್‌ ಲಿವಿಂಗ್‌ಸ್ಟೋನ್‌, ಶಕಿಬ್ ಮಹ್ಮೂದ್, ಮ್ಯಾಥ್ಯೂ ಪರ್ಕಿನ್ಸನ್, ಆದಿಲ್‌ ರಶೀದ್, ಫಿಲ್ ಸಾಲ್ಟ್, ರೀಸ್‌ ಟಾಪ್ಲೀ, ಡೇವಿಡ್‌ ವಿಲ್ಲೆ.

ABOUT THE AUTHOR

...view details