ಮ್ಯಾಂಚೆಸ್ಟರ್:ಓಲ್ಡ್ ಟ್ರ್ಯಾಫೋರ್ಡ್ನಲ್ಲಿ ನಡೆದ ಮೂರನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ಗೆ ಆತಿಥೇಯ ಇಂಗ್ಲೆಂಡ್ 399 ರನ್ ಗುರಿ ನೀಡಿದೆ.
ವಿಂಡೀಸ್ ತಂಡವನ್ನು 197 ರನ್ಗಳಿಗೆ ಕಟ್ಟಿ ಹಾಕಿದ ಜೋ ರೂಟ್ ಪಡೆ ಮೂರನೇ ದಿನವೇ 58 ಓವರ್ಗಳ ಬ್ಯಾಟಿಂಗ್ ನಡೆಸಿ 2 ವಿಕೆಟ್ ಕಳೆದುಕೊಂಡು 226 ರನ್ಗಳಿಸಿದ್ದ ವೇಳೆ ಡಿಕ್ಲೇರ್ ಘೋಷಿಸಿಕೊಂಡಿತು. ಒಟ್ಟಾರೆ ಮೊದಲ ಇನ್ನಿಂಗ್ಸ್ನ 172 ರನ್ಗಳ ಮುನ್ನಡೆ ಸೇರಿದಂತೆ ವಿಂಡೀಸ್ಗೆ ಗೆಲ್ಲಲು 399 ರನ್ಗಳ ಬೃಹತ್ ಗುರಿ ನೀಡಿದೆ.
ಎರಡನೇ ಇನಿಂಗ್ನಲ್ಲಿ ಇಂಗ್ಲೆಂಡ್ ಪರ ರೋನಿ ಬರ್ನ್ಸ್ 90 ಹಾಗೂ ಡೊಮೆನಿಕ್ ಸಿಬ್ಲೀ 56 ಹಾಗೂ ನಾಯಕ ಜೋ ರೂಟ್ ಔಟಾಗದೆ 68 ರನ್ಗಳಿಸಿದರು.
ಇನ್ನು 399 ರನ್ಗಳ ಗುರಿ ಪಡೆದಿರುವ ವೆಸ್ಟ್ ಇಂಡೀಸ್ ಪಡೆ ಮೂರನೇ ದಿನವೇ ಕೇವಲ 6 ಓವರ್ಗಳಲ್ಲಿ 10 ರನ್ಗಳಿಸಿ 2 ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಗಿದೆ. ಆರಂಭಿಕ ಕ್ಯಾಂಪ್ಬೆಲ್ ಸೊನ್ನೆ ಸುತ್ತಿದರೆ, 3ನೇ ಕ್ರಮಾಂಕಕ್ಕೆ ಬಡ್ತಿ ಪಡೆದು ಬಂದ ಕೆಮರ್ ರೋಚ್ 4 ನರ್ಗಳಿಸಿ ಔಟಾದರು. ಇವರಿಬ್ಬರ ವಿಕೆಟ್ಗಳನ್ನು ಸ್ಟುವರ್ಟ್ ಬ್ರಾಡ್ ಪಡೆದರು.
ಇನ್ನು ಎರಡು ದಿನಗಳ ಆಟ ಬಾಕಿ ಉಳಿದಿದ್ದು 2 ವಿಕೆಟ್ ಕಳೆದುಕೊಂಡಿರುವ ವಿಂಡೀಸ್ ತಂಡ ಗೆಲ್ಲಲು ಇನ್ನು389 ರನ್ಗಳಿಸಬೇಕಿದೆ. ಇನ್ನು ಇಂಗ್ಲೆಂಡ್ ತಂಡ 8 ವಿಕೆಟ್ ಪಡೆದರೆ ಸರಣಿಯನ್ನು 2-1ರಲ್ಲಿ ವಶಪಡಿಸಿಕೊಳ್ಳಲಿದೆ.