ಕರ್ನಾಟಕ

karnataka

ETV Bharat / sports

ಪ್ರೇಕ್ಷಕರಿಲ್ಲದೆ ಆಟ ಆಡುವುದನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ.. ಕಿಂಗ್‌ ವಿರಾಟ್​ ಕೊಹ್ಲಿ - ಭಾರತ ತಂಡದ ನಾಯಕ ವಿರಾಟ್

ನಾವು ಈವರೆಗೂ ಪ್ರೇಕ್ಷಕರು ತುಂಬಿ ತುಳುಕುವ ಕ್ರೀಡಾಂಗಣದಲ್ಲಿ ಆಡಿ ಅಭ್ಯಾಸವಾಗಿದೆ. ಖಾಲಿ ಕ್ರೀಡಾಂಗಣದಲ್ಲಿ ಆಡುವುದು ಸಾಧ್ಯವಾದರೂ, ಎಲ್ಲರೂ ಯಾವ ರೀತಿ ಸ್ವೀಕರಿಸುತ್ತಾರೆ ಎಂಬುದು ನನಗೆ ಗೊತ್ತಿಲ್ಲ ಎಂದು ಕೊಹ್ಲಿ ಟಿವಿ ಶೋನಲ್ಲಿ ಹೇಳಿದ್ದಾರೆ. ಪ್ರೇಕ್ಷಕರಿಲ್ಲದೆ ಪಂದ್ಯ ನಡೆಯುವುದು ಪ್ರಸ್ತುತ ಉತ್ತಮ ನಿರ್ಧಾರವಾಗಿದೆ. ಆದರೆ, ಹೀಗೆ ಕೆಲವು ಮ್ಯಾಜಿಕ್​ ಸಂಗತಿಗಳು ಮಿಸ್​ ಮಾಡಿಕೊಳ್ಳಬಹುದು.

ವಿರಾಟ್​ ಕೊಹ್ಲಿ
ವಿರಾಟ್​ ಕೊಹ್ಲಿ

By

Published : May 9, 2020, 9:14 AM IST

ನವದೆಹಲಿ :ಪ್ರೇಕ್ಷಕರಿಲ್ಲದೆ ಕ್ರಿಕೆಟ್​ ಪಂದ್ಯಗಳನ್ನಾಡುವುದು ಸಾಧ್ಯ. ಆದರೂ ಪ್ರೇಕ್ಷಕರ ಮಧ್ಯೆ ಆಡುವಾಗ ಸಿಗುವ ಮೋಹಕತೆ ಇರುವುದಿಲ್ಲ ಎಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅಭಿಪ್ರಾಯ ಪಟ್ಟಿದ್ದಾರೆ.

ಕೊರೊನಾ ವೈರಸ್​ ಭೀತಿಯಿಂದ ಕ್ರಿಕೆಟ್​ ಪಂದ್ಯಗಳನ್ನು ಪ್ರೇಕ್ಷಕರಿಲ್ಲದೆ ನಡೆಸುವ ಆಲೋಚನೆ ಬಗ್ಗೆ ಭಾರತದ ನಾಯಕ ವಿರಾಟ್​ ಕೊಹ್ಲಿ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಖಾಲಿ ಕ್ರೀಡಾಂಗಣದಲ್ಲಿ ಪಂದ್ಯವನ್ನು ನಡೆಸಬಹುದು. ಆದರೆ, ಪ್ರೇಕ್ಷರ ಸಮ್ಮುಖದಲ್ಲಿ ಆಡುವಾಗ ಸಿಗುವಂತಹ ಮಜಾ ಸಿಗುವುದಿಲ್ಲ ಎಂದು ರನ್​ ಮಷಿನ್​ ಕೊಹ್ಲಿ ಅಭಿಪ್ರಾಯ ಪಟ್ಟಿದ್ದಾರೆ. ಈ ಮೊದಲು ಆಸ್ಟ್ರೇಲಿಯಾ ಲೆಜೆಂಡ್​ ಅಲೆನ್​ ಬಾರ್ಡರ್​ ಕೂಡ ಪ್ರೇಕ್ಷಕರಿಲ್ಲದೆ ಕ್ರಿಕೆಟ್​ ಆಡುವುದನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ್ದರು.

ನಾವು ಈವರೆಗೂ ಪ್ರೇಕ್ಷಕರು ತುಂಬಿ ತುಳುಕುವ ಕ್ರೀಡಾಂಗಣದಲ್ಲಿ ಆಡಿ ಅಭ್ಯಾಸವಾಗಿದೆ. ಖಾಲಿ ಕ್ರೀಡಾಂಗಣದಲ್ಲಿ ಆಡುವುದು ಸಾಧ್ಯವಾದರೂ, ಎಲ್ಲರೂ ಯಾವ ರೀತಿ ಸ್ವೀಕರಿಸುತ್ತಾರೆ ಎಂಬುದು ನನಗೆ ಗೊತ್ತಿಲ್ಲ ಎಂದು ಕೊಹ್ಲಿ ಟಿವಿ ಶೋನಲ್ಲಿ ಹೇಳಿದ್ದಾರೆ. ಪ್ರೇಕ್ಷಕರಿಲ್ಲದೆ ಪಂದ್ಯ ನಡೆಯುವುದು ಪ್ರಸ್ತುತ ಉತ್ತಮ ನಿರ್ಧಾರವಾಗಿದೆ. ಆದರೆ, ಹೀಗೆ ಕೆಲವು ಮ್ಯಾಜಿಕ್​ ಸಂಗತಿಗಳು ಮಿಸ್​ ಮಾಡಿಕೊಳ್ಳಬಹುದು. ಅದೇ ಪ್ರೇಕ್ಷಕರ ಭಾವೋದ್ವೇಗ ಹಾಗೂ ರೋಚಕತೆಯನ್ನು ಸೃಷ್ಟಿಸಲು ಸಾಧ್ಯವಿಲ್ಲ ಎಂದು 31 ವರ್ಷದ ಆಟಗಾರರ ತಿಳಿಸಿದ್ದಾರೆ.

ಕೊರೊನಾ ವೈರಸ್​ ಸೋಂಕಿನಿಂದ ವಿಶ್ವದಾದ್ತಂತ 2.6 ಲಕ್ಷ ಮಂದಿ ಮೃತಪಟ್ಟಿದ್ದಾರೆ. ಇದರಿಂದ ಈಗಾಗಲೇ ಐಪಿಎಲ್​, ಒಲಿಂಪಿಕ್​ ಸೇರಿ ಹಲವು ಟೂರ್ನಿಗಳು ರದ್ದಾಗಿವೆ. ಇನ್ನು ಅಕ್ಟೋಬರ್​ನಲ್ಲಿ ನಡೆಯಬೇಕಿರುವ ಟಿ20 ವಿಶ್ವಕಪ್ ಟೂರ್ನಿ ನಡೆಯುವುದು ಅನುಮಾನವಾಗಿದೆ.

ABOUT THE AUTHOR

...view details