ಶಾರ್ಜಾ: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್ 58 ಎಸೆತಗಳಲ್ಲಿ 101ರನ್ಗಳಿಕೆ ಮಾಡುವ ಮೂಲಕ ಐಪಿಎಲ್ ಟೂರ್ನಿಯಲ್ಲಿ ಚೊಚ್ಚಲ ಶತಕ ಸಿಡಿಸಿ, ಹೊಸ ದಾಖಲೆ ನಿರ್ಮಾಣ ಮಾಡಿದ್ದಾರೆ.
ಈ ಹಿಂದಿನ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನವರೆಗೂ ಶಿಖರ್ ಧವನ್ ಬ್ಯಾಟಿಂಗ್ನಿಂದ ಯಾವುದೇ ಶತಕ ಸಿಡಿದಿರಲಿಲ್ಲ. ಈ ಹಿಂದೆ ಅವರು ಅಜೇಯ 97ರನ್ಗಳಿಕೆ ಮಾಡಿದ್ದರು. ಆದರೆ, ನಿನ್ನೆಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭಿಕ ಆಟಗಾರ ಶಿಖರ್ ಧವನ್ ದಾಖಲೆ ನಿರ್ಮಿಸಿ ಗಮನ ಸೆಳೆದಿದ್ದಾರೆ.
ಹೊಸ ದಾಖಲೆ ನಿರ್ಮಾಣ
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅತಿ ಹೆಚ್ಚು ಅರ್ಧ ಶತಕ ಸಿಡಿಸಿರುವ ಎರಡನೇ ಬ್ಯಾಟ್ಸ್ಮನ್ ಖ್ಯಾತಿಗೆ ಶಿಖರ್ ಧವನ್ ಪಾತ್ರರಾಗಿದ್ದು, ನಿನ್ನೆಯ ಪಂದ್ಯದಲ್ಲಿ 39ನೇ ಅರ್ಧಶತಕ ಸಿಡಿಸಿದ್ದಾರೆ. 46 ಅರ್ಧಶತಕ ಸಿಡಿಸಿರುವ ಡೇವಿಡ್ ವಾರ್ನರ್ ಮೊದಲ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಸುರೇಶ್ ರೈನಾ 38 ಅರ್ಧಶತಕ ಸಿಡಿಸಿ ನಂತರದ ಸ್ಥಾನದಲ್ಲಿದ್ದಾರೆ.
ಇದರ ಜತೆಗೆ ಐಪಿಎಲ್ನ 166 ಇನಿಂಗ್ಸ್ಗಳಿಂದ 4,837 ರನ್ ಬಾರಿಸಿ 5ನೇ ಸ್ಥಾನದಲ್ಲಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ 176 ಇನಿಂಗ್ಸ್ನಲ್ಲಿ 5,668 ರನ್ಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ.
ಐಪಿಎಲ್ನಲ್ಲಿ ಅತಿ ಹೆಚ್ಚು ಇನ್ನಿಂಗ್ಸ್ ಆಡಿ ಶತಕ ಪೂರೈಸಿರುವ ಪ್ಲೇಯರ್ ಎಂಬ ಹಣೆಪಟ್ಟ ಕಟ್ಟಿಕೊಂಡಿರುವ ಶಿಖರ್ ಒಟ್ಟು 167 ಇನ್ನಿಂಗ್ಸ್ ಬಳಿಕ ಈ ಸಾಧನೆ ಮಾಡಿದ್ದಾರೆ. ಈಗಾಗಲೇ ವಿರಾಟ್ ಕೊಹ್ಲಿ 120ನೇ ಇನ್ನಿಂಗ್ಸ್, ರಾಯುಡು 119ನೇ ಇನ್ನಿಂಗ್ಸ್ ಹಾಗೂ ರೈನಾ 88ನೇ ಇನ್ನಿಂಗ್ಸ್ನಲ್ಲಿ ಈ ಸಾಧನೆ ಮಾಡಿದ್ದಾರೆ.