ಪುಣೆ :ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ತಂಡ ಹಲವು ಬಾರಿ ಆರಂಭಿಕರನ್ನು ಬದಲಾವಣೆ ಮಾಡಿತ್ತು. ಆದರೆ, ಮುಂಬರುವ ಏಕದಿನ ಸರಣಿಯಲ್ಲಿ ರೋಹಿತ್ ಮತ್ತು ಶಿಖರ್ ಧವನ್ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ ಎಂದು ನಾಯಕ ಕೊಹ್ಲಿ ಖಚಿತ ಪಡಿಸಿದ್ದಾರೆ. ಟಿ20 ಸರಣಿಯಲ್ಲಿ ಮೊದಲ ನಾಲ್ಕು ಪಂದ್ಯಗಳಲ್ಲಿ ರಾಹುಲ್ ಜೊತೆಗೆ ಧವನ್, ಇಶಾನ್ ಕಿಶನ್, 3 ಮತ್ತು 4ನೇ ಪಂದ್ಯಕ್ಕೆ ರೋಹಿತ್ ಜೊತೆಗಾರರಾಗಿದ್ದರು. ಆದರೆ, ಕೊನೆಯ ಪಂದ್ಯದಲ್ಲಿ ರಾಹುಲ್ಗೆ ವಿಶ್ರಾಂತಿ ನೀಡಿ ಸ್ವತಃ ಕೊಹ್ಲಿಯೇ ರೋಹಿತ್ ಜೊತೆಗೂಡಿ ಆಡಿದ್ದರು.
ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಖಂಡಿತವಾಗಿಯೂ ಏಕದಿನ ಸರಣಿಯಲ್ಲಿ ಆರಂಭಿಕರಾಗಿ ಆಡುತ್ತಾರೆ. ಇದರಲ್ಲಿ ಅನುಮಾನವೇ ಬೇಡ. ಅವರಿಬ್ಬರು ಕೆಲವು ವರ್ಷಗಳಿಂದ ತಂಡಕ್ಕೆ ಅಮೋಘ ಕೊಡುಗೆ ನೀಡಿದ್ದಾರೆ ಎಂದು ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.