ಕರ್ನಾಟಕ

karnataka

ETV Bharat / sports

ಬಿಗ್​ಬ್ಯಾಶ್​ ಲೀಗ್‌ ಕ್ರಿಕೆಟ್‌ ಬೆಟ್ಟಿಂಗ್: ನಾಲ್ವರನ್ನು ಬಂಧಿಸಿ ಒಂದು ಲಕ್ಷ ರೂ ನಗದು ವಶಪಡಿಸಿಕೊಂಡ ಸಿಸಿಬಿ

ಆಸ್ಟ್ರೇಲಿಯಾದಲ್ಲಿ‌ ನಡೆಯುತ್ತಿರುವ ಬಿಗ್‌ಬ್ಯಾಷ್ ಟಿ20 ಕ್ರಿಕೆಟ್ ಲೀಗ್​ನ ಸೋಲು-ಗೆಲುವಿನ ಬೆಟ್ಟಿಂಗ್​ ನಡೆಸುತ್ತಿದ್ದ ಆರೋಪದಡಿ ನಾಲ್ವರು ಆರೋಪಿಗಳನ್ನು‌ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

By

Published : Jan 11, 2020, 3:59 PM IST

betting
betting

ಬೆಂಗಳೂರು:ಆಸ್ಟ್ರೇಲಿಯಾದಲ್ಲಿ‌ ನಡೆಯುತ್ತಿರುವ ಬಿಗ್‌ಬ್ಯಾಷ್ ಟಿ20 ಕ್ರಿಕೆಟ್ ಲೀಗ್​ನ ಸೋಲು-ಗೆಲುವಿನ ಬಗ್ಗೆ ಬೆಟ್ಟಿಂಗ್​ ನಡೆಸುತ್ತಿದ್ದ ಆರೋಪದಡಿ ನಾಲ್ವರು ಆರೋಪಿಗಳನ್ನು‌ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಗಿರೀಶ್, ದಿಲೀಪ್, ಶಿವರಾಜ್ ಹಾಗು ಶ್ಯಾಮ್ ಸುಂದರ್ ಬಂಧಿತ ಆರೋಪಿಗಳು.

ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಿಗ್ ಬ್ಯಾಶ್ ಲೀಗ್ ಟಿ20 ಕ್ರಿಕೆಟ್ ಪಂದ್ಯಾವಳಿ ವೇಳೆ ಇವರು ಬೆಟ್ಟಿಂಗ್‌ ನಡೆಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೋಲಿಸರು ನಾಲ್ವರನ್ನು ಬಂಧಿಸಿ 1 ಲಕ್ಷ ರೂ ನಗದು, 1 ಲ್ಯಾಪ್‌ಟಾಪ್ ಹಾಗು 9 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.ಆರೋಪಿಗಳು ವ್ಯವಸ್ಥಿತವಾಗಿ ಮೊಬೈಲ್ ಆ್ಯಪ್ ಮೂಲಕ ಬೆಟ್ಟಿಂಗ್ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.

ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details