ಕರ್ನಾಟಕ

karnataka

ETV Bharat / sports

ಇಂಗ್ಲೆಂಡ್​ ಒಬ್ಬ ಅದ್ಭುತ 3 ನೇ ಕ್ರಮಾಂಕದ ಆಟಗಾರನನ್ನು ಕಂಡುಕೊಂಡಿದೆ: ಕ್ರಾಲೆ ಆಟಕ್ಕೆ ದಾದ ಮೆಚ್ಚುಗೆ

ತಮ್ಮ ವೃತ್ತಿ ಜೀವನದ ಮೊದಲ ಶತಕವನ್ನೇ ದ್ವಿಶತಕವಾಗಿ ಬದಲಾಯಿಸಿದ 22 ವರ್ಷದ ಕ್ರಾಲೆ ಭವಿಷ್ಯದಲ್ಲಿ ಇಂಗ್ಲೆಂಡ್​ ಎಲ್ಲಾ ಮಾದರಿಯ ಕ್ರಿಕೆಟ್​ನಲ್ಲಿ ಅವಕಾಶ ಪಡೆಯಲಿ ಎಂದು ಆಶಿಸಿದ್ದಾರೆ.

By

Published : Aug 23, 2020, 2:27 PM IST

ಕ್ರಾಲೆ ಆಟಕ್ಕೆ ದಾದ ಮೆಚ್ಚುಗೆ
ಕ್ರಾಲೆ ಆಟಕ್ಕೆ ದಾದ ಮೆಚ್ಚುಗೆ

ನವದೆಹಲಿ: ಪಾಕಿಸ್ತಾನದ ವಿರುದ್ಧದ 3ನೇ ಟೆಸ್ಟ್​ ಪಂದ್ಯದಲ್ಲಿ ಆಕರ್ಷಕ 267 ರನ್​ಗಳಿಸಿರುವ ಜಾಕ್ ಕ್ರಾಲೆ ಅವರನ್ನು ಕ್ಲಾಸ್​ ಪ್ಲೇಯರ್​ , ಇವರು ಇಂಗ್ಲೆಂಡ್ ತಂಡಕ್ಕೆ ಸೂಕ್ತವಾದ 3ನೇ ಕ್ರಮಾಂಕದ ಬ್ಯಾಟ್ಸ್​ಮನ್​ ಎಂದು ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.

ತಮ್ಮ ವೃತ್ತಿ ಜೀವನದ ಮೊದಲ ಶತಕವನ್ನೇ ದ್ವಿಶತಕವಾಗಿ ಬದಲಾಯಿಸಿದ 22 ವರ್ಷದ ಕ್ರಾಲೆ ಭವಿಷ್ಯದಲ್ಲಿ ಇಂಗ್ಲೆಂಡ್​ ಎಲ್ಲಾ ಮಾದರಿಯ ಕ್ರಿಕೆಟ್​ನಲ್ಲಿ ಅವಕಾಶ ಪಡೆಯಲಿ ಎಂದು ಆಶಿಸಿದ್ದಾರೆ.

ಜಾಕ್​ ಕ್ರಾಲೆ

ಕೇವಲ 8 ನೇ ಟೆಸ್ಟ್​ ಆಡುತ್ತಿರುವ ಯುವ ಬ್ಯಾಟ್ಸ್​ಮನ್ 267 ರನ್​ಗಳಿಸುವ ಮೂಲಕ ಜೋಸ್ ಬಟ್ಲರ್(152)​ ಜೊತೆಗೂಡಿ 5ನೇ ವಿಕೆಟ್​ಗೆ 359 ರನ್​ಗಳ ಬೃಹತ್​ ಜೊತೆಯಾಟ ನಡೆಸಿದ್ದರು. 393 ಎಸೆತಗಳನ್ನು ಎದುರಿಸಿದ ಕ್ರಾಲೆ ಇಂಗ್ಲೆಂಡ್​ ಪರ 10ನೇ ವೈಯಕ್ತಿಕ ಗರಿಷ್ಠ ಸ್ಕೋರರ್​ ಎನಿಸಿಕೊಂಡಿದ್ದಾರೆ.

ಕ್ರಾಲೆ ಇನ್ನಿಂಗ್ಸ್​ಗೆ ಟ್ವಿಟರ್​ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿರುವ ಗಂಗೂಲಿ, ಇಂಗ್ಲೆಂಡ್​ 3ನೇ ಕ್ರಮಾಂಕಕ್ಕೆ ಅತ್ಯುತ್ತಮವಾದ ಆಟಗಾರರನ್ನು ಕಂಡುಕೊಂಡಿದೆ. ಆತನೊಬ್ಬ ಕ್ಲಾಸ್​ ಪ್ಲೇಯರ್​. ಅವನ್ನು ಎಲ್ಲ ಮಾದರಿಯ ಕ್ರಿಕೆಟ್​ನಲ್ಲಿ ನೋಡಲು ಬಯಸುತ್ತೇನೆ ಎಂದು ಟ್ವೀಟ್ ಮಾಡಿದ್ದು, ನಾಸಿರ್​ ಹುಸೇನ್​ ಹಾಗೂ ಇಂಗ್ಕೆಂಡ್​ ಕ್ರಿಕೆಟ್​ ಬೋರ್ಡ್​ಗೆ ಟ್ಯಾಗ್​ ಮಾಡಿದ್ದಾರೆ.

ಕ್ರಾಲೆ-ಬಟ್ಲರ್​ 359 ರನ್​ಗಳ ಜೊತೆಯಾಟ 5ನೇ ವಿಕೆಟ್​ಗೆ ಇಂಗ್ಲೆಂಡ್​ ಪರ ದಾಖಲಾದ ಅತಿಹೆಚ್ಚು ರನ್​ಗಳ ಜೊತೆಯಾಟದ ದಾಖಲೆಯಾಗಿದೆ. ಒಟ್ಟಾರೆ 8ನೇ ವೈಯಕ್ತಿಕ ಗರಿಷ್ಠ ರನ್​ಗಳ ಜೊತೆಯಾಟವಾಗಿದೆ.

ABOUT THE AUTHOR

...view details