ನವದೆಹಲಿ: ಆಗಸ್ಟ್ 18 ರಿಂದ ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್ 2020) ಆರಂಭಗೊಳ್ಳಲಿದೆ. ಕೋವಿಡ್ -19 ನಂತರ ನಡೆಯುವ ಮೊದಲ ಪ್ರಮುಖ ಟಿ 20 ಲೀಗ್ ಇದಾಗಿದೆ. 33 ಪಂದ್ಯಗಳ ಟೂರ್ನಿಯನ್ನು ಟ್ರಿನಿಡಾಡ್ ಮತ್ತು ಟೊಬಾಗೊ ಸ್ಟೇಡಿಯಂನಲ್ಲಿ ನಡೆಸಲು ನಿರ್ಧರಿಸಲಾಗಿದೆ. ಈ ಎರಡು ಕ್ರೀಡಾಂಗಣಗಳಲ್ಲಿ ಇಡೀ ಕ್ರೀಡಾಕೂಟವನ್ನ ಆಯೋಜಿಸಲಾಗಿದೆ.
ಸಿಪಿಎಲ್ - 2020 ರ ಮೊದಲ ಪಂದ್ಯ ಕಳೆದ ವರ್ಷದ ರನ್ನರ್ ಅಪ್ ಆಗಿದ್ದ ಗಯಾನಾ ಅಮೆಜಾನ್ ವಾರಿಯರ್ಸ್ ಹಾಗೂ ಟ್ರಿನ್‌ಬಾಗೊ ನೈಟ್ ರೈಡರ್ಸ್ ನಡುವೆ ನಡೆಯಲಿದೆ. ಈ ಟೂರ್ನಿಯಲ್ಲಿ ಈ ಬಾರಿ ಈ ಐದು ಆಟಗಾರರ ಮೇಲೆ ಹೆಚ್ಚಿನ ನಿರೀಕ್ಷೆ ಇಡಲಾಗಿದೆ.
ಕ್ರಿಸ್ ಲಿನ್ (ಸೇಂಟ್ ಕಿಟ್ಸ್ ಆ್ಯಂಡ್ ನೆವಿಸ್ ಪೆಟ್ರಾ ವೋಡ್ಸ್ )
ಟಿ-20 ಕ್ರಿಕೆಟ್ನಲ್ಲಿ ಅಪಯಾಯಕಾರಿ ಬ್ಯಾಟ್ಸ್‌ಮನ್ ಎಂದು ಗುರುತಿಸಿಕೊಂಡಿರುವ ಲಿನ್ ಈ ಬಾರಿ ಮತ್ತೆ ಸಿಪಿಎಲ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕ್ರಿಸ್ ಲಿನ್ ಈ ಹಿಂದೆ ಜಮೈಕಾ ತಲ್ಲವಾಸ್, ಗಯಾನಾ ಅಮೆಜಾನ್ ವಾರಿಯರ್ಸ್ ಮತ್ತು ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದರು. ಈ ವರ್ಷದ ಒಂದು ರೀತಿಯ ವರ್ಚುವಲ್ ಸಿಪಿಎಲ್ 2020 ಡ್ರಾಫ್ಟ್‌ನಲ್ಲಿ ತಂಡಕ್ಕೆ ಮಾರಾಟವಾದ ನಂತರ ಈ ಬಾರಿ ಲಿನ್ ಸೇಂಟ್ ಕಿಟ್ಸ್ ಆ್ಯಂಡ್ ನೆವಿಸ್ ಪೆಟ್ರಾ ವೋಡ್ಸ್ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆಸ್ಟ್ರೇಲಿಯಾದ ಈ ಬ್ಯಾಟ್ಸ್‌ಮನ್ ಟಿ 20 ಗಳಲ್ಲಿ 144.15 ರ ಮಾರಕ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಯಾವುದೇ ಪರಿಸ್ಥಿತಿಯಲ್ಲಿ ತಂಡಕ್ಕೆ ಜಯ ತಂದುಕೊಡುವ ಸಾಮರ್ಥ್ಯ ಹೊಂದಿದ್ದಾರೆ.
ಓಶೇನ್ ಥಾಮಸ್ (ಜಮೈಕಾ ತಲ್ಲವಾಸ್)
ಈ ಸೀಸನ್ನಲ್ಲಿ ಜಮೈಕಾ ತಲ್ಲವಾಸ್ ಉಳಿಸಿಕೊಂಡ 5 ಆಟಗಾರರಲ್ಲಿ 23 ವರ್ಷದ ಓಶೇನ್ ಥಾಮಸ್ ಸೇರಿದ್ದಾರೆ. 2017 ರಲ್ಲಿ ಸಿಪಿಎಲ್ ಗೆ ಕಾಲಿಟ್ಟ ಥಾಮಸ್ 2018ರ ಆವೃತ್ತಿಯಲ್ಲಿ 10 ಪಂದ್ಯಗಳಲ್ಲಿ 18 ವಿಕೆಟ್ ಪಡೆದು ಆ ಸೀಸನ್ ನಲ್ಲಿ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. ಈ ವರ್ಷ ಕಾರು ಅಪಘಾತದಲ್ಲಿ ಸಿಲುಕಿ ಗಂಭೀರ ಗಾಯದಿಂದ ಪಾರಾಗಿದ್ದರು. ಈ ಬಾರಿಯ ಟೂರ್ನಿಯಲ್ಲಿ ಇವರ ಮೇಲೆ ತಂಡ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ.