ಸಿಡ್ನಿ:ಆಸ್ಟ್ರೇಲಿಯಾ ತಂಡದ ವೇಗಿ ಮಿಚೆಲ್ ಸ್ಟಾರ್ಕ್ ಈ ಬಾರಿ ಐಪಿಎಲ್ನಲ್ಲಿ ಪಾಲ್ಗೊಳ್ಳದಿರುವುದಕ್ಕೆ ತಮಗೆ ಯಾವುದೇ ರೀತಿಯ ವಿಷಾದವಿಲ್ಲ ಎಂದು ಹೇಳಿಕೊಂಡಿದ್ದಾರೆ.
ಪ್ರಸ್ತುತ ವಿಶ್ವದ ಅತ್ಯುತ್ತಮ ಬೌಲರ್ಗಳಲ್ಲಿ ಒಬ್ಬರಾಗಿರುವ ಮಿಚೆಲ್ ಸ್ಟಾರ್ಕ್ 2020ರ ಐಪಿಎಲ್ ಪ್ಲೇಯರ್ ಆ್ಯಕ್ಷನ್ನಲ್ಲಿ ತಮ್ಮ ಹೆಸರನ್ನು ನೋಂದಾಯಿಸುಕೊಂಡಿರಲಿಲ್ಲ.ಇದೀಗ ಟೂರ್ನಮೆಂಟ್ ಸೆಪ್ಟೆಂಬರ್-ನವೆಂಬರ್ಗೆ ಮುಂದೂಡಿದ್ದರೂ ತಮ್ಮ ನಿರ್ಧಾರದಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದಿದ್ದಾರೆ.
ಮಾರ್ಚ್-ಮೇನಲ್ಲಿ ನಡೆಯಬೇಕಿದ್ದ 13ನೇ ಆವೃತ್ತಿಯ ಐಪಿಎಲ್, ಕೊರೊನಾ ವೈರಸ್ ಕಾರಣದಿಂದ ಸೆಪ್ಟೆಂಬರ್-ನವೆಂಬರ್ಗೆ ಮುಂದೂಡಲ್ಪಟ್ಟಿದ್ದು ಭಾರತದಿಂದ ಯುಎಇಗೆ ಸ್ಥಳಾಂತರಗೊಂಡಿದೆ.
ಪಶ್ಚಾತಾಪ ಒಂದು ಅದ್ಭುತ ವಿಷಯ ಎಂದು ನನಗೆ ತಿಳಿದಿದೆ. ಆದರೆ ಐಪಿಎಲ್ ಬೇರೆ ಸಮಯದಲ್ಲಿ ನಡೆಯುತ್ತಿರುವುದರಿಂದ ನನಗೆ ಯಾವುದೇ ಪಶ್ಚಾತಾಪವಿಲ್ಲ. ನನ್ನ ನಿರ್ಧಾರದಲ್ಲಿ ಬದಲಾವಣೆಯಿಲ್ಲ. ಸೆಪ್ಟಂಬರ್ನಲ್ಲಿ ನಾನು ಐಪಿಎಲ್ ನಡೆಯುವಾಗ ಸಂತೋಷದಿಂದ ಸಮಯ ಕಳೆಯಲಿದ್ದೇನೆ. ಮತ್ತು ಮುಂದಿನ ಬೇಸಿಗೆ ಕ್ರಿಕೆಟ್ಗೆ ಸಿದ್ದವಾಗಲಿದ್ದೇನೆ ಎಂದು ಅವರು ಕ್ರಿಕೆಟ್ ಆಸ್ಟ್ರೇಲಿಯಾ ವೆಬ್ಸೈಟ್ಗೆ ತಿಳಿಸಿದ್ದಾರೆ.
ಐಪಿಎಲ್ ಮುಂದಿನ ವರ್ಷವೂ ಇರುತ್ತದೆ. ನನಗೆ ಅವಕಾಶ ಬಂದರೆ ಅಥವಾ ಜನರು ನಾನು ಇರಬೇಕೆಂದು ಬಯಸಿದರೆ ಖಂಡಿತವಾಗಿಯೂ ಅದನ್ನು ಪರಿಗಣಿಸಲಿದ್ದೇನೆ. ಆದರೆ ಈ ವರ್ಷದಲ್ಲಿ ನನ್ನ ನಿರ್ಧಾರಕ್ಕೆ ಆರಾಮವಾಗಿರಲಿದ್ದೇನೆ ಎಂದು ಸ್ಟಾರ್ಕ್ ತಿಳಿಸಿದ್ದಾರೆ.
ಮಿಚೆಲ್ ಸ್ಟಾರ್ಕ್ 2014 ಮತ್ತು 2015ರ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದರು.