ಕರ್ನಾಟಕ

karnataka

ETV Bharat / sports

ವಿಶ್ವಚಾಂಪಿಯನ್​ ಇಂಗ್ಲೆಂಡ್‌ನ ಮುಖ್ಯ ಕೋಚ್​ ಆದ ಮಾಜಿ ವೇಗದ ಬೌಲರ್​! - ಇಂಗ್ಲೆಂಡ್​ ಕ್ರಿಕೆಟ್​

ಹಾಲಿ ಕೋಚ್​ ಆಗಿರುವ ಟ್ರೆವರ್​ ಬೇಲಿಸ್‌ ಅವಧಿ 2019ರ ಬೇಸಿಗೆಗೆ ಮುಗಿಯುವುದರಿಂದ ಇಸಿಬಿ ನಿರ್ದೇಶಕ ಆಶ್ಲೆ ಗಿಲ್ಸ್​, ಸಿಲ್ವರ್​ವುಡ್​ರನ್ನು ಮುಖ್ಯ ಕೋಚ್​ ಆಗಿ ಆಯ್ಕೆ ಮಾಡಿದ್ದಾರೆ.

Chris Silverwood

By

Published : Oct 7, 2019, 4:14 PM IST

ಲಂಡನ್: 2019ರ ವಿಶ್ವಕಪ್​ ತಂಡದ ನೂತನ ಮುಖ್ಯ ಕೋಚ್​ ಆಗಿ ಇಂಗ್ಲೆಂಡ್ ತಂಡದ ಮಾಜಿ ವೇಗಿ ಹಾಗೂ ಹಾಲಿ ಬೌಲಿಂಗ್​ ಕೋಚ್​ ಆಗಿದ್ದ ಕ್ರಿಸ್​ ಸಿಲ್ವರ್​ವುಡ್​ ನೇಮಕಗೊಂಡಿದ್ದಾರೆ.

ಹಾಲಿ ಕೋಚ್​ ಆಗಿರುವ ಟ್ರೆವರ್​ ಬೇಲಿಸ್​ ಅವಧಿ 2019ರ ಬೇಸಿಗೆಗೆ ಮುಗಿಯುವುದರಿಂದ ಇಸಿಬಿ ನಿರ್ದೇಶಕ ಆಶ್ಲೆ ಗಿಲ್ಸ್​ ಹೊಸ ಕೋಚ್​ ನೇಮಕ ಮಾಡುವ ಜವಾಬ್ದಾರಿಯನ್ನು ತೆಗೆದುಕೊಂಡಿದ್ದು, ಕೋಚ್​ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಅಲೆಕ್​ ಸ್ಟೆವರ್ಟ್​, ಗ್ಯಾರಿ ಕಸ್ಟರ್ನ್​ ಹಾಗೂ ಗ್ರಹಾಂ ಫಾರ್ಡ್​ ಹಾಗೂ ಸಿಲ್ವರ್​ವುಡ್​ರನ್ನು ಸಂದರ್ಶನ ನಡೆಸಿದ್ದರು.

ಕ್ರಿಸ್​ ಸಿಲ್ವರ್​ವುಡ್..

ಕೋಚ್​ ಹುದ್ದೆಯ ಪ್ರಮುಖ ರೇಸ್​ನಲ್ಲಿದ್ದ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳಿಗೆ ಕೋಚ್​ ಆಗಿ ಸೇವೆ ಸಲ್ಲಿಸಿರುವ ಗ್ಯಾರಿ ಕಸ್ಟರ್ನ್​ ಸಂದರ್ಶನದಲ್ಲಿ ವಿಫಲವಾದ್ದರಿಂದ 44 ವರ್ಷದ ಸಿಲ್ವರ್​ವುಡ್​ರನ್ನು ನೇಮಕ ಮಾಡಲಾಗಿದೆ. ಸಿಲ್ವರ್​ವುಡ್ ಈ ಹಿಂದೆ ಎಸ್ಸೆಕ್ಸ್ ತಂಡದ ಮುಖ್ಯ ಕೋಚ್​ ಆಗಿ ಆಯ್ಕೆಯಾಗಿದ್ದರು. ಇವರು ಕೋಚ್​ ಆದ ಮೇಲೆ ಎಸ್ಸೆಕ್ಸ್​ ತಂಡ 25 ವರ್ಷಗಳ ನಂತರ ಮೊದಲ 2017ರಲ್ಲಿ ಕೌಂಟಿ ಚಾಂಪಿಯನ್​ಶಿಪ್​ ಗೆದ್ದುಕೊಂಡಿತ್ತು.

ಸಿಲ್ವರ್​ವುಡ್​ ಇಂಗ್ಲೆಂಡ್​ ಪರ 6 ಟೆಸ್ಟ್​, 7 ಏಕದಿನ ಪಂಡ್ಯವಾಡಿದ್ದಾರೆ. 184 ಪ್ರಥಮ ದರ್ಜೆ ಪಂದ್ಯಗಳಿಂದ 577 ವಿಕೆಟ್​ , 202 ಲಿಸ್ಟ್​ ಎ ಪಂದ್ಯಗಳಿಂದ 259 ವಿಕೆಟ್​ ಪಡೆದಿದ್ದಾರೆ.

ABOUT THE AUTHOR

...view details