ಕರ್ನಾಟಕ

karnataka

By

Published : Dec 3, 2020, 10:45 PM IST

ETV Bharat / sports

ಮೈದಾನಕ್ಕಿಳಿಯುವ ಕೊನೆಗಳಿಗೆಯಲ್ಲಿ ತಂದೆ ಸಾವಿನ ಸುದ್ದಿ ಕೇಳಿದ ವಿಂಡೀಸ್ ಬೌಲರ್​

ನ್ಯೂಜಿಲ್ಯಾಂಡ್​ ತಂಡದ ಆರಂಭಿಕ ಬ್ಯಾಟ್ಸ್​ಮನ್​ ಟಾಪ್ ಲಾಥಮ್(86) ವಿಕೆಟ್ ವಿಕೆಟ್ ಪಡೆಯುವಲ್ಲಿ ಸಫಲರಾಗಿದ್ದಾರೆ. ಲಾಥಮ್​ ವಿಕೆಟ್​ ಪಡೆಯುತ್ತಿದ್ದಂತೆ ನೆಲಕ್ಕೆ ಮಂಡಿಯೂರಿ ಕುಳಿತು ತಂದೆ ಗೌರವ ಸಮರ್ಪಿಸಿದರು.

ಕೆಮರ್ ರೋಚ್​
ಕೆಮರ್ ರೋಚ್​

ಹ್ಯಾಮಿಲ್ಟನ್​: ವೆಸ್ಟ್​ ಇಂಡೀಸ್ ತಂಡದ ಬೌಲರ್​ ಕೆಮರ್​ ರೋಚ್​ ಅವರ ತಂದೆ ನಿಧನರಾಗಿದ್ದರು, ಆದರೂ ನೋವಿನ ನಡುವೆಯೂ ಇಂದಿನ ಪಂದ್ಯದಲ್ಲಿ ಮೈದಾನಕ್ಕಿಳಿದು ಬೌಲಿಂಗ್​ ಮಾಡಿ ಗಟ್ಟಿತನ ಮೆರೆದಿದ್ದಾರೆ.

ಇದೇ ಸಂದರ್ಭದಲ್ಲಿ ರೋಚ್​ ತಂದೆಗೆ ಸಂತಾಪ ಸೂಚಿಸುವ ಸಲುವಾಗಿ ಎರಡೂ ತಂಡದ ಆಟಗಾರರು ತೋಳಿಗೆ ಕಪ್ಪುಪಟ್ಟಿ ಕಟ್ಟುಕೊಂಡು ಆಡಿದ್ದಾರೆ. ನ್ಯೂಜಿಲ್ಯಾಂಡ್ ಮತ್ತು ವೆಸ್ಟ್​ ಇಂಡೀಸ್​ ನಡುವೆ ಗುರುವಾರದಿಂದ ಮೊದಲ ಟಸ್ಟ್​ ಪಂದ್ಯ ಶುರುವಾಗಿದೆ. ಆದರೆ, ಈ ಪಂದ್ಯಕ್ಕೆ ತಯಾರಿಯಲ್ಲಿದ್ದಾಗಲೇ ರೋಚ್​ಗೆ ತಂದೆ ಸಾವಿನ ಆಘಾತಕಾರಿ ಸುದ್ದಿ ತಿಳಿದಿದೆ.

ಆದರೂ ಪಂದ್ಯದಲ್ಲಿ ಪಾಲ್ಗೊಂಡ ಅವರು ನ್ಯೂಜಿಲ್ಯಾಂಡ್​ ತಂಡದ ಆರಂಭಿಕ ಬ್ಯಾಟ್ಸ್​ಮನ್​ ಟಾಪ್ ಲಾಥಮ್(86) ವಿಕೆಟ್ ವಿಕೆಟ್ ಪಡೆಯುವಲ್ಲಿ ಸಫಲರಾಗಿದ್ದಾರೆ. ಲಾಥಮ್​ ವಿಕೆಟ್​ ಪಡೆಯುತ್ತಿದ್ದಂತೆ ನೆಲಕ್ಕೆ ಮಂಡಿಯೂರಿ ಕುಳಿತು ತಂದೆ ಗೌರವ ಸಮರ್ಪಿಸಿದರು.

ಈ ಪಂದ್ಯಕ್ಕೂ ಮುನ್ನ ವೆಸ್ಟ್​ ಇಂಡೀಸ್​ ತಂಡದ ಮ್ಯಾನೇಜರ್​ ರಾಲ್ ಲೂಯಿಸ್​ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, " ಕ್ರಿಕೆಟ್ ವೆಸ್ಟ್​ ಇಂಡೀಸ್​ ಹಾಗೂ ವಿಂಡೀಸ್​ ತಂಡದ ಪರವಾಗಿ ಕೆಮರ್​ ಮತ್ತು ಅವರ ಕುಟುಂಬದವರಿಗೆ ಸಂತಾಪ ಸೂಚಿಸುತ್ತೇವೆ, ಈ ಕಷ್ಟದ ಸಮಯದಲ್ಲಿ ಕೆಮರ್​ಗೆ ನಮ್ಮ ಬೆಂಬಲ ಸಂಪೂರ್ಣ ನೀಡಲು ಬಯಸುತ್ತೇವೆ" ಎಂದು ಟ್ವೀಟ್​ ಮಾಡಿದ್ದಾರೆ.

ನ್ಯೂಜಿಲ್ಯಾಂಡ್​ ತಂಡ ಮೊದಲ ದಿನದಾಟದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 243 ರನ್​ಗಳಿಸಿದೆ. ವಿಲಿಯಮ್ಸನ್ ಮತ್ತು ರಾಸ್​ ಟೇಲರ್​ ಮುರಿಯದ 3ನೇ ವಿಕೆಟ್​ಗೆ 75 ರನ್​ ಸೇರಿಸಿ 2ನೇ ದಿನದಾಟಕ್ಕೆ ಆಟ ಮುಂದುವರಿಸಿದ್ದಾರೆ. ವಿಲಿಯಮ್ಸನ್ 219 ಎಸೆತಗಳಲ್ಲಿ 16 ಬೌಂಡರಿ ಸಹಿತ 97 ರನ್, ಟೇಲರ್​ 61 ಎಸೆತಗಳಲ್ಲಿ 5 ಬೌಂಡರಿ ಸಹಿತ 31 ರನ್​ಗಳಿಸಿದ್ದಾರೆ.

ABOUT THE AUTHOR

...view details