ನವದೆಹಲಿ: ಶ್ರೀಲಂಕಾದಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚುತ್ತಿರುವುದರಿಂದ ಕ್ವಾರಂಟೈನ್ ಅವಧಿಯನ್ನು ಹೆಚ್ಚಿಸಲು ಅಲ್ಲಿನ ಸರ್ಕಾರ ನಿರ್ಧರಿಸಿದೆ . ಆದರೆ ಈ ನಿರ್ಧಾರದಿಂದ ಬಾಂಗ್ಲಾದೇಶ ತಂಡ ಶ್ರೀಲಂಕಾ ಪ್ರವಾಸದಿಂದ ಹಿಂದೆ ಸರಿಯುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
ಶ್ರೀಲಂಕಾ ಕ್ರಿಕೆಟ್ ಕ್ವಾರಂಟೈನ್ ದಿನಗಳನ್ನು 7 ರಿಂದ 14 ದಿನಗಳಿಗೆ ಹೆಚ್ಚಿಸಿದ ನಂತರ ಪ್ರವಾಸದ ಬಗ್ಗೆ ಚರ್ಚಿಸಿರುವ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ನಜ್ಮುಲ್ ಹಸನ್ ಎಸ್ಎಲ್ಸಿಯ ನಿಯಮಗಳು ಮತ್ತು ಷರತ್ತುಗಳು ನಮಗೆ ಹತ್ತಿರವಾಗಿಲ್ಲ ಎಂದು ಹೇಳಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಸರಣಿಯ ಭಾಗವಾಗಿ ಬಾಂಗ್ಲಾದೇಶ ತಂಡ ಶ್ರೀಲಂಕಾ ಪ್ರವಾಸ ಕೈಗೊಳ್ಳಬೇಕಿತ್ತು. ಶ್ರೀಲಂಕಾದ ಕೊರೊನಾ ಪ್ರೋಟೋಕಾಲ್ಗಳ ಅನ್ವಯ ತರಬೇತಿ ಆರಂಭಿಸುವ ಮುನ್ನ ಒಂದು ವಾರ ಕ್ವಾರಂಟೈನ್ನಲ್ಲಿರಬೇಕು ಎಂದು ಬಾಂಗ್ಲಾದೇಶದ ಆಟಗಾರರಿಗೆ ಮೊದಲು ಮಾಹಿತಿ ನೀಡಿತ್ತು.
ಆದರೀಗ, ಎಸ್ಎಲ್ಸಿ ಕ್ವಾರಂಟೈನ್ ಅವಧಿಯನ್ನು ಹೆಚ್ಚಿಸಿದೆ. ಹಾಗಾಗಿ ನಮ್ಮ ತಂಡ ಈ ನಿಯಮಗಳ ನಡುವೆ ಆಡಲು ಸಾಧ್ಯವಿಲ್ಲ ಎಂದು ಹಸನ್ ತಿಳಿಸಿದ್ದಾರೆ.
" ಎಸ್ಎಲ್ಸಿ ಈಗಾಗಲೆ ಡೊಮೆಸ್ಟಿಕ್ ಕ್ರಿಕೆಟ್ ಆರಂಭಿಸಿರುವುದನ್ನು ಕಾಣಬಹುದು. ಆದರೆ ನಾವು ದೊಡ್ಡ ತಂಡದೊಂದಿಗೆ ಬಂದು ಅಲ್ಲಿ ತರಬೇತಿ ಶಿಬಿರ ನಡೆಸುತ್ತೇವೆ ಎಂದು ತಿಳಿಸಿದೆವು. ಆದರೆ ನಮ್ಮ ಆಟಗಾರರು ಆರೇಳು ತಿಂಗಳಿನಿಂದ ಚಟುವಟಿಕೆ ರಹಿತಾಗಿದ್ದರೂ, ಅವರು ನಮಗೆ ತರಬೇತಿಗೆ ಅವಕಾಶ ನೀಡುತ್ತಿಲ್ಲ. ಅದರಲ್ಲೂ ಅವರೂ ನೆಟ್ ಬೌಲರ್ಗಳನ್ನು ಕರೆದೊಯ್ಯಲು ಬಿಡುತ್ತಿಲ್ಲ, ನಮಗೆ ಅಲ್ಲಿಯೂ ಕೂಡ ಯಾವುದೇ ನೆಟ್ ಬೌಲರ್ಗಳನ್ನು ಒದಗಿಸಲು ಒಪ್ಪಿಲ್ಲ. ಹೀಗಿರುವಾಗ ನಾವು ತರಬೇತಿಯಿಲ್ಲದೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಆಡುವುದಾದರೂ ಹೇಗೆ? ಹಾಗಾಗಿ ಇದು ನಮಗೆ ಸಾಧ್ಯವಿಲ್ಲ ಎಂದು ಹಸನ್ ಹೇಳಿದ್ದಾರೆ.
ಬಿಸಿಬಿ , ಶ್ರೀಲಂಕಾ ಬೋರ್ಡ್ನ ನಿಯಮಗಳನ್ನು ತಿರಸ್ಕರಿಸಿದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಲಂಕಾದ ಕ್ರೀಡಾ ಸಚಿವಾ ನಮಲ್ ರಾಜಪಕ್ಷ " ಕೋವಿಡ್ 19 ತಡೆಗೆ ಹೆಚ್ಚಿನ ಆಧ್ಯತೆಯನ್ನು ನೀಡಲಾಗಿದೆ. ಅದಾಗ್ಯೂ ಕ್ರಿಕೆಟ್ಗೆ ವಿಶೇಷ ಆಧ್ಯತೆಯನ್ನು ನೀಡುವ ಸಲುವಾಗಿ ತಾವೂ ಕೋವಿಡ್ 19 ಟಾಸ್ಕ್ಫೊರ್ಸ್ ಜೊತೆ ಮಾತನಾಡಲು ಎಸ್ಎಲ್ಸಿಗೆ ತಿಳಿಸುತ್ತೇನೆ. ಜೊತೆಗೆ ಬಿಸಿಬಿಗೆ ತನ್ನ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕೋರಲು ಸೂಚಿಸುತ್ತೇನೆ" ಎಂದು ಟ್ವೀಟ್ ಮಾಡಿದ್ದಾರೆ.