ಕರ್ನಾಟಕ

karnataka

ETV Bharat / sports

ಟೀಂ ಇಂಡಿಯಾ ಕ್ರಿಕೆಟರ್ಸ್​ಗೆ ಇನ್ಮುಂದೆ NADAದಿಂದ ಡೋಪಿಂಗ್​ ಪರೀಕ್ಷೆ! - ಬಿಸಿಸಿಐ

ಟೀಂ ಇಂಡಿಯಾ ಕ್ರಿಕೆಟರ್ಸ್​ ಇನ್ಮುಂದೆ ನಾಡಾದಿಂದ ಡೋಪಿಂಗ್​ ಪರೀಕ್ಷೆಗೆ ಒಳಗಾಗಲಿದ್ದು, ಅದಕ್ಕೆ ಸಹಕರಿಸಲು ತಾವು ಸಿದ್ದ ಎಂದು ಬಿಸಿಸಿಐ ತಿಳಿಸಿದೆ.

ಟೀಂ ಇಂಡಿಯಾ/ NADA tests

By

Published : Aug 9, 2019, 5:57 PM IST

ಮುಂಬೈ:ರಾಷ್ಟ್ರೀಯ ಉದ್ದೀಪನ ನಿಗ್ರಹ ಘಟಕ (ನಾಡಾ) ನಿಯಮಾವಳಿಗಳು ಇನ್ಮುಂದೆ ದೇಶದ ಎಲ್ಲ ಕ್ರೀಡಾಪಟುಗಳಿಗೂ ಅನ್ವಯವಾಗಲಿದ್ದು, ಇದಕ್ಕೆ ಭಾರತೀಯ ಕ್ರಿಕೆಟ್​ ಮಂಡಳಿ ಕೂಡ ಸಮ್ಮತಿ ಸೂಚಿಸಿದೆ.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ ಜತೆ ಕೇಂದ್ರ ಕ್ರೀಡಾ ಕಾರ್ಯದರ್ಶಿ ರಾಧೇಶ್ಯಾಮ್​ ಜುಲಾನಿಯಾ ಹಾಗೂ ನಾಡಾ ಡಿಜಿ ನವೀನ್​ ಅಗರ್ವಾಲ್ ಸಭೆ ನಡೆಸಿ ​ ಈ ವಿಚಾರದ ಬಗ್ಗೆ ಮಾತನಾಡಿದರು. ಈ ವೇಳೆ, ನಾಡಾ ನಿಯಮಾವಳಿ ಒಪ್ಪಿಕೊಂಡು ಅದರೊಂದಿಗೆ ಸಹಕರಿಸಲು ತಾವು ಸಿದ್ದ ಎಂದು ಬಿಸಿಸಿಐ ತಿಳಿಸಿದೆ.

ಇಷ್ಟು ದಿನ ಟೀಂ ಇಂಡಿಯಾ ಕ್ರಿಕೆಟರ್ಸ್​​​ ನಾಡಾದಿಂದ ಡೋಪಿಂಗ್​ ಪರೀಕ್ಷೆಗೆ ಒಳಗಾಗುತ್ತಿರಲಿಲ್ಲ. ಇನ್ಮುಂದೆ ನಾಡಾ ಯಾವಾಗ ಬೇಕಾದರೂ, ಎಲ್ಲಿ ಬೇಕಾದರೂ ಟೀಂ ಇಂಡಿಯಾ ಪ್ಲೇಯರ್ಸ್​​ ಡೋಪಿಂಗ್​ ಪರೀಕ್ಷೆ ನಡೆಸಬಹುದಾಗಿದೆ. ಇದರ ಜತೆಗೆ ಭಾರತೀಯ ಕ್ರಿಕೆಟ್​ಗೆ ಏನೆಲ್ಲ ಸೌಲಭ್ಯ ಬೇಕೊ ಅದೆಲ್ಲವನ್ನೂ ನೀಡಲು ನಾವು ಸಿದ್ಧವಿದ್ದೇವೆ. ಆದರೆ, ಇದಕ್ಕೆ ಒಂದಿಷ್ಟು ಶುಲ್ಕ ನೀಡಬೇಕಾಗುತ್ತದೆ ಎಂದು ನಾಡಾ ತಿಳಿಸಿದೆ.

ABOUT THE AUTHOR

...view details