ಕರ್ನಾಟಕ

karnataka

ETV Bharat / sports

ಲಂಕಾ ಪ್ರವಾಸದಿಂದ ಕೈಬಿಟ್ಟು, ಮುಸ್ತಫಿಜುರ್​ಗೆ​ ಐಪಿಎಲ್​ ಆಡಲು ಎನ್​ಒಸಿ ನೀಡಿದ ಬಿಸಿಬಿ! - ಬಿಸಿಬಿ

ಬಾಂಗ್ಲಾದೇಶ ತಂಡದ ವೇಗಿಯನ್ನು ರಾಜಸ್ಥಾನ್​ ರಾಯಲ್ಸ್​ ಫೆಬ್ರವರಿಯಲ್ಲಿ ನಡೆದಿದ್ದ ಮಿನಿ ಹರಾಜಿನಲ್ಲಿ ಮೂಲ ಬೆಲೆ 1 ಕೋಟಿ ರೂ.ಗಳಿಗೆ ಖರೀದಿಸಿತ್ತು.

ಮುಸ್ತಫಿಜುರ್ ರೆಹಮಾನ್
ಮುಸ್ತಫಿಜುರ್ ರೆಹಮಾನ್

By

Published : Mar 27, 2021, 11:50 PM IST

ಢಾಕಾ: ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್​ ವೇಗದ ಬೌಲರ್​ ಮುಸ್ತಫಿಜುರ್ ರೆಹಮಾನ್​ಗೆ ಐಪಿಎಲ್​ನಲ್ಲಿ ಭಾಗಹಿಸುವುದಕ್ಕೆ ನಿರಪೇಕ್ಷಣ ಪತ್ರ(ಎನ್​ಒಸಿ) ನೀಡಿದೆ.

ಬಾಂಗ್ಲಾದೇಶ ತಂಡದ ವೇಗಿಯನ್ನು ರಾಜಸ್ಥಾನ್​ ರಾಯಲ್ಸ್​ ಫೆಬ್ರವರಿಯಲ್ಲಿ ನಡೆದಿದ್ದ ಮಿನಿ ಹರಾಜಿನಲ್ಲಿ ಮೂಲ ಬೆಲೆ 1 ಕೋಟಿ ರೂ.ಗಳಿಗೆ ಖರೀದಿಸಿತ್ತು.ಈ ಕುರಿತು ಮಾಹಿತಿ ನೀಡಿರುವ ಬಿಸಿಬಿ ಮುಖ್ಯಸ್ಥ ಮಿನ್ಹಜುಲ್ ಅಬೆದಿನ್​, ಮುಂದಿನ ತಿಂಗಳು ಶ್ರೀಲಂಕಾ ವಿರುದ್ಧದ ಟೆಸ್ಟ್​ ಸರಣಿಗಾಗಿ ಘೋಷಿಸಿರುವ ತಂಡಕ್ಕೆ ಮುಸ್ತಫಿಜುರ್​​ ಆಯ್ಕೆ ಮಾಡಿಲ್ಲ. ಅವರು ಐಪಿಎಲ್​ನಲ್ಲಿ ಆಡುವುದು ಉತ್ತಮ ಎಂದು ನಾವು ಭಾವಿಸಿದ್ದೇವೆಂದು ಖಾಸಗಿ ಕ್ರೀಡಾ ವೆನ್​ಸೈಟ್​ಗೆ ಮಾಹಿತಿ ನೀಡಿದ್ದಾರೆ.

ಅವರಿಗೆ ಐಪಿಎಲ್​ನಲ್ಲಿ ಆಡಲು ಎನ್​ಒಸಿ ನೀಡಿದ್ದೇವೆ. ಹೀಗಾಗಿ ಮುಂಬರುವ ಲಂಕಾ ವಿರುದ್ಧ ಟೆಸ್ಟ್​​ನಲ್ಲಿ ಭಾಗಿಯಾಗುವುದಿಲ್ಲ. ಐಪಿಎಲ್​ನಂತಹ ದೊಡ್ಡ ಲೀಗ್​ನಲ್ಲಿ ಆಡಿ, ಉತ್ತಮ ಅನುಭವ ಪಡೆದುಕೊಳ್ಳುವುದು ಸೂಕ್ತ ಎಂದು ನಾವು ಭಾವಿಸಿದ್ದೇವೆ ಎಂದು ತಿಳಿಸಿದ್ದಾರೆ. ಕಳೆದ ಸಲ ನಡೆದಿದ್ದ ಐಪಿಎಲ್​​ ವೇಳೆ ಬಿಸಿಬಿ ಮುಸ್ತುಫಿಜುರ್​ಗೆ ಎನ್​​​ಒಸಿ ನೀಡಲು ನಿರಾಕರಣೆ ಮಾಡಿತ್ತು.

ABOUT THE AUTHOR

...view details