ಡಾಕಾ:ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಬೇಡಿಕೆಯಿಟ್ಟು ಕಳೆದ ವಾರ ಬಾಂಗ್ಲಾದೇಶ ಕ್ರಿಕೆಟಿಗರು ನಡೆಸಿದ್ದ ಪ್ರತಿಭಟನೆಗೆ ಬಿಸಿಬಿ ಸ್ಪಂದಿಸಿದ್ದು ಪ್ರಥಮ ದರ್ಜೆ ಕ್ರಿಕೆಟ್ ವೇತನವನ್ನು ದ್ವಿಗುಣಗೊಳಿಸಿದೆ.
ಡೊಮೆಸ್ಟಿಕ್ ಲೀಗ್ನಲ್ಲಿ ಪಾಲ್ಗೊಳ್ಳುವ ಆಟಗಾರರಿಗೆ ಪಂದ್ಯವೊಂದಕ್ಕೆ ಈ ಮೊದಲು 35000 ಟಾಕ(29 ಸಾವಿರ ರೂ) ನೀಡಲಾಗುತ್ತಿತ್ತು. ಪ್ರತಿಭಟನೆಯ ನಂತರ 4 ದಿನಗಳ ಪ್ರಥಮ ದರ್ಜೆ ಪಂದ್ಯಕ್ಕೆ 60,000 ಟಾಕ(50 ಸಾವಿರ) ಕ್ಕೆ ಏರಿಸಿ ಬಿಸಿಬಿ ಆದೇಶ ಹೊರಡಿಸಿದೆ.
ಎಲ್ಲಾ ರೀತಿಯ ಕ್ರಿಕೆಟ್ ನಿಲ್ಲಿಸಿ ಮೂರು ದಿನಗಳ ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಬಿಸಿಬಿ ಕ್ರಿಕೆಟಿಗರ ಬೇಡಿಕೆಗಳಿಗೆ ಮಣಿದು ಈ ಮಹತ್ತರ ಬದಲಾವಣೆ ತಂದಿದೆ. ಸಂಬಳ ಹೆಚ್ಚಿಸುವುದರ ಜೊತೆಗೆ ಇತರೆ ವೆಚ್ಚಗಳನ್ನೂ ಏರಿಸಲಾಗಿದೆ. ಇನ್ನು ದ್ವಿತೀಯ ಹಂತದ ಸ್ಪರ್ಧೆಗಳಲ್ಲಿ ಭಾಗವಹಿಸುವ ಕ್ರಿಕೆಟಿಗರ ಸಂಬಳ 50,000 ಟಾಕಗಳಿಗೆ ಹೆಚ್ಚಳವಾಗಿದೆ.