ಕರ್ನಾಟಕ

karnataka

ETV Bharat / sports

ಬಾಂಗ್ಲಾ ಕ್ರಿಕೆಟ್ ಬೋರ್ಡ್​​ನಿಂದ ಮ್ಯಾಚ್​​ ಫಿಕ್ಸಿಂಗ್​ಗೆ ಬೆಂಬಲ..? ಶಾಕಿಂಗ್​ ಹೇಳಿಕೆ! - ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್​ ಮಾಜಿ ಅರಧ್ಯಕ್ಷ

ಬಾಂಗ್ಲಾದೇಶದ ಕ್ರಿಕೆಟ್​ ಆಟಗಾರರ ಪ್ರತಿಭಟನೆಯ ಸಮಯದಲ್ಲಿ ಕ್ರಿಕೆಟ್​ ಬೋರ್ಡ್​ನ ಮಾಜಿ ಅಧ್ಯಕ್ಷರು ಒಂದು ಶಾಕಿಂಗ್​ ಹೇಳಿಕೆ ಕೊಟ್ಟಿದ್ದಾರೆ.

ಬಾಂಗ್ಲಾ ಕ್ರಿಕೆಟ್ ಬೋರ್ಡ್

By

Published : Oct 23, 2019, 9:16 PM IST

ಢಾಕಾ: ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್​ ಮ್ಯಾಚ್​ ಫಿಕ್ಸಿಂಗ್​ಗೆ ಬೆಂಬಲ ನೀಡುತ್ತಿದೆ ಎಂದು ಬಾಂಗ್ಲಾ ಕ್ರಿಕೆಟ್ ಬೋರ್ಡ್​ನ ಮಾಜಿ ಅಧ್ಯಕ್ಷ ಸಬಿರ್ ಹೊಸೈನ್ ಚೌಧ್ರಿ ಶಾಕಿಂಗ್ ಹೇಳಿಕೆ ಕೊಟ್ಟಿದ್ದಾರೆ.

ಬಾಂಗ್ಲಾ ಕ್ರಿಕೆಟ್​ ಆಟಗಾರರ ಹೋರಾಟಕ್ಕೆ ಬೆಂಬಲ ನೀಡಿ ಟ್ವೀಟ್​ ಮಾಡಿರುವ ಹೊಸೈನ್ ಚೌಧ್ರಿ, ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್​, ಮ್ಯಾಚ್​ ಫಿಕ್ಸಿಂಗ್​ ಮತ್ತು ಭ್ರಷ್ಟಾಚಾರವನ್ನ ಬೆಂಬಲಿಸುತ್ತಿರುವ ಪ್ರಪಂಚದ ಏಕೈಕ ಬೋರ್ಡ್​ ಎಂದಿದ್ದಾರೆ.

ಈ ವಿಚಾರದ ಬಗ್ಗೆ ನಾನು ಹಲವು ಬಾರಿ ಮಾತನಾಡಿದ್ದೆ. ಆದ್ರೆ ಈ ವಿಚಾರವನ್ನ ಬಯಲಿಗೆಳೆದ ಕ್ರಿಕೆಟ್​ ಆಟಗಾರ ಶಕಿಬ್ ಅಲ್ ಹಸನ್ ಧೈರ್ಯಕ್ಕೆ ಧನ್ಯವಾದಗಳು ಎಂದು ಟ್ಟಿಟ್ಟರ್​ನಲ್ಲಿ ತಿಳಿಸಿದ್ದಾರೆ. ಆಟಗಾರರ ಪ್ರತಿಭಟನೆಯ ಸಮಯದಲ್ಲಿ ಮಾಜಿ ಅಧ್ಯಕ್ಷರೇ ಇಂತಹ ಹೇಳಿಕೆ ನೀಡಿರೋದು ಹಲವು ಚರ್ಚೆಗಳನ್ನ ಹುಟ್ಟುಹಾಕಿದೆ.

ಬಾಂಗ್ಲಾ ಕ್ರಿಕೆಟ್​ ಬೋರ್ಡ್​ ವಿರುದ್ಧ ಸಮರ ಸಾರಿರುವ ಆಟಗಾರರು, ಹನ್ನೊಂದು ಅಂಶಗಳ ಬೇಡಿಕೆ ಈಡೇರಿಸುವವರೆಗೆ ಯಾವುದೇ ಕ್ರಿಕೆಟ್​ ಚಟುವಟಿಕೆಗಳಲ್ಲೂ ತಾವು ಭಾಗಿಯಾಗುವುದಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಟಿ-20 ಸರಣಿ ಅನುಮಾನ ಎಂದೇ ಹೇಳಲಾಗುತ್ತಿದೆ.

ABOUT THE AUTHOR

...view details