ಕರ್ನಾಟಕ

karnataka

ETV Bharat / sports

ಭಾರತ - ಆಸ್ಟ್ರೇಲಿಯಾ ಟೆಸ್ಟ್ ಸರಣಿ: ಅಭ್ಯಾಸ ಪಂದ್ಯಗಳಿಗೆ ಟೆಸ್ಟ್ ಸ್ಟಾರ್​ಗಳನ್ನು ಆಯ್ಕೆ ಮಾಡಿದ ಆಸೀಸ್ - ಭಾರತ ಆಸ್ಟ್ರೇಲಿಯಾ ಅಭ್ಯಾಸ ಪಂದ್ಯ

ಕೋವಿಡ್-19 ಕಾರಣದಿಂದ ಘೋಷಿಸಿದ ಲಾಕ್​ಡೌನ್​ನಿಂದಾಗಿ ಹೆಚ್ಚಿನ ಆಟಗಾರರು ಸೀಮಿತ ಓವರ್​ ಕ್ರಿಕೆಟ್ ಆಡಿದ್ದು, ಇದೇ ಕಾರಣದಿಂದಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಅನೇಕ ಟೆಸ್ಟ್ ಆಟಗಾರರನ್ನು ಅಭ್ಯಾಸ ಪಂದ್ಯದಲ್ಲೆ ಕಣಕ್ಕಿಳಿಸಲಿದೆ.

AUS vs IND
ಭಾರತ - ಆಸ್ಟ್ರೇಲಿಯಾ ಟೆಸ್ಟ್ ಸರಣಿ

By

Published : Nov 13, 2020, 10:45 AM IST

ಹೈದರಾಬಾದ್: ಮುಂದಿನ ತಿಂಗಳ ಆರಂಭದಲ್ಲಿ ನಡೆಯಲಿರುವ ಟೆಸ್ಟ್ ಸರಣಿಗೆ ಮುಂಚಿತವಾಗಿ ಭಾರತ ವಿರುದ್ಧ ಮೂರು ದಿನಗಳ ಅಭ್ಯಾಸ ಪಂದ್ಯವನ್ನು ಆಡುವ ಆಸ್ಟ್ರೇಲಿಯಾ ಎ ತಂಡದ ಭಾಗವಾಗಿ ಕ್ರಿಕೆಟ್ ಆಸ್ಟ್ರೇಲಿಯಾ, ಟೆಸ್ಟ್ ತಂಡದ ಒಂಬತ್ತು ಸದಸ್ಯರನ್ನು ಹೆಸರಿಸಿದೆ.

ಟೆಸ್ಟ್ ಸರಣಿಯು ಡಿಸೆಂಬರ್ 17 ರಿಂದ ಪ್ರಾರಂಭವಾಗಲಿದ್ದು, ಟೆಸ್ಟ್ ತಂಡದಲ್ಲಿ ಬಹುಪಾಲು ಆಟಗಾರರು ಪ್ರವಾಸಿ ಭಾರತೀಯರ ವಿರುದ್ಧ ನಡೆಯಲಿರುವ ಅಭ್ಯಾಸ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ.

ಆಸ್ಟ್ರೇಲಿಯಾ ಎ ತಂಡದಲ್ಲಿ ಟೆಸ್ಟ್ ನಾಯಕ ಟಿಮ್ ಪೈನ್​ ಕೂಡ ಸೇರಿದ್ದಾರೆ. ಪೈನ್ ಜೊತೆಗೆ, ಟೆಸ್ಟ್ ತಂಡದ ಸದಸ್ಯರಾದ ಸೀನ್ ಅಬಾಟ್, ಜೋ ಬರ್ನ್ಸ್, ಕ್ಯಾಮೆರಾನ್ ಗ್ರೀನ್, ಟ್ರಾವಿಸ್ ಹೆಡ್, ಮೈಕೆಲ್ ನೇಸರ್, ಜೇಮ್ಸ್ ಪ್ಯಾಟಿನ್ಸನ್, ವಿಲ್ ಪುಕೊವ್​ಸ್ಕಿ ಮತ್ತು ಮಿಚೆಲ್ ಸ್ವೆಪ್ಸನ್ ಸಹ ಆಸ್ಟ್ರೇಲಿಯಾ ಎ ತಂಡದ ಭಾಗವಾಗಿದ್ದಾರೆ.

ಆಸ್ಟ್ರೇಲಿಯಾ ಎ ತಂಡ ಪ್ರವಾಸಿ ಭಾರತ ವಿರುದ್ಧದ ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿದ್ದು, ಎರಡೂ ಸಿಡ್ನಿಯಲ್ಲಿ ನಡೆಯಲಿವೆ. ಮೊದಲನೆ ಪಂದ್ಯ ಡಿ.6 ರಿಂದ ಡಿ.8 ರವರೆಗೆ ಡ್ರಮ್ಮೊಯ್ನ್ ಓವಲ್‌ನಲ್ಲಿ ನಡೆದ್ರೆ, ಎರಡನೇ ಪಂದ್ಯ ಡಿ.11 ರಿಂದ ಡಿ.13 ರವರೆಗೆ ಎಸ್‌ಸಿಜಿಯಲ್ಲಿ ನಡೆಯಲಿದೆ.

ಸಾಂಪ್ರದಾಯಿಕವಾಗಿ, ಕ್ರಿಕೆಟ್ ಆಸ್ಟ್ರೇಲಿಯಾ ಯಾವಾಗಲೂ ಅಭ್ಯಾಸಕ್ಕಾಗಿ ದುರ್ಬಲ ತಂಡಗಳನ್ನು ಕಣಕ್ಕಿಳಿಸುತ್ತದೆ. 2018-19ರಲ್ಲಿ ಭಾರತದ ಕೊನೆಯ ಪ್ರವಾಸದ ವೇಳೆ ಆಸ್ಟ್ರೇಲಿಯಾ ಎ ತಂಡದಲ್ಲಿ ಯಾವೊಬ್ಬ ಪ್ರಮುಖ ಆಟಗಾರರು ಕೂಡ ಇರಲಿಲ್ಲ.

ಆದರೆ, ಕೋವಿಡ್-19 ಕಾರಣದಿಂದ ಘೋಷಿಸಿದ ಲಾಕ್​ಡೌನ್​ನಿಂದಾಗಿ ಹೆಚ್ಚಿನ ಆಟಗಾರರು ಸೀಮಿತ ಓವರ್​ ಕ್ರಿಕೆಟ್ ಆಡಿದ್ದು, ಇದೇ ಕಾರಣದಿಂದಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಅನೇಕ ಟೆಸ್ಟ್ ಆಟಗಾರರನ್ನು ಅಭ್ಯಾಸ ಪಂದ್ಯದಲ್ಲೇ ಕಣಕ್ಕಿಳಿಸಿ ಕಂಡಿಷನ್​ಗೆ ಹೊಂದಿಕೊಳ್ಳಲು ಸಹಾಯಕವಾಗುವ ನಿಟ್ಟಿನಲ್ಲಿ ಈ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗಿದೆ.

ABOUT THE AUTHOR

...view details