ಬ್ರಿಸ್ಬೇನ್(ಆಸ್ಟ್ರೇಲಿಯಾ):ರವಿಚಂದ್ರನ್ ಅಶ್ವಿನ್ ಅವರು ಟೆಸ್ಟ್ ಕ್ರಿಕೆಟ್ನಗಲಿ 800 ವಿಕೆಟ್ ಪಡೆಯಬಹುದೆಂದು ಶ್ರೀಲಂಕಾದ ಮಾಜಿ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಅಭಿಪ್ರಾಯಪಟ್ಟಿದ್ದಾರೆ, ಆದರೆ, ನಾಥನ್ ಲಿಯಾನ್ ಈ ಸಾಧನೆ ಮಾಡಲು ಸಾಕಷ್ಟು ಸಾಮರ್ಥ್ಯವಿಲ್ಲ ಎಂದಿದ್ದಾರೆ.
ಪ್ರಸ್ತುತ, ಟೆಸ್ಟ್ ಕ್ರಿಕೆಟ್‌ನಲ್ಲಿ ಲಿಯಾನ್ 99 ಪಂದ್ಯಗಳಿಂದ 396 ವಿಕೆಟ್‌ಗಳನ್ನು ಪಡೆದಿದ್ದರೆ, ಅಶ್ವಿನ್ 74 ಪಂದ್ಯಗಳಿಂದ 377 ವಿಕೆಟ್ ಪಡೆದಿದ್ದಾರೆ. ಅಶ್ವಿನ್ 25.33 ರ ಸರಾಸರಿಯಲ್ಲಿ ತಮ್ಮ ವಿಕೆಟ್‌ಗಳನ್ನು ಪಡೆದಿದ್ದರೆ, ಲಿಯಾನ್ 31.98 ರ ಸರಾಸರಿಯಲ್ಲಿ ವಿಕೆಟ್ ಪಡೆದಿದ್ದಾರೆ.
"ಅಶ್ವಿನ್ ಅವರು ಉತ್ತಮ ಬೌಲರ್ ಆಗಿರುವುದರಿಂದ ಅವರಿಗೆ ಅವಕಾಶವಿದೆ. ಅದನ್ನು ಹೊರತುಪಡಿಸಿ, ಯಾವುದೇ ಕಿರಿಯ ಬೌಲರ್ 800 ವಿಕೆಟ್ ಪಡೆಯುತ್ತಾರೆ ಎಂದು ನಾನು ಭಾವಿಸುವುದಿಲ್ಲ. ಬಹುಶಃ ನಾಥನ್ ಲಿಯಾನ್ ಅದನ್ನು ತಲುಪುವಷ್ಟು ಉತ್ತಮವಾಗಿಲ್ಲ. ಅವರು 400 ವಿಕೆಟ್ಗೆ ಹತ್ತಿರದಲ್ಲಿದ್ದಾರೆ. ಆದರೆ, ಈ ಮೈಲಿಗಲ್ಲು ತಲುಪಲು ಇನ್ನು ಹೆಚ್ಚು ಹೆಚ್ಚು ಪಂದ್ಯಗಳನ್ನು ಆಡಬೇಕಿದೆ ಎಂದು ಮುತ್ತಯ್ಯ ಮುರಳೀಧರನ್ ಹೇಳಿದ್ದಾರೆ.
ಆಫ್ ಸ್ಪಿನ್ನರ್ ಲಿಯಾನ್ ಶುಕ್ರವಾರ ತಮ್ಮ 100 ನೇ ಟೆಸ್ಟ್ ಪಂದ್ಯವನ್ನು ಆಡಲಿದ್ದಾರೆ. ಲಿಯಾನ್ ಬಗ್ಗೆ ಮಾತನಾಡುತ್ತಾ, ಆಸ್ಟ್ರೇಲಿಯಾದ ನಾಯಕ ಟಿಮ್ ಪೈನ್ "ಲಿಯಾನ್ ಸರಿಯಾಗಿ ಬೌಲ್ ಮಾಡಿದ್ದಾರೆ, ನಾನು ಅಡಿಲೇಡ್ಲ್ಲಿ ಯೋಚಿಸಿದೆ, ಅವರು ಸಾಕಷ್ಟು ಅವಕಾಶಗಳನ್ನು ಸೃಷ್ಟಿಸಿದ್ರು, ಆದರೆ ಅವೆಲ್ಲ ನಮ್ಮ ಕೈ ಸೇರಲಿಲ್ಲ. ಅವರು 100ನೇ ಟೆಸ್ಟ್ ಪಂದ್ಯವನ್ನ ಆಡಲಿದ್ದಾರೆ ಇದು ಸುಲಭವಲ್ಲ" ಎಂದಿದ್ದರು.