ಮುಂಬೈ:ಟೀಂ ಇಂಡಿಯಾ ಏಕದಿನ ಹಾಗೂ ಟಿ-20 ಕ್ರಿಕೆಟ್ನ ಆರಂಭಿಕನಾಗಿ ಮಿಂಚಿರುವ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ನಲ್ಲಿ ಹೇಳಿಕೊಳ್ಳುವಂಥ ಪ್ರದರ್ಶನವನ್ನೇನೂ ನೀಡಿಲ್ಲ. ಜತೆಗೆ ಹಿಟ್ಮ್ಯಾನ್ ತನ್ನ ಟೆಸ್ಟ್ ಕ್ರಿಕೆಟ್ ಕೆರಿಯರ್ನಲ್ಲಿ ಇಲ್ಲಿಯವರೆಗೆ ಓಪನರ್ ಆಗಿ ಕಣಕ್ಕಿಳಿದಿಲ್ಲ. ಆದರೆ ದಕ್ಷಿಣ ಆಫ್ರಿಕಾ ವಿರುದ್ಧ ಆರಂಭಗೊಳ್ಳಲಿರುವ ಟೆಸ್ಟ್ ಸರಣಿಯಲ್ಲಿ ಅಂಥದ್ದೊಂದು ಅವಕಾಶ ಅವರನ್ನು ಹುಡುಕಿಕೊಂಡು ಬಂದಿದೆ.
ವೆಸ್ಟ್ ಇಂಡೀಸ್ ವಿರುದ್ಧ ನಡೆದ ಟೆಸ್ಟ್ ಕ್ರಿಕೆಟ್ನಲ್ಲಿ ಕನ್ನಡಿಗ ಕೆಎಲ್ ರಾಹುಲ್ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಹೀಗಾಗಿ ಅವರನ್ನ ಓಪನರ್ ಸ್ಥಾನದಿಂದ ಕೆಳಗಿಳಿಸಿ, ಶರ್ಮಾಗೆ ಚಾನ್ಸ್ ನೀಡುವ ಕುರಿತು ಈಗಾಗಲೇ ಆಯ್ಕೆ ಸಮಿತಿ ತಿರ್ಮಾನ ಕೈಗೊಂಡಿದೆ. ಅದೇ ರೀತಿ ಹರಿಣಗಳ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪ್ರಯೋಗ ಮಾಡಲು ಮುಂದಾಗಿದೆ.