ಕರ್ನಾಟಕ

karnataka

ETV Bharat / sports

ಟೆಸ್ಟ್​​ ಕ್ರಿಕೆಟ್​​ನಲ್ಲಿ ಆಫ್ಘನ್​ ಅದ್ಭುತ ಸಾಧನೆ... ಆಸ್ಟ್ರೇಲಿಯಾ ಬಳಿಕ ಈ ದಾಖಲೆ ಬರೆದ ಏಕೈಕ ತಂಡ! - ಆಸ್ಟ್ರೇಲಿಯಾ ಕ್ರಿಕೆಟ್​

ಬಾಂಗ್ಲಾ ವಿರುದ್ಧ ನಡೆದ ಏಕೈಕ ಟೆಸ್ಟ್​​ ಪಂದ್ಯದಲ್ಲಿ ಆಫ್ಘಾನಿಸ್ತಾನ ಕ್ರಿಕೆಟ್​ ತಂಡ ಗೆಲುವು ಸಾಧಿಸುವ ಮೂಲಕ ದಾಖಲೆ ನಿರ್ಮಾಣ ಮಾಡಿದ್ದು, ಆಸ್ಟ್ರೇಲಿಯಾ ಬಳಿಕ ಇಂತಹ ಸಾಧನೆ ಮಾಡಿರುವ ಏಕೈಕ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಬಾಂಗ್ಲಾ ವಿರುದ್ಧ ಗೆದ್ದ ಆಫ್ಘಾನ್​

By

Published : Sep 9, 2019, 8:05 PM IST

ಚತ್ತೋಗ್ರಾಮ್​​(ಬಾಂಗ್ಲಾದೇಶ): ಆತಿಥೇಯ ಬಾಂಗ್ಲಾ ವಿರುದ್ಧ ನಡೆದ ಟೆಸ್ಟ್​​ ಪಂದ್ಯದಲ್ಲಿ ಆಫ್ಘಾನಿಸ್ತಾನ ಬರೋಬ್ಬರಿ 224ರನ್​ಗಳ ಗೆಲುವು ಕಂಡಿದ್ದು, ಇದೇ ಮೊದಲ ಬಾರಿಗೆ ಇಷ್ಟೊಂದು ರನ್​ಗಳ ಅಂತರದಿಂದ ಟೆಸ್ಟ್​ ಕ್ರಿಕೆಟ್​​ನಲ್ಲಿ ಜಯ ಸಾಧಿಸಿದೆ.

ಈ ಗೆಲುವಿನೊಂದಿಗೆ ಆಫ್ಘಾನಿಸ್ತಾನ ದಾಖಲೆ ನಿರ್ಮಿಸಿದ್ದು, ಆಸ್ಟ್ರೇಲಿಯಾ ತಂಡದ ಬಳಿಕ ತಾನು ಆಡಿರುವ ಮೂರು ಟೆಸ್ಟ್​​ ಪಂದ್ಯಗಳಲ್ಲಿ ಗೆಲುವು, ಸೋಲು ಹಾಗೂ ಗೆಲುವು ದಾಖಲು ಮಾಡಿರುವ ಸಾಧನೆ ಮಾಡಿದೆ.

ಬಾಂಗ್ಲಾ ವಿರುದ್ಧ ಗೆದ್ದ ಆಫ್ಘಾನ್​

ಆಸ್ಟ್ರೇಲಿಯಾ 1877ರಿಂದ 1879ರವರೆಗೆ ತಾನು ಆಡಿದ್ದ ಮೊದಲ ಮೂರು ಟೆಸ್ಟ್​​ ಪಂದ್ಯಗಳಲ್ಲಿ ಗೆಲುವು,ಸೋಲು ಹಾಗೂ ಗೆಲುವು ದಾಖಲು ಮಾಡಿತ್ತು. ಇದಾದ ಬಳಿಕ ಬೇರೆ ಯಾವುದೇ ಕ್ರಿಕೆಟ್​​ ಟೀಂ ಟೆಸ್ಟ್​​ನಲ್ಲಿ ಈ ಸಾಧನೆ ಮಾಡಿರಲಿಲ್ಲ. ಆದರೆ ಇದೀಗ 2018ರಿಂದ 2019ರಲ್ಲಿ ಈ ದಾಖಲೆ ಬರೆದಿದೆ. ಟೀಂ ಇಂಡಿಯಾ ವಿರುದ್ಧ ಮೊದಲ ಟೆಸ್ಟ್​​​ ಪಂದ್ಯವನ್ನಾಡಿದ್ದ ಆಫ್ಘಾನ್​​ 262ರನ್​ಗಳ ಸೋಲು ಕಂಡಿತ್ತು. ಇದಾದ ಬಳಿಕ ಐರ್ಲೆಂಡ್​ ವಿರುದ್ಧ 7ವಿಕೆಟ್​ಗಳ ಗೆಲುವು ಹಾಗೂ ಇದೀಗ ಬಾಂಗ್ಲಾ ವಿರುದ್ಧ 224ರನ್​ಗಳ ಗೆಲುವು ದಾಖಲು ಮಾಡಿದೆ.

ಬಾಂಗ್ಲಾ ವಿರುದ್ಧ ಜಹೂರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ನಡೆದ ಏಕೈಕ ಟೆಸ್ಟ್​ ಪಂದ್ಯದಲ್ಲಿ ಗೆಲುವಿಗೆ 398ರನ್​ಗಳ ಟಾರ್ಗೆಟ್​ ನೀಡಿದ್ದ ಆಫ್ಘಾನಿಸ್ತಾನ, ಬಾಂಗ್ಲಾ ತಂಡವನ್ನ ಎರಡನೇ ಇನ್ನಿಂಗ್ಸ್​​ನಲ್ಲಿ ಕೇವಲ 173ರನ್​ಗಳಿಗೆ ಆಲೌಟ್​ ಮಾಡಿ, ಜಯ ಸಾಧಿಸಿದೆ.

ABOUT THE AUTHOR

...view details