ಹೈದರಾಬಾದ್: 14ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆಗೆ ದಿನಗಣನೇ ಆರಂಭಗೊಂಡಿದ್ದು, ಫೆ. 18ರಂದು ಮುಂಬೈನಲ್ಲಿ ವಿವಿಧ ಪ್ರಾಂಚೈಸಿಗಳು ತಮಗೆ ಅವಶ್ಯವಿರುವ ಪ್ಲೇಯರ್ಸ್ ಖರೀದಿ ಮಾಡಲಿದ್ದಾರೆ.
ಈ ಹಿಂದಿನ ಆವೃತ್ತಿಯಲ್ಲಿ ಪಂಜಾಬ್ ತಂಡದಲ್ಲಿದ್ದ ಮ್ಯಾಕ್ಸ್ವೆಲ್ಗೆ ಪ್ರಾಂಚೈಸಿ ಕೈಬಿಟ್ಟಿರುವ ಕಾರಣ ಈ ಸಲದ ಆವೃತ್ತಿಯಲ್ಲಿ ಹೊಸದೊಂದು ತಂಡ ಸೇರಿಕೊಳ್ಳುವ ಸಾಧ್ಯತೆ ಇದೆ. ಇದರ ಮಧ್ಯೆ ಆಸ್ಟ್ರೇಲಿಯಾ ಆಲ್ರೌಂಡರ್ ಮ್ಯಾಕ್ಸ್ವೆಲ್ ತಾವು ಯಾವ ತಂಡದ ಪರ ಆಡಲು ಇಷ್ಟಪಡುತ್ತಾರೆಂಬ ಇಂಗಿತ ಹೊರಹಾಕಿದ್ದಾರೆ.
ಆರ್ಸಿಬಿ ಪ್ಲೇಯರ್ಸ್ ಎಬಿಡಿ- ವಿರಾಟ್ ಕೊಹ್ಲಿ ಓದಿ: ಕಿಂಗ್ಸ್ ಇಲೆವೆನ್ ಪಂಜಾಬ್ ಇನ್ಮುಂದೆ ಪಂಜಾಬ್ ಕಿಂಗ್ಸ್: ಪ್ರಶಸ್ತಿಗೆ ಮುತ್ತಿಕ್ಕಲು ಹೆಸರು ಚೇಂಜ್!?
ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ತಮ್ಮ ಆರಾಧ್ಯ ಎಂದು ಹೇಳಿಕೊಂಡಿರುವ ಮ್ಯಾಕ್ಸ್ವೆಲ್ ಈ ಮೂಲಕ ಆರ್ಸಿಬಿ ಸೇರಿಕೊಳ್ಳುವ ಇಂಗಿತ ಹೊರಹಾಕಿದ್ದಾರೆ. 2 ಕೋಟಿ ರೂ. ಮೂಲ ಬೆಲೆ ಘೋಷಣೆ ಮಾಡಿಕೊಂಡಿರುವ ಮ್ಯಾಕ್ಸ್ವೆಲ್ ಮೇಲೆ ಅನೇಕ ಪ್ರಾಂಚೈಸಿಗಳು ಕಣ್ಣಿಟ್ಟಿದ್ದು, ಆರ್ಸಿಬಿ ಕೂಡ ಆಲ್ರೌಂಡರ್ ಖರೀದಿ ಮಾಡುವ ಸಾಧ್ಯತೆ ಇದೆ.
ಇದೇ ವಿಚಾರವಾಗಿ ಮಾತನಾಡಿರುವ ಮ್ಯಾಕ್ಸ್ವೆಲ್, ಎಬಿ ಡಿವಿಲಿಯರ್ಸ್ ನನ್ನ ಆರಾಧ್ಯೆಗಳಲ್ಲಿ ಒಬ್ಬರಾಗಿದ್ದು, ಅವರ ಆಟವನ್ನ ನಾನು ಯಾವಾಗಲೂ ನೋಡುತ್ತಿರುತ್ತೇನೆ. ಅವರೊಂದಿಗೆ ಆಡುವುದು ನಿಜಕ್ಕೂ ಅದ್ಭುತವಾಗಿರುತ್ತದೆ ಎಂದಿದ್ದಾರೆ. ಇದರ ಜತೆಗೆ ವಿರಾಟ್ ಕೊಹ್ಲಿ ಜೊತೆ ಬ್ಯಾಟ್ ಮಾಡುವುದು ನಿಜಕ್ಕೂ ಆನಂದ ಪಡುತ್ತೇನೆ ಎಂದು ಹೇಳಿಕೊಂಡಿದ್ದಾರೆ.