ಮೆಲ್ಬೋರ್ನ್:ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಈಗಾಗಲೇ ನಿವೃತ್ತಿ ಘೋಷಿಸಿರುವ ದಕ್ಷಿಣ ಆಫ್ರಿಕಾದ ಪ್ರತಿಭಾವಂತ ಬ್ಯಾಟ್ಸ್ಮನ್ ಎಬಿಡಿ ವಿಲಿಯರ್ಸ್ ಮುಂಬರುವ ಟಿ-20 ವಿಶ್ವಕಪ್ ವೇಳೆಗೆ ತಂಡಕ್ಕೆ ಮರಳಲಿದ್ದಾರೆ ಎಂಬ ಮಾತು ಕೇಳಿಬರ್ತಿದೆ.
ಟಿ-20 ವಿಶ್ವಕಪ್ಗೆ 'ಮಿ.320' ಕಮ್ಬ್ಯಾಕ್? ಬಿಗ್ಬ್ಯಾಶ್ನಲ್ಲಿ ಸಿಕ್ತು ಸುಳಿವು! - ಎಬಿ ಡಿವಿಲಿಯರ್ಸ್
ಮೈದಾನದಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಕ್ರೀಡಾಭಿಮಾನಿಗಳ ಹೃದಯದಲ್ಲಿ ನೆಲೆಸಿರುವ ಎಬಿಡಿ ಮತ್ತೊಮ್ಮೆ ಅಂತಾರಾಷ್ಟ್ರೀಯ ತಂಡಕ್ಕೆ ಕಮ್ಬ್ಯಾಕ್ ಮಾಡುವುದು ಬಹುತೇಕ ಖಚಿತವಾಗಿದೆ.
ಈಗಾಗಲೇ ಬಿಗ್ಬ್ಯಾಶ್ ಟೂರ್ನಿಯ ಮೊದಲ ಪಂದ್ಯದಲ್ಲೇ ಆಕರ್ಷಕ ಪ್ರದರ್ಶನ ನೀಡಿರುವ ಎಬಿಡಿ, ತಾವು ತಂಡಕ್ಕೆ ಮರಳುವ ಸುಳಿವು ನೀಡಿದ್ದಾರೆ. ನಿವೃತ್ತಿಯಿಂದ ವಾಪಸಾಗಿ ತಂಡ ಸೇರಿಕೊಂಡು ಹೊಸ ಸಹಾಯಕ ಸಿಬ್ಬಂದಿ ಹಾಗೂ ಕ್ಯಾಪ್ಟನ್ ಜತೆ ಮೈದಾನ ಹಂಚಿಕೊಳ್ಳಲು ಖುಷಿ ಇದೆ ಎಂದು ಅವರು ತಿಳಿಸಿದ್ದಾರೆ.
ಕಳೆದ ಮಾರ್ಚ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಎಬಿಡಿ ವಿಲಿಯರ್ಸ್ ವಿದಾಯ ಘೋಷಿಸಿದ್ದರು. ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್, ಬಿಗ್ಬ್ಯಾಶ್ ಟಿ-20 ಲೀಗ್ಗಳಲ್ಲಿ ಅವರು ಆಡುತ್ತಿದ್ದಾರೆ. ಇನ್ನು ಅವರನ್ನು ತಂಡಕ್ಕೆ ವಾಪಸ್ ಕರೆತರಬೇಕು ಎಂಬುದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಆಸೆಯೂ ಆಗಿದೆ. ಈ ನಿಟ್ಟಿನಲ್ಲಿ ಕಳೆದ 3-4 ತಿಂಗಳಿಂದ ಪ್ರಯತ್ನ ನಡೆಯುತ್ತಿದ್ದು, ಕ್ಯಾಪ್ಟನ್ ಡುಪ್ಲೆಸಿಸ್ ಕೂಡಾ ಈ ಬಗ್ಗೆ ಮಾತನಾಡಿದ್ದರು.