ದುಬೈ:ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅಬ್ಬರಿಸುತ್ತಿರುವ ಎಬಿ ಡಿವಿಲಿಯರ್ಸ್ ಸದ್ಯ ಮುಂದಿನ ಪಂದ್ಯದಲ್ಲಿ ಹೊಸ ಗೆಟಪ್ನೊಂದಿಗೆ ಅವರು ಕಣಕ್ಕಿಳಿಯಲಿದ್ದಾರೆ. ಫ್ರೆಂಚ್ ಬಿಯರ್ಡ್ನಲ್ಲಿ ಮುಂದಿನ ಪಂದ್ಯದಲ್ಲಿ ಅವರು ಕಣಕ್ಕಿಳಿಯಲಿದ್ದಾರೆ. ಬ್ರೇಕ್ ದಿ ಬಿಯರ್ಡ್ ಚಾಲೆಂಜ್ ಇದಾಗಿದ್ದು, ಐಪಿಎಲ್ನಲ್ಲಿ ಇದೀಗ ಈ ಚಾಲೆಂಜ್ ಆರಂಭಗೊಂಡಿದೆ.
ಹೊಸ ಸ್ಟೈಲ್ನೊಂದಿಗೆ ಮೈದಾನಕ್ಕಿಳಿಯಲಿದ್ದಾರೆ ಎಬಿಡಿ: ಇದು ಮಿ.360 ಹೊಸ ಗೆಟಪ್! - ಐಪಿಎಲ್ನಲ್ಲಿ ಬ್ರೇಕ್ ದಿ ಬಿಯರ್ಡ್ ಚಾಲೆಂಜ್
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಬ್ರೇಕ್ ದಿ ಬಿಯರ್ಡ್ ಚಾಲೆಂಜ್ ಆರಂಭಗೊಂಡಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎಬಿ ಡಿವಿಲಿಯರ್ಸ್ ಸದ್ಯ ಈ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 33 ಎಸೆತಗಳಲ್ಲಿ 73ರನ್ಗಳಿಕೆ ಮಾಡಿದ್ದ ಎಬಿ ಡಿವಿಲಿಯರ್ಸ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಇದಾದ ಬಳಿಕ ಟ್ವಿಟರ್ನಲ್ಲಿ ನ್ಯೂ ಲುಕ್ನಲ್ಲಿರುವ ವಿಡಿಯೋ ಶೇರ್ ಮಾಡಿದ್ದಾರೆ.
ಈಗಾಗಲೇ ಮುಂಬೈ ಇಂಡಿಯನ್ಸ್ನ ಕಿರನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯಾ ಹಾಗೂ ಕೆಕೆಆರ್ ಕ್ಯಾಪ್ಟನ್ ದಿನೇಶ್ ಕಾರ್ತಿಕ್ ಈ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಟ್ವಿಟರ್ನಲ್ಲಿ ಈ ವಿಡಿಯೋ ಹರಿಬಿಟ್ಟಿರುವ ಮಿ.360 ಈ ಚಾಲೆಂಜ್ ಯಾರಿಗೂ ಹಾಕಿಲ್ಲ. ಆದರೆ, ಈ ವಿಡಿಯೋ ಫಾಫು ಡುಪ್ಲೇಸಿ ಸೇರಿ ಐಪಿಎಲ್ನ ಕೆಲ ಸ್ನೇಹಿತರಿಗೆ ಟ್ಯಾಗ್ ಮಾಡಿದ್ದಾರೆ.