ನವದೆಹಲಿ :2020ರಲ್ಲಿ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್ 5 ಆಟಗಾರರಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನೂ ಹಿಂದಿಕ್ಕಿದ ಕನ್ನಡಿಗ ಕೆ ಎಲ್ ರಾಹುಲ್ 5ನೇ ಸ್ಥಾನ ಪಡೆದುಕೊಂಡಿದ್ದಾರೆ.
2020ರಲ್ಲಿ ಒಂಬತ್ತು ಏಕದಿನ ಪಂದ್ಯ ಆಡಿರುವ ರಾಹುಲ್ 443 ರನ್ ಗಳಿಸಿ ಐದನೇ ಸ್ಥಾನದಲ್ಲಿದ್ದಾರೆ. ಆಶ್ಚರ್ಯಕರ ಸಂಗತಿಯೆಂದ್ರೆ ವಿರಾಟ್ ಕೊಹ್ಲಿ ಟಾಪ್ 5 ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ಈ ವರ್ಷ ಒಂದೇ ಒಂದು ಶತಕ ಸಿಡಿಸದ ವಿರಾಟ್ 431 ರನ್ ಗಳಿಸಿ 6ನೇ ಸ್ಥಾನದಲ್ಲಿದ್ದಾರೆ.
ಆಸ್ಟ್ರೇಲಿಯಾ ಏಕದಿನ ತಂಡದ ನಾಯಕ ಆ್ಯರೋನ್ ಫಿಂಚ್ 13 ಪಂದ್ಯಗಳಿಂದ 673 ರನ್ ಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ. 10 ಪಂದ್ಯಗಳಿಂದ 568 ರನ್ ಗಳಿಸಿರುವ ಸ್ಟೀವ್ ಸ್ಮಿತ್ 2ನೇ ಸ್ಥಾನದಲ್ಲಿದ್ರೆ, 473 ರನ್ ಗಳಿಸಿರುವ ಮಾರ್ನಸ್ ಲಾಬುಶೇನ್ 3ನೇ ಸ್ಥಾನದಲ್ಲಿದ್ದಾರೆ.